29ನೇ ಡಿಸೆಂಬರ್ 2024 ರವಿವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
ಮೇಷ (Aries):ನಿಮಗೆ ಇಂದು ಅನೇಕ ಆಸಕ್ತಿದಾಯಕ ಅವಕಾಶಗಳು ಲಭಿಸಲಿವೆ. ಕುಟುಂಬ, ಮದುವೆ ಅಥವಾ ಪ್ರೀತಿಗೆ ಸಂಬಂಧಿಸಿದ ವಿಷಯಗಳು ಚೆನ್ನಾಗಿರಲಿವೆ. ಹಾಗೆಯೇ ನಿಮಗೆ ಸಕಾರಾತ್ಮಕ ಫಲಿತಾಂಶಗಳು ಕೂಡ ಸಿಗಲಿವೆ. ಪ್ರತಿದಿನ ವ್ಯಾಯಾಮ ಮಾಡಿ. ಹಾಗೆಯೇ ನಿಮ್ಮ ನಿತ್ಯದ ದಿನಚರಿಯಲ್ಲಿ ಯೋಗವನ್ನು ಕೂಡ ಸೇರಿಸಿ. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲವೊಂದು ಸಂಗತಿಗಳಿಗೆ ಸಂಬಂಧಿಸಿ ವೈಮನಸ್ಸು ಮೂಡಬಹುದು. ಆದರೆ, ಒಂದು ವೇಳೆ ನೀವು ದೀರ್ಘಕಾಲದ ಸಂಬಂಧದಲ್ಲಿದ್ದರೆ ವಿವಾಹವಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಕೆಲಸದಲ್ಲಿ ಇಂದಿನ ದಿನ ವಿಶೇಷವಾಗಿರಲಿದೆ.
ವೃಷಭ(Taurus):ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಇಂದು ನೀವು ಕಠಿಣ ಪರಿಶ್ರಮ ವಹಿಸೋದು ಅಗತ್ಯ. ನಿಮ್ಮ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿರಲಿದೆ. ನಿಮ್ಮ ತಾಯಿ ನಿಮಗೆ ಇಂದು ಹೆಚ್ಚಿನ ಬೆಂಬಲ ನೀಡುತ್ತಾರೆ. ನಿಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಹಾಗೂ ಆರೋಗ್ಯಕರವಾಗಿರಲು ಇಂದು ನೀವು ಪ್ರಯತ್ನಿಸೋದು ಅಗತ್ಯ. ಇಂದು ಕೆಲಸದೊತ್ತಡದಿಂದ ಸ್ವಲ್ಪ ಮಟ್ಟಿನ ಒತ್ತಡ ನಿಮ್ಮನ್ನು ಕಾಡಬಹುದು. ಒಂದು ವೇಳೆ ನೀವು ಇನ್ನೂ ಒಂಟಿಯಾಗಿದ್ದರೆ, ಹೊಸ ಸಂಬಂಧ ಹೊಂದಲು ಸ್ವಲ್ಪ ಸಮಯ ಕಾಯೋದು ಅಗತ್ಯ.
undefined
ಮಿಥುನ(Gemini): ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ. ಸೌಂದರ್ಯವನ್ನು ಹುಡುಕುವ ಬದಲು ಅದನ್ನು ಎಲ್ಲ ಕಡೆ ಪಸರಿಸಿ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಎಲ್ಲ ಸಮಯದಲ್ಲೂ ನಿಮಗೆ ದೊರೆತ ಪ್ರೀತಿ, ಕಾಳಜಿ ಹಾಗೂ ಬೆಂಬಲಕ್ಕೆ ಕೃತಜ್ಞರಾಗಿರಿ. ಇಂದು ಶಾಂತವಾಗಿರಲು ಪ್ರಯತ್ನಿಸಿ. ಹಾಗೆಯೇ ಯಾರೊಂದಿಗೂ ವಾಗ್ವಾದ ನಡೆಸಬೇಡಿ. ಒಂದು ವೇಳೆ ನೀವು ಇನ್ನೂ ವಿದ್ಯಾರ್ಥಿಯಾಗಿದ್ದರೆ ನಿರೀಕ್ಷಿತ ಫಲಿತಾಂಶ ಪಡೆಯಲು ಕಠಿಣ ಪರಿಶ್ರಮಪಡಿ.
ಕಟಕ(Cancer):ಇಂದು ನೀವು ಜಾಸ್ತಿ ಸಂಪತ್ತು ಗಳಿಸುತ್ತೀರಿ. ನಿಮ್ಮ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ. ಆದರೆ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಇಂದು ನೀವು ಹೊಸ ಜನರನ್ನು ಭೇಟಿ ಮಾಡುತ್ತೀರಿ. ಹಳೆಯ ಪರಿಚಯಸ್ಥರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಇಂದು ಯಾವುದೇ ಪ್ರಮುಖ ದಾಖಲೆಗಳಿಗೆ ಸಹಿ ಹಾಕಬೇಡಿ. ಯಾರನ್ನು ಕೂಡ ನಂಬಬೇಡಿ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಂಗಾತಿ ನೆರವು ನೀಡುತ್ತಾರೆ.
ಸಿಂಹ(Leo):ಸಂಬಂಧವನ್ನು ಉಳಿಸಿಕೊಳ್ಳಲು ನೀವು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಇಂದು ಉತ್ತಮವಾಗಿರಲಿದೆ. ಅನೇಕ ಮೂಲಗಳಿಂದ ನಿಮಗೆ ಇಂದು ಹಣ ಹರಿದು ಬರಲಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಕುಟುಂಬ ಸದಸ್ಯರೊಂದಿಗೆ ನೀವು ಕಿತ್ತಾಡುವ ಸಾಧ್ಯತೆ ಹೆಚ್ಚಿದೆ. ನೀವು ಹಾಗೂ ನಿಮ್ಮ ಸಂಗಾತಿ ನಡುವೆ ವೈಮನಸ್ಸು ಮೂಡಬಹುದು. ಆದರೆ, ಅದು ಆದಷ್ಟು ಶೀಘ್ರದಲ್ಲಿ ಬಗೆಹರಿಯಲಿದೆ. ಕೆಲಸದ ಸ್ಥಳದಲ್ಲಿ ಉದಾಸೀನತೆ ಕಾಡಬಹುದು.
ಕನ್ಯಾ(Virgo):ವೃತ್ತಿಜೀವನ, ಜೀವನಶೈಲಿ ಆಯ್ಕೆಗಳು ಹಾಗೂ ಸಂಪತ್ತಿನ ಸಂಗ್ರಹದಲ್ಲಿ ಇಂದು ಸಾಕಷ್ಟು ಅವಕಾಶಗಳು ಲಭಿಸಲಿವೆ. ಇವೆಲ್ಲವೂ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ನೆರವು ನೀಡುತ್ತದೆ. ಇಂದು ಅನೇಕ ಸಮಸ್ಯೆಗಳು ಎದುರಾಗುವ ಭೀತಿ ಕಾಡಬಹುದು. ಆದರೆ, ಅವೆಲ್ಲವೂ ನಿಮಗೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ. ಒಂದು ವೇಳೆ ನೀವು ಕಾರ್ಪೋರೇಟ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತೀರಿ.
ತುಲಾ(Libra):ಕೆಲವು ಹೊಸ ಜನರೊಂದಿಗೆ ಇಂದು ನೀವು ಉತ್ತಮ ಬಾಂಧವ್ಯವನ್ನು ಹೊಂದುತ್ತೀರಿ. ಇಂದು ನೀವು ಖುಷಿಯಿಂದ ದಿನವನ್ನು ಕಳೆಯುತ್ತೀರಿ. ನೀವು ಉದ್ಯೋಗ ಬದಲಾಯಿಸಲು ಯೋಚನೆ ಮಾಡುತ್ತಿರುತ್ತೀರಿ. ಆದರೆ, ಉದ್ಯೋಗ ಬದಲಾಯಿಸಲು ಇದು ಸೂಕ್ತ ಸಮಯವಲ್ಲ. ನಿಮ್ಮಉದ್ಯೋಗದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ಸ್ವಲ್ಪ ಸಮಯ ತಾಳ್ಮೆಯಿಂದ ಇರೋದು ಉತ್ತಮ. ಇನ್ನು ನಿಮ್ಮ ಸಂಗಾತಿ ನಿಮ್ಮೊಂದಿಗೆ ಕೆಟ್ಟದ್ದಾಗಿ ವರ್ತಿಸಿದರೆ ಮನಸ್ಸು ಕೆಡಿಸಿಕೊಳ್ಳಬೇಡಿ. ಅವರ ಆ ವರ್ತನೆಯ ಹಿಂದೆ ಯಾವುದೋ ಬಲವಾದ ಕಾರಣವಿರಬಹುದು.
ವೃಶ್ಚಿಕ(Scorpio):ಇಂದಿನ ದಿನ ನಿಮಗೆ ಉತ್ತಮವಾಗಿರಲಿದೆ. ದೇವರ ದಯೆ ಹಾಗೂ ಅದೃಷ್ಟದಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಕುಟುಂಬ ಸದಸ್ಯರ ಸಮ್ಮಿಲನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಎಲ್ಲ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿವೆ. ಇದರಿಂದ ನಿಮಗೆ ಹೆಚ್ಚಿನ ಮಾನಸಿಕ ನೆಮ್ಮದಿ, ಸಮೃದ್ಧಿ ಹಾಗೂ ಸಂತೋಷ ಸಿಗಲಿದೆ. ನಿಮ್ಮ ಕೆಲದೊತ್ತಡದಿಂದ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗೋದಿಲ್ಲ.
ಧನುಸ್ಸು(Sagittarius):ಆದಷ್ಟು ಬೇಗ ನಿಮಗೆ ಯಶಸ್ಸು ಸಿಗಲಿದೆ. ನಿಮ್ಮ ಸಮಸ್ಯೆಗಳನ್ನು ನೀವೇ ಬೇಗ ಬಗೆಹರಿಸಿಕೊಳ್ಳುತ್ತೀರಿ. ಉದ್ಯಮ ವಿಸ್ತರಣೆಗೆ ಬಯಸುತ್ತಿದ್ದರೆ ಇದು ಸರಿಯಾದ ಸಮಯ. ಹಣ ಮಾಡಲು ಯಾವುದೇ ಅಡ್ಡ ಮಾರ್ಗಗಳನ್ನು ಹಿಡಿಯಬೇಡಿ. ತುಂಬಾ ದೂರದ ಸ್ಥಳಗಳಿಗೆ ನೀವೇ ವಾಹನ ಚಲಾಯಿಸಿಕೊಂಡು ಹೋಗಬೇಡಿ. ನಿಮ್ಮ ಹಾಗೂ ಸಂಗಾತಿ ನಡುವೆ ವಾಗ್ವಾದ ನಡೆಯಬಹುದು. ನಿಮ್ಮ ಸಂಗಾತಿಗೆ ಏನಾದರೂ ಸರ್ಪ್ರೈಸ್ ನೀಡಿ ಹಾಗೂ ಅವರನ್ನು ಖುಷಿಯಾಗಿಡಿ.
ಮಕರ(Capricorn): ಇಡೀ ದಿನ ನೀವು ಉತ್ಸಾಹದಿಂದ ಕಾಲ ಕಳೆಯುತ್ತೀರಿ. ನಿಮ್ಮ ಸೃಜನಶೀಲ ಯೋಚನೆಗಳು ಹಾಗೂ ಉತ್ಸಾಹ ಸುತ್ತಲಿನ ಜನರಿಗೆ ಪ್ರೋತ್ಸಾಹ ನೀಡಲಿದೆ. ಖರ್ಚಿನ ಮೇಲೆ ಹೆಚ್ಚಿನ ಹಿಡಿತವಿರಲಿ. ಇಲ್ಲವಾದರೆ ಅದು ನಿಮ್ಮ ಉಳಿತಾಯದ ಮೇಲೆ ಪರಿಣಾಮ ಬೀರಲಿದೆ. ಆಸ್ತಿ ಮೇಲೆ ಹೂಡಿಕೆ ಮಾಡುವ ಯೋಚನೆಯಿದ್ದರೆ ಕೈಬಿಡಿ.
ಕುಂಭ(Aquarius):ಇಂದು ನಿಮ್ಮ ಪಾಲಿಗೆ ಶುಭದಿನ. ಎಲ್ಲವೂ ನಿಮಗೆ ಪೂರಕವಾಗಿರಲಿದೆ. ಆದರೆ, ಕುಟುಂಬಕ್ಕೆ ಸಂಬಂಧಿಸಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿ ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ನೀಡುವುದಿಲ್ಲ. ನಿಮ್ಮ ಬಿಡುವಿಲ್ಲದ ಕೆಲಸದಿಂದ ಸ್ವಲ್ಪ ಸಮಯ ವಿರಾಮ ಪಡೆದು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ.
ಮೀನ(Pisces):ಕಠಿಣ ಪರಿಶ್ರಮಪಡುವ ಉದ್ಯೋಗಿ ಎಂಬ ಬಿರುದು ಇಂದು ನಿಮಗೆ ಸಿಗಲಿದೆ. ಹಾಗೆಯೇ ನಿಮ್ಮ ಕಂಪನಿಯ ದೊಡ್ಡ ಶಾಖೆಗೆ ನಿಮಗೆ ಬಡ್ತಿ ಹಾಗೂ ವರ್ಗಾವಣೆ ಸಿಗಲಿದೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿ ಪ್ರೀತಿಪಾತ್ರರೊಂದಿಗೆ ನಿಮಗೆ ಹೆಚ್ಚಿನ ಸಮಯ ಕಳೆಯಲು ಬಿಡುವುದಿಲ್ಲ