ಆನ್‌ಲೈನ್‌ನಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಜನರ ಬದುಕಲ್ಲಾಡುವವರು ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ.
ಎಲ್ಲರಿಗೂ ತಮಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ, ತಮ್ಮನ್ನು ಇಷ್ಟ ಪಡುವ, ತಮ್ಮ ಮಾತುಗಳನ್ನು ಕೇಳುವವರು ಬೇಕು. ಜೀವನಕ್ಕೊಬ್ಬರು ಪಾರ್ಟ್ನರ್ ಬೇಕು. ಆದರೆ, ಹಲವಾರು ಬಾರಿ ಬಯಸಿದ ಸಮಯದಲ್ಲಿ ಅಂಥವರು ಸಿಗುವುದಿಲ್ಲ. ಇದರಿಂದ ಕೆಲ ರಾಶಿಯವರು ಆನ್‌ಲೈನ್ ಮೊರೆ ಹೋಗುತ್ತಾರೆ. ಹೀಗೆ ಆನ್‌ಲೈನ್ ಮೊರೆ ಹೋದರೆ ಪರವಾಗಿಲ್ಲ, ಆದರೆ ತಮ್ಮ ಮಾನ ಮರ್ಯಾದೆ ಹೋಗಬಾರದೆಂದು ಫೇಕ್ ಪ್ರೊಫೈಲ್ ಮೂಲಕ ಆನ್‌ಲೈನ್‌ನಲ್ಲಿ ವ್ಯವಹರಿಸುತ್ತಾರೆ.
ಆನ್‌ಲೈನ್ ಜಗತ್ತಿನಲ್ಲಿ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಪ್ರೀತಿಯನ್ನು ಹುಡುಕಲು ಹೊರಟವರು, ನಂತರ ಈ ಜಗತ್ತನ್ನು ಬೇಕಾಬಿಟ್ಟಿ ಬಳಸಬಹುದು. ಇಂಥ ಫೇಕ್ ಪ್ರೊಫೈಲ್ ವೀರರು ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ(Zodiac signs) ಸೇರಿರುತ್ತಾರೆ.
ಈ ರಾಶಿಯ ಹೆಣ್ಮಕ್ಕಳನ್ನು ತಂಗಿಯಾಗಿ ಪಡೆಯೋಕೆ ಪುಣ್ಯ ಮಾಡಿರಬೇಕು!
ಕುಂಭ ರಾಶಿ(Aquarius)
ಬಹಳಷ್ಟು ಕುಂಭ ರಾಶಿಯವರು ಔಟ್‌ಗೋಯಿಂಗ್ ಆಗಿದ್ದರೂ ಕೆಲವರು ಸ್ವಭಾವತಃ ನಾಚಿಕೆ ಪಡುವವರೂ ಇದ್ದಾರೆ. ಆದರೆ ಅವರು ಜಗತ್ತಿಗೆ ತೆರೆದುಕೊಳ್ಳಲು ಬಯಸುತ್ತಾರೆ. ಹಾಗೆ ಮಾಡಲು ಕಷ್ಟವೆನಿಸಿದಾಗ ಕುಂಭ ರಾಶಿಯವರು, ತ್ವರಿತ ಪರಿಹಾರವನ್ನು ಆರಿಸಿಕೊಳ್ಳುತ್ತಾರೆ. ಅವರಲ್ಲಿ ಹಲವರು ವಿವಿಧ ಹೆಸರುಗಳಲ್ಲಿ ಆನ್‌ಲೈನ್ ಪ್ರೊಫೈಲ್‌ಗಳನ್ನು ರಚಿಸುತ್ತಾರೆ ಮತ್ತು ಅವರ ನಿಜ ಜೀವನದಲ್ಲಿ ತಿಳಿದಿರುವ ಜನರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾರೆ. ದುರದೃಷ್ಟವಶಾತ್, ಅವರ ಉದ್ದೇಶ ಕೆಟ್ಟದಾಗಿಲ್ಲವಾದರೂ ಇದು ಕೆಲ ಪರಿಚಿತ ವ್ಯಕ್ತಿಗಳಿಗೆ ಎಸಗುವ ವಂಚನೆಯಾಗುತ್ತದೆ. ಅವರ ಜೀವನದಲ್ಲಿ ಆಟವಾಡಿದಂತಾಗುತ್ತದೆ ಎಂಬುದು ಕುಂಭ ರಾಶಿಯವರಿಗೆ ತಡವಾಗಿ ಅರ್ಥವಾಗುತ್ತದೆ.
ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯ ಜನರು ತೀವ್ರವಾದ ಮೂಡ್ ಸ್ವಿಂಗ್‌ಗಳಿಗೆ ಒಳಗಾಗುತ್ತಾರೆ. ಅವರ ಸೂಕ್ಷ್ಮ ಸ್ವಭಾವದಿಂದಾಗಿ ಅವರು ಶಾಲೆಯಲ್ಲಿ ಹೆಚ್ಚಾಗಿ ಬೆದರಿಸಲ್ಪಡುತ್ತಾರೆ. ಎಲ್ಲರೂ ಅವರನ್ನು ಹೆದರಿಸಿ, ಬೆದರಿಸಿ ಮಜಾ ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಅವರ ಬಾಲ್ಯದ ಬಹುಪಾಲು, ಅವರು ಕಡಿಮೆ ಆತ್ಮವಿಸ್ವಾಸ ಹೊಂದಿರುತ್ತಾರೆ. ಹೀಗಾಗಿ ಅವರು ತಾವು ಬೇರೆೊಬ್ಬರಾಗಲು ಬಯಸುತ್ತಾರೆ. ಇದು ನೇರವಾಗಿ ತಮ್ಮನ್ನು ಬದಲಿಸಿಕೊಳ್ಳಲು ಸಾಧ್ಯವಾಗದಾದಾಗ ಫೇಕ್ ಪ್ರೊಫೈಲ್ ಮೂಲಕ ತಮ್ಮನ್ನು ಬೇರೊಬ್ಬರಂತೆ ಬಿಂಬಿಸಿಕೊಳ್ಳುತ್ತಾರೆ. ಯಾರೋ ಗುರುತು ಹಿಡಿವ ಭಯವಿಲ್ಲದೆ ಇನ್ನೊಬ್ಬರ ಜೀವನದಲ್ಲಿ ಹೆಜ್ಜೆ ಹಾಕುತ್ತಾರೆ. ಹೀಗೆ ಗುರುತನ್ನು ಮುಚ್ಚಿಟ್ಟು ವ್ಯವಹರಿಸುವುದು ಕಾನೂನುಬಾಹಿರವೆನಿಸುತ್ತದೆ.
Vastu Tips: ಮೂರು ರೀತಿಯ ದೋಷ ನಿವಾರಿಸುತ್ತೆ ಈ ಮರ!
ಮೀನ ರಾಶಿ(Pisces)
ಮೀನ ರಾಶಿಯವರ ಜೀವನದಲ್ಲಿ ಕೆಲವು ಹಂತದಲ್ಲಿ, ಇನ್ನೊಬ್ಬ ವ್ಯಕ್ತಿಯೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಧೈರ್ಯ ಸಾಲದಾದಾಗ ಇವರು ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡುತ್ತಾರೆ. ಮೀನವು ವಿರುದ್ಧ ಲಿಂಗದವರ ಜೊತೆ ಚಾಟ್ ಮಾಡಲು ನಕಲಿ ಪ್ರೊಫೈಲ್‌ಗಳನ್ನು ಬಳಸುತ್ತದೆ. ಕೆಲವು ಬಾರಿ ಇತರ ವ್ಯಕ್ತಿಗಳನ್ನು ನೋಯಿಸುವ ಉದ್ದೇಶದಿಂದಲೇ ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡುತ್ತಾರೆ. ಒಟ್ನಲ್ಲಿ ಮತ್ತೊಬ್ಬರ ಜೀವನದಲ್ಲಿ ಈ ಮೂಲಕ ಆಟವಾಡುತ್ತಾರೆ.
ಮಕರ ರಾಶಿ(Capricorn)
ದುರುದ್ದೇಶದಿಂದಲೇ ಫೇಕ್ ಪ್ರೊಫೈಲ್ ಹುಟ್ಟು ಹಾಕುವವರು ಮಕರ ರಾಶಿಯವರು. ಈ ಭೂಮಿಯ ಚಿಹ್ನೆಯು ಸಹಿಷ್ಣುವಾಗಿರಬಹುದು, ಆದರೆ ಯಾರಾದರೂ ಜೀವನದಲ್ಲಿ ಅವರನ್ನು ಕೀಳಾಗಿಸಿದಾಗ, ಅವರಿಗೆ ನೋವುಂಟು ಮಾಡುವ ರೀತಿಯಲ್ಲಿ ತಿರುಗೇಟು ಕೊಡಲು ಬಯಸುತ್ತಾರೆ. ಅವರು ತಮ್ಮ ವಿರೋಧಿಗಳನ್ನು ನೇರವಾಗಿ ಎದುರಿಸಲು ಧೈರ್ಯ ಸಾಲದೆ ಕೀಬೋರ್ಡ್ ಯೋಧರಾಗಿ ಬದಲಾಗುತ್ತಾರೆ. ಫೇಕ್ ಪ್ರೊಫೈಲ್ ಮೂಲಕ ಹಣ ಕೀಳುವ ವಂಚಕರೂ ಸಾಮಾನ್ಯವಾಗಿ ಇದೇ ರಾಶಿಯವರು.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.