Guru Purnima 2023ಯಂದು 3 ಶುಭಯೋಗಗಳು; ಹೊಸ ಕಾರ್ಯ ಕೈಗೊಳ್ಳಲು ಶುಭ ದಿನ

By Suvarna NewsFirst Published Jun 25, 2023, 12:27 PM IST
Highlights

ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಗುರು ಬಲಗೊಳ್ಳಲು ಗುರು ಪೂರ್ಣಿಮೆಯಂದು ಗುರುವಿನ ಆರಾಧನೆ ಮಾಡಬೇಕು.

ಪುರಾತನ ಕಾಲದಿಂದಲೂ, ಆಷಾಢ ಪೂರ್ಣಿಮೆಯಂದು ಗುರುವನ್ನು ಪೂಜಿಸುವ ಸಂಪ್ರದಾಯ ನಡೆಯುತ್ತಿದೆ. ಮಹರ್ಷಿ ವೇದವ್ಯಾಸರು ಈ ದಿನ ಜನಿಸಿದ್ದರ ಸ್ಮರಣಾರ್ಥ ಆಚರಣೆ ನಡೆಯುತ್ತದೆ. ಇದೇ ಕಾರಣಕ್ಕೆ ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಶಿಷ್ಯರು ತಮ್ಮ ಗುರುಗಳನ್ನು ಪ್ರಾರ್ಥಿಸುತ್ತಾರೆ ಮತ್ತು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಈ ವರ್ಷ, ಗುರು ಪೂರ್ಣಿಮೆಯಂದು ಅನೇಕ ಮಂಗಳಕರ ಯೋಗಗಳನ್ನು ಕಾಣಬಹುದು. ಈ ಯೋಗದಲ್ಲಿ ಗುರು ದೀಕ್ಷೆಯನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಸಿಗುತ್ತದೆ.

ಈ ವರ್ಷ ಗುರು ಪೂರ್ಣಿಮೆಯನ್ನು 3 ಜುಲೈ 2023, ಸೋಮವಾರ ಆಚರಿಸಲಾಗುತ್ತದೆ. ಗುರುವು ನಮ್ಮ ಜೀವನದ ಮಾರ್ಗದರ್ಶಕ. ಜಾತಕದಲ್ಲಿ ಗುರುವು ಉಚ್ಛ ಮತ್ತು ಬಲವಾದ ಸ್ಥಾನದಲ್ಲಿದ್ದರೆ, ನಾವು ನಮ್ಮ ಕೆಲಸಗಳಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತೇವೆ. ಜಾತಕದಲ್ಲಿ ಗುರು ಬಲಗೊಳ್ಳಲು ಗುರು ಪೂರ್ಣಿಮೆಯಂದು ಗುರುವಿನ ಆರಾಧನೆ ಮಾಡಬೇಕು.

Latest Videos

ಗುರು ಪೂರ್ಣಿಮಾ 2023 ಶುಭ ಯೋಗ
ಗುರು ಪೂರ್ಣಿಮೆಯ ದಿನದಂದು ಬ್ರಹ್ಮಯೋಗ, ಇಂದ್ರ ಯೋಗ ಮತ್ತು ಬುಧಾದಿತ್ಯ ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ಶುಭ ಯೋಗಗಳಲ್ಲಿ ಗುರು ದೀಕ್ಷೆಯನ್ನು ತೆಗೆದುಕೊಳ್ಳುವುದು ಮಂಗಳಕರವಾಗಿರುತ್ತದೆ. ಗುರುವಿನ ಪಾದಪೂಜೆಯಿಂದ ಬಯಸಿದ ಫಲ ಸಿಗುತ್ತದೆ. ಜೀವನದ ತೊಂದರೆಗಳು ದೂರವಾಗುತ್ತವೆ. ಯಶಸ್ಸಿನ ಹಾದಿ ಸುಲಭವಾಗುತ್ತದೆ.

Chanakya Niti: ಯಶಸ್ಸನ್ನು ಪಡೆಯಲು 5 ವಿಷಯಗಳನ್ನು ದೂರ ಮಾಡಿದ್ರೆ ಗುರಿ ಕಡೆ ಗಮನ ತಪ್ಪೋಲ್ಲ!

ಬ್ರಹ್ಮ ಯೋಗ - 02 ಜುಲೈ 2023, ಸಂಜೆ 07.26ರಿಂದ- 03 ಜುಲೈ 2023, ಮಧ್ಯಾಹ್ನ 03.45ರವರೆಗೆ
ಇಂದ್ರ ಯೋಗ - 03 ಜುಲೈ 2023, ಸಂಜೆ 03.45ರಿಂದ - 04 ಜುಲೈ 2023, 11.50ರವರೆಗೆ
ಬುಧಾದಿತ್ಯ ಯೋಗ - ಜೂನ್ 24 ರಂದು ಬುಧನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯ ಈಗಾಗಲೇ ಮಿಥುನ ರಾಶಿಯಲ್ಲಿ ಕುಳಿತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಈ ಗ್ರಹಗಳ ಸಂಯೋಗದಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತಿದೆ.

ಗುರು ಪೂರ್ಣಿಮಾ ಗುರು ದೀಕ್ಷಾ ಮಹತ್ವ
ಗುರು ದೀಕ್ಷೆಯ ಸಮಯದಲ್ಲಿ ಗುರುಗಳು ನಿಮ್ಮ ಕಿವಿಯಲ್ಲಿ ಹೇಳಿದ ರಹಸ್ಯವನ್ನು, ಗುರು ಮಂತ್ರವನ್ನು ನಿಯಮಿತವಾಗಿ 5 ಅಥವಾ 11 ಬಾರಿ ಪಠಿಸಿ ಮತ್ತು ಗುರು ಪೂರ್ಣಿಮೆಯ ದಿನದಂದು ವಿಶೇಷವಾಗಿ ಆ ಮಂತ್ರವನ್ನು ಜಪಿಸಿ. ನೀವು ಯಾರನ್ನೂ ಆಧ್ಯಾತ್ಮಿಕ ಗುರುಗಳನ್ನಾಗಿ ಮಾಡದಿದ್ದರೆ, ಅಂದರೆ ಯಾರಿಂದಲೂ ಗುರು ದೀಕ್ಷೆ, ಮಂತ್ರಗಳನ್ನು ತೆಗೆದುಕೊಳ್ಳದಿದ್ದರೆ, ವಿಷ್ಣುವನ್ನು ನಿಮ್ಮ ಗುರುವೆಂದು ಪರಿಗಣಿಸಿ ಪೂಜಿಸಿ. ಗುರು ಪೂರ್ಣಿಮೆಯ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ.

July 2023 Grah Gochar: ಮೊದಲ ವಾರದಲ್ಲೇ 3 ಗ್ರಹಗಳ ಸಂಕ್ರಮಣ; 6 ರಾಶಿಗಳಿಗೆ ಅದೃಷ್ಟದ ಕಿರಣ

ಗುರು ದೋಷ ಪರಿಹಾರಗಳು
ಗುರು ಪೂರ್ಣಿಮೆಯ ದಿನದಿಂದ ನಿಯಮಿತವಾಗಿ ಗುರು ಗ್ರಹಕ್ಕೆ ಸಂಬಂಧಿಸಿದ 'ಓಂ ಬೃಹಸ್ಪತಯೇ ನಮಃ' ಎಂಬ ಮಂತ್ರವನ್ನು ಪಠಿಸಿ. ಇದರೊಂದಿಗೆ ಜಾತಕನ ಗುರು ದೋಷವು ಕೊನೆಗೊಂಡು ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ.
ನಿಮ್ಮ ಗುರುವನ್ನು ಪೂಜಿಸಿದ ನಂತರ, ಹಳದಿ ಬಟ್ಟೆ, ಬೇಳೆ, ಅರಿಶಿನ, ಚಿನ್ನ, ಕುಂಕುಮ, ಹಿತ್ತಾಳೆ ಪಾತ್ರೆಗಳು ಇತ್ಯಾದಿಗಳನ್ನು ಬಡ ಮತ್ತು ನಿರ್ಗತಿಕರಿಗೆ ದಾನ ಮಾಡಿ. ಹೀಗೆ ಮಾಡುವುದರಿಂದ ಜಾತಕದಿಂದ ಗುರು ದೋಷ ಮುಗಿಯುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!