ವ್ಯಾಲೆಂಟೈನ್ಸ್ ಡೇಗೆ ಮುನ್ನ ಬ್ರೇಕ್ ಅಪ್ ಸಾಧ್ಯತೆ, ಈ ರಾಶಿಯವರ ಮೇಲೆ ಅಪಾಯದ ತೂಗುಗತ್ತಿ

Published : Jan 29, 2025, 01:11 PM ISTUpdated : Jan 29, 2025, 01:35 PM IST
 ವ್ಯಾಲೆಂಟೈನ್ಸ್ ಡೇಗೆ ಮುನ್ನ ಬ್ರೇಕ್ ಅಪ್ ಸಾಧ್ಯತೆ, ಈ ರಾಶಿಯವರ ಮೇಲೆ ಅಪಾಯದ ತೂಗುಗತ್ತಿ

ಸಾರಾಂಶ

ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೂ ಮುನ್ನ ಮೇಷ, ಸಿಂಹ, ತುಲಾ, ವೃಶ್ಚಿಕ ಮತ್ತು ಮೀನ ರಾಶಿಯವರ ಪ್ರೇಮ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಸಂಗಾತಿಯೊಂದಿಗೆ ಸಂಯಮದಿಂದ ವರ್ತಿಸಿ, ಅನಗತ್ಯ ವಿವಾದಗಳಿಂದ ದೂರವಿರಿ. ಸಂಬಂಧ ಉಳಿಸಿಕೊಳ್ಳಲು ಹೆಚ್ಚು ಸಂವಹನ ಮತ್ತು ಗೌರವ ಅಗತ್ಯ. ತಜ್ಞರ ಪ್ರಕಾರ, ಈ ರಾಶಿಯವರು ಜಾಗರೂಕರಾಗಿರಬೇಕು.

2025ರ ಮೊದಲ ತಿಂಗಳು ಜನವರಿ ಮುಗಿತಾ ಇದೆ. ಇನ್ನೇನು ಎರಡು ದಿನಕ್ಕೆ ಫೆಬ್ರವರಿ ಅಂದ್ರೆ ಪ್ರೇಮಿಗಳ ತಿಂಗಳು (Valentines month) ಶುರುವಾಗ್ತಿದೆ. ಜನವರಿ ಡಿವೋರ್ಸ್ (Divorce) ತಿಂಗಳಾದ್ರೆ ಫೆಬ್ರವರಿ ಲವ್ವರ್ಸ್ ಮಂತ್ ಅಂತಾನೇ ಪ್ರಸಿದ್ಧಿ ಪಡೆದಿದೆ. ಅನೇಕರು ಈಗಾಗಲೇ ಫೆಬ್ರವರಿ 14, ಪ್ರೇಮಿಗಳ ದಿನಕ್ಕೆ ಕಾದು ಕುಳಿತಿದ್ದಾರೆ. ಅದಕ್ಕೆ ತಯಾರಿ ಶುರುವಾಗಿದೆ. ಕೆಲವರು ಅದೃಷ್ಟ ಪರೀಕ್ಷೆಗೆ ಇಳಿಯುವ ಸಿದ್ಧತೆ ಮಾಡಿದ್ರೆ ಮತ್ತೆ ಕೆಲವರು ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಖರೀದಿ ಶುರು ಮಾಡಿದ್ದಾರೆ. ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಬೇಕು ಎಂಬ ಪ್ಲಾನ್ ನಲ್ಲಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ಜ್ಯೋತಿಷ್ಯ (Astrology)ದ ಪ್ರಕಾರ, ಈ ಬಾರಿ ಪ್ರೇಮಿಗಳ ದಿನಕ್ಕೆ ಮುನ್ನ, ಕೆಲವು ರಾಶಿಯವರ ಪ್ರೇಮ ಜೀವನ ಅಪಾಯದಲ್ಲಿದೆ. ಫೆಬ್ರವರಿ 14, ಪ್ರೇಮಿಗಳ ದಿನದ ಮೊದಲು, 5 ರಾಶಿ (Zodiac)ಯವರು ಜಾಗರೂಕರಾಗಿರಬೇಕು. ಸಂಬಂಧವನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಈ ಸಮಯದಲ್ಲಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಎಂದು ಜ್ಯೋತಿಷ್ಯ ತಜ್ಞರು ಹೇಳಿದ್ದಾರೆ. ಇಲ್ಲಿ ಯಾವ ರಾಶಿಯವರ ಪ್ರೇಮ ಜೀವನ ಅಪಾಯದಲ್ಲಿದೆ ಎಂಬ ವಿವರವಿದೆ.

ಮೇಷ ರಾಶಿ : ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಜನರು ಫೆಬ್ರವರಿ 14 ರ ಮೊದಲು ಹೆಚ್ಚು ಜಾಗರೂಕರಾಗಿರಬೇಕು.   ಸಂಗಾತಿಯೊಂದಿಗೆ ಸರಿಯಾದ ಸಮನ್ವಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅನಗತ್ಯ ವಿಷಯಗಳಲ್ಲಿ ಸಿಲುಕಿಕೊಳ್ಳಬೇಡಿ. ಸಂಬಂಧದಲ್ಲಿ ಬಿರುಕು ಉಂಟಾಗುವ ಹಂತಕ್ಕೆ ವಿಷಯಗಳು ತೆಗೆದುಕೊಂಡು ಹೋಗ್ಬೇಡಿ. ಹಾಗಾಗಿ ಅನಗತ್ಯ ವಿಷ್ಯಕ್ಕೆ ಗಲಾಟೆ ಮಾಡಿಕೊಳ್ಳುವ ಬದಲು ಮೌನವಾಗಿರುವುದು ಉತ್ತಮ. ಸಂಬಂಧ ಕಾಪಾಡಿಕೊಳ್ಳಲು ಪ್ರಯತ್ನ ಅಗತ್ಯ. ನಿಮ್ಮ ಸಂಗಾತಿಯನ್ನು ಕೇಳದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅವರ ಮಾತಿಗೆ ತಿರುಗಿ ಉತ್ತರ ನೀಡಲು ಹೋಗ್ಬೇಡಿ.

ವ್ಯಾಲೆಂಟೈನ್ಸ್ ದಿನಕ್ಕೆ 8 ಆಕರ್ಷಕ ಕೆಂಪು ಬ್ಲೌಸ್ ವಿನ್ಯಾಸಗಳು ಇಲ್ಲಿವೆ!

 ಸಿಂಹ ರಾಶಿ  : ಇನ್ನು ಸಿಂಹ ರಾಶಿಯವರ ಪ್ರೇಮ ಜೀವನ ಕೂಡ ಅಪಾಯದಲ್ಲಿದೆ. ಒಂದು ಸಣ್ಣ ತಪ್ಪಿನಿಂದ ಸಂಬಂಧ ಮುರಿದುಬೀಳುವ ಸಾಧ್ಯತೆ ಹೆಚ್ಚಿದೆ. ಅನಗತ್ಯ ವಿವಾದಗಳಲ್ಲಿ ಭಾಗಿಯಾಗದಿರಲು ಪ್ರಯತ್ನಿಸಿ. ಪ್ರಣಯ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ. ಸಂಗಾತಿಯ ಮಾತಿಗೆ ಮೊದಲು ಮನ್ನಣೆ ನೀಡುವುದು ಉತ್ತಮ. ಅವರ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿ. ಪ್ರವಾಸ ಅಥವಾ ಕ್ಯಾಂಡಲ್ ಲೈಟ್ ಡಿನ್ನರ್ ಸೇರಿದಂತೆ ನಿಮ್ಮ ಸಂಗಾತಿಯ ಮೆಚ್ಚುಗೆ ಗಳಿಸುವ ಕೆಲಸಗಳನ್ನು ಮಾಡಿ. ಇದು ನಿಮ್ಮಿಬ್ಬರ ಸಂಬಂಧ ಸುಧಾರಿಸಲು ನೆರವಾಗುತ್ತದೆ. 

ತುಲಾ ರಾಶಿ : ಈ ರಾಶಿಯ ಜನರು ಫೆಬ್ರವರಿ 14ರವರೆಗೆ ಹೆಚ್ಚು ಜಾಗರೂಕರಾಗಿರಬೇಕು. ಸಂಗಾತಿ ಜೊತೆ ಸಕಾರಾತ್ಮಕ ಮಾತುಕತೆ ಬಹಳ ಮುಖ್ಯ. ನಿಮ್ಮ ಮಾತು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ಇದೆ.  ಇಬ್ಬರ ಮಧ್ಯೆ ಸಮನ್ವಯತೆ ಅಗತ್ಯ.  ಫೆಬ್ರವರಿ 14ಕ್ಕಿಂತ ಮೊದಲ ಕೆಲ ದಿನಗಳು ಪ್ರೇಮಿಗಳಿಗೆ ಉತ್ತಮವಾಗಿಲ್ಲದ ಕಾರಣ, ಸಂಗಾತಿ  ದೂರವಾಗುವ ಸಾಧ್ಯತೆ ಹೆಚ್ಚಿದೆ.  

ವೃಶ್ಚಿಕ ರಾಶಿ  : ವೃಶ್ಚಿಕ ರಾಶಿಯವರ ಪ್ರೇಮ ಜೀವನವೂ ಉತ್ತಮವಾಗಿರುವುದಿಲ್ಲ. ಸಂಬಂಧಗಳಲ್ಲಿ ಅನಗತ್ಯ ಒತ್ತಡ ಉಂಟಾಗಬಹುದು.  ಸಂಗಾತಿ ಜೊತೆ ಮಾತುಕತೆ ಬಹಳ ಅನಿವಾರ್ಯ. ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಹೆಚ್ಚು ಮಾತನಾಡಿ ಮತ್ತು ಒಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ನಿಮ್ಮ ಸಂಗಾತಿಗೆ ಗೌರವ ನೀಡಿ. 

ಮಹಿಳೆಯರು ರಾತ್ರಿ ಕೂದಲು ಬಾಚಿಕೊಂಡ್ರೆ ಏನಾಗುತ್ತೆ? ಜ್ಯೋತಿಷ್ಯ ಶಾಸ್ತ್ರದಲ್ಲೇನಿದೆ?

ಮೀನ ರಾಶಿ : ಮೀನ ರಾಶಿಯ ಜನರು ಸಹ ಎಚ್ಚರಿಕೆಯಿಂದ ಇರಬೇಕು. ಫೆಬ್ರವರಿ 14 ಕ್ಕಿಂತ ಮೊದಲು ಸಂಗಾತಿ ಜೊತೆ ಜಗಳವಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಅನಗತ್ಯ ವಾದಗಳಲ್ಲಿ ತೊಡಗಬೇಡಿ. ಅವರ ಒಪ್ಪಿಗೆಯಿಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಮಾತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಜಗಳಕ್ಕೆ ಕಾರಣವಾಗುವ ಯಾವುದೇ ಮಾತನ್ನು ಹೇಳಬೇಡಿ.
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ