ಮೀನದಿಂದ ಧನುವರೆಗೆ.. ಈ ನಾಲ್ಕು ರಾಶಿಯವರು ಯಾವತ್ತಿದ್ದರೂ ದಿ ಬೆಸ್ಟ್ ಬ್ರದರ್!

By Suvarna News  |  First Published Jun 1, 2022, 12:23 PM IST

ಅಣ್ಣ ಅಥವಾ ತಮ್ಮ ಯಾರೇ ಇರಲಿ, ಈ ನಾಲ್ಕು ರಾಶಿಗೆ ಸೇರಿದ್ದರೆ ಅವರು ಇತರ ಎಲ್ಲ ರಾಶಿಯವರಿಗಿಂತ ಅತ್ಯುತ್ತಮ ಬ್ರದರ್ ಎನಿಸಿಕೊಳ್ಳುತ್ತಾರೆ. ಇಂಥ ಸಹೋದರನನ್ನು ಪಡೆದ ಬಗ್ಗೆ ಸಹೋದರಿಯಲ್ಲಿ ಹೆಮ್ಮೆ ಇರದೆ ಇರಲು ಸಾಧ್ಯವಿಲ್ಲ. 


ತಾನು ಮಾಡಿದ್ದನ್ನೆಲ್ಲಾ ಛೇಡಿಸೋ, ಕಷ್ಟ ಬಂದಾಗ ಹೆಗಲು ನೀಡೋ, ಸ್ನೇಹಿತನಂತೆ ಸಾಥ್ ನೀಡೋ, ಕೇಳಿದ್ದೆಲ್ಲ ಕೊಡಿಸೋ ಅಣ್ಣ(elder brother) ಬೇಕೆಂದು ಬಹುತೇಕ ಎಲ್ಲ ಹುಡುಗಿಯರಿಗೂ ಆಸೆ ಇರುತ್ತದೆ. ಇನ್ನು ತಮ್ಮ(younger brother)ನಾದರೆ ಅವನನ್ನು ತಮ್ಮ ಮಗುವಿನ ಹಾಗೆ ಭಾವಿಸುತ್ತಾರೆ ಹುಡುಗಿಯರು. ಸಹೋದರಿಯ ಜೊತೆ ಎಷ್ಟೇ ಜಗಳವಾಡಿದರೂ ಅಣ್ಣ ತಮ್ಮಂದಿರು ದೊಡ್ಡವರಾದಂತೆಲ್ಲ ತಮ್ಮ ಸಹೋದರಿಯ ಸಂಪೂರ್ಣ ಕಾವಲಿಗೆ ನಿಲ್ಲುತ್ತಾರೆ, ಅವರ ಒಳಿತಿಗಾಗಿ ಏನು ಬೇಕೆಂದು ನೋಡುತ್ತಾರೆ, ತಂದೆತಾಯಿಯೊಡನೆ ಸಹೋದರಿಯ ಪರ ವಹಿಸುತ್ತಾರೆ.. ತಾವು ಬೈಯಬಹುದು, ಬೇರೆಯವರು ತಮ್ಮ ಸಹೋದರಿ ಬಗ್ಗೆ ಚಕಾರ ಎತ್ತಬಾರದೆಂಬಂತೆ ವರ್ತಿಸುತ್ತಾರೆ. ಸಹೋದರರ ಜೊತೆ ಬೆಳೆಯುವುದೂ ಒಂದು ಅದೃಷ್ಟ(Luck)ವೇ. 

ಎಲ್ಲ ಸಹೋದರರೂ ಒಳ್ಳೆಯವರೇ. ಅದರಲ್ಲೂ ಈ ನಾಲ್ಕು ರಾಶಿ(zodiac sign)ಯ ಸಹೋದರರು ದಿ ಬೆಸ್ಟ್ ಬ್ರದರ್(best brother) ಎನಿಸಿಕೊಳ್ಳುತ್ತಾರೆ. ಅವು ಯಾವ ರಾಶಿಗಳು ನೋಡೋಣ. ನಿಮ್ಮ ಸಹೋದರನೂ ಈ ರಾಶಿಯವನೇ ಆಗಿದ್ದರೆ ಆತನಿಗೆ ಈ ಲೇಖನ ಶೇರ್ ಮಾಡಿ ಸಂತೋಷ ಪಡಿಸಿ. 

Tap to resize

Latest Videos

1. ಮೀನ ರಾಶಿ(Pisces)
ಅವರು ತಮ್ಮ ಒಡಹುಟ್ಟಿದವರನ್ನು ಪೂರ್ಣ ಹೃದಯದಿಂದ ಪ್ರೀತಿಸುವವರು ಮತ್ತು ಕಾಳಜಿ ವಹಿಸುವವರು. ತಂಗಿ ಅಥವಾ ಅಕ್ಕನಿಗೆ ನಿಜ ಪೋಷಕರೇ ಆಗಿ ಬಿಟ್ಟಿರುತ್ತಾರೆ. ಅವರು ಸಹೋದರಿಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ. ಅವರ ಜೀವನದಲ್ಲಿ ನಿಮ್ಮ ಅಸ್ತಿತ್ವವನ್ನು ಗೌರವಿಸುತ್ತಾರೆ. ನೀವು ಅವರೊಂದಿಗಿರುವುದು ಅವರ ಅದೃಷ್ಟ ಎಂಬಂತೆ ವರ್ತಿಸುತ್ತಾರೆ. ನಿಮಗೆ ಎಂದಿಗೇ ಅಗತ್ಯವಿದ್ದರೂ, ನಿಮ್ಮ ಮೀನ ರಾಶಿಯ ಸಹೋದರನು ನೀವು ಕರೆ ಮಾಡುವ ಮೊದಲ ವ್ಯಕ್ತಿಯಾಗಿರುತ್ತಾರೆ. ಏಕೆಂದರೆ, ಕೂಡಲೇ ಸಹಾಯಕ್ಕೆ ಧಾವಿಸುವವ ಆತ.

ಮಾತು, ಮತಿ, ಮಂಥನ.. ಮಿಥುನ ರಾಶಿಯವರ ಐದು ಸಾಮಾನ್ಯ ಸ್ವಭಾವಗಳಿವು

2. ವೃಷಭ ರಾಶಿ(Taurus)
ವೃಷಭ ರಾಶಿಯ ಸಹೋದರನನ್ನು ಹೊಂದಿರುವುದು ಸಹೋದರಿಯ ಅದೃಷ್ಟವೇ ಸರಿ. ನಿಮ್ಮ ಎಂಥದೇ ಕೆಟ್ಟ ಸಮಯದಲ್ಲೂ ಅವರು ಜೊತೆಯಾಗಿ ನಿಲ್ಲುತ್ತಾರೆ. ನಿಮ್ಮ ಪರವಾಗಿ ಹೋರಾಡುತ್ತಾರೆ. ನಿಮ್ಮ ತಪ್ಪೇ ಇದ್ದರೂ ಎಲ್ಲರೆದುರು ಪರ ನಿಂತು, ಒಂಟಿಯಾಗಿರುವಾಗ ತಿಳಿ ಹೇಳುತ್ತಾರೆ. ವೃಷಭ ರಾಶಿಯ ಸಹೋದರರು ವಾದಗಳಲ್ಲಿ ಕೊಂಚ ಮೊಂಡುತನ ತೋರಬಹುದು. ಆದರೆ, ಏನೇ ಆದರೂ ಒಡಹುಟ್ಟಿದವರನ್ನು ಬಿಟ್ಟು ಕೊಡುವವರಲ್ಲ. ಅವರು ತಂಗಿಯ ಪಾಲಿಗೆ ಜಗತ್ತಿನಲ್ಲೇ ಅತ್ಯಂತ ವಿಶ್ವಾಸಾರ್ಹ ಸಹೋದರರಾಗಿ ಉಳಿಯುತ್ತಾರೆ. 

3. ತುಲಾ ರಾಶಿ(Libra)
ತುಲಾ ರಾಶಿಯವರ ಪ್ರೀತಿಯ, ಕಾಳಜಿಯುಳ್ಳ ಮತ್ತು ಸಂಪೂರ್ಣವಾಗಿ ಸಮತೋಲಿತ ಸ್ವಭಾವವು ಅವರನ್ನು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗಿಂತ ಅತ್ಯುತ್ತಮ ಸಹೋದರನ್ನಾಗಿ ಮಾಡುತ್ತದೆ. ನಿಮ್ಮ ಒಡಹುಟ್ಟಿದವರ ಜೊತೆ ನೀವು ಎಷ್ಟೇ ಘರ್ಷಣೆಗೆ ಸಿಲುಕಿದರೂ ತುಲಾ ರಾಶಿಯವರು ಕ್ಷಮಿಸಿ ಬಿಡುತ್ತಾರೆ. ಅವರ ಮೋಡಿ, ಬುದ್ಧಿವಂತಿಕೆ ಮತ್ತು ಹಾಸ್ಯವು ಅವರ ಸುತ್ತಲೂ ಸಂತೋಷವನ್ನು ಹರಡುತ್ತದೆ. ಈ ರಾಶಿಯ ಒಡಹುಟ್ಟಿದವರು ಜೊತೆಗಿದ್ದರೆ ನಗುವಿಗೆ ಕೊರತೆಯೇ ಇರುವುದಿಲ್ಲ. ಅವರಷ್ಟು ಪ್ರೀತಿಸುವವರು ಬೇರೆ ಸಿಗಲಾರರು. 

ಮಾಸ ಭವಿಷ್ಯ: ಜೂನ್‍ನಲ್ಲಿ ನಿಮ್ಮ ರಾಶಿಫಲ ಏನಿರಲಿದೆ? ಅದೃಷ್ಟದ ಸಾಥ್ ಯಾರಿಗಿದೆ?

4. ಧನು ರಾಶಿ(Sagittarius)
ಧನು ರಾಶಿಯ ಸಹೋದರರು ಸೋದರಿಯೊಂದಗೆ ಬಹಳ ಮೋಜಿನಿಂದ ಇರುತ್ತಾರೆ.  ಸಹೋದರಿಯ ರಕ್ಷಕನಾಗಿ ಸದಾ ಕಾವಲಿರುತ್ತಾನೆ. ಆಕೆಗೇನೂ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಾನೆ. ಹಾಗೊಂದು ವೇಳೆ ಅವರ ಕೈ ಮೀರಿ ಸಹೋದರಿ ಸಮಸ್ಯೆಯಲ್ಲಿ ಸಿಲುಕಿದರೆ, ಅದರಿಂದ ಆಕೆಯನ್ನು ಹೊರತರಲು ತನ್ನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡಬಲ್ಲ. ತಂಗಿಗೆ ಸ್ಪೂರ್ತಿಯಾಗುವ ಜೊತೆಗೆ ಧೈರ್ಯ ತುಂಬುವ ಸ್ವಭಾವ ಇವರದು. ಆಕೆಗೆ ಮನೆಯಲ್ಲಿ ಸಮಾನ ಹಕ್ಕು, ಸ್ವಾತಂತ್ರ್ಯ ಸಿಗುವಂತೆ ನೋಡಿಕೊಳ್ಳಬಲ್ಲರು.

click me!