ಇಂದು ಸೋಮವಾರ ಯಾವ ರಾಶಿಗೆ ಶುಭ? ಅಶುಭ?

Published : Jan 27, 2025, 07:09 AM IST
ಇಂದು ಸೋಮವಾರ ಯಾವ ರಾಶಿಗೆ ಶುಭ? ಅಶುಭ?

ಸಾರಾಂಶ

27ನೇ ಜನವರಿ 2025 ಸೋಮವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.   

ಮೇಷ(Aries): ನೀವೇ ಸರಿ, ನೀವು ಹೇಳಿದ್ದೇ ನಡೆಯಬೇಕೆಂಬ ಧೋರಣೆ ಬೇಡ. ಕೆಲವೊಮ್ಮೆ ನಿಮ್ಮ ಮಾತುಗಳು ತಪ್ಪಾಗುವ ಕಾರಣಕ್ಕೆ ನಿಮ್ಮ ಘನತೆಯೇನು ಕಡಿಮೆಯಾಗುವುದಿಲ್ಲ. ಇನ್ನೊಬ್ಬರ ಸಲಹೆಗಳನ್ನು ಪರಿಗಣಿಸಿ. ಆರೋಗ್ಯ ಚೆನ್ನಾಗಿರಲಿದೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ವೃಷಭ(Taurus): ಯಾರೋ ಏನೋ ಅಂದುಕೊಳ್ಳುತ್ತಾರೆಂಬ ಭಯದಲ್ಲಿ ಎಲ್ಲರೊಂದಿಗೆ ಸುಲಭವಾಗಿ ಬೆರೆಯಲು ಹಿಂಜರಿಯುವ ಸ್ವಭಾವ ಬಿಡಿ. ಯಾರು ಏನಾದರೂ ಅಂದುಕೊಳ್ಳಲಿ, ನನ್ ಬದುಕು ನನದೇ ಎಂಬ ನಿರ್ಧಾರಕ್ಕೆ ಬನ್ನಿ. ನಿಮಗೆ ಬೇಕಾದುದನ್ನು ಕೇಳಿ ಪಡೆಯಿರಿ. ಭಜರಂಗ ಬಾಣ ಹೇಳಿ. 

ಮಿಥುನ(Gemini): ಜೀವನ ಕಳೆದಂತೆಲ್ಲ ಕೆಲ ಹಳೆಯ ಸ್ನೇಹಗಳು ಕಳಚಿಕೊಳ್ಳುತ್ತವೆ, ಹೊಸತು ಹುಟ್ಟಿಕೊಳ್ಳುತ್ತವೆ. ಹಳತನ್ನು ನೆನೆದು ಕೊರಗುವುದು ಬಿಡಿ, ಬದುಕು ಇರುವುದು ಹೀಗೆಯೇ ಎಂಬ ವಾಸ್ತವ ಅರಿತರೆ ನೆಮ್ಮದಿ. ನೆರವು ಕೇಳಿ ಬಂದವರಿಗೆ ನೋವು ಮಾಡಬೇಡಿ. ದುರ್ಗಾ ಅಷ್ಟೋತ್ತರ ಪಠಿಸಿ. 

ಕಟಕ(Cancer): ಮಕ್ಕಳ ವಿಷಯವಾಗಿ ಅವರಿಂದ ಎಲ್ಲವನ್ನೂ ಬಯಸುವ ನಿರೀಕ್ಷೆ ಬಿಡಿ. ಎಲ್ಲರೂ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಮಕ್ಕಳನ್ನು ಸಹಜ ಸಂತೋಷದಲ್ಲಿ ಬೆಳೆಯಲು ಬಿಡಿ. ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಿ. ಆಂಜನೇಯನಿಗೆ ಕೆಂಪು ಹೂಗಳನ್ನು ಅರ್ಪಿಸಿ. 

ಸಿಂಹ(Leo): ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ಹೊಸ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಹೊಸ ಆದಾಯದ ಮೂಲಗಳು ದಕ್ಕಲಿವೆ. ಸಂಗಾತಿಯ ಪ್ರೀತಿಯನ್ನು ಅನುಭವಿಸಲಿರುವಿರಿ. ರಾಮ ನಾಮ ಜಪ ಮಾಡಿ. 

ಕನ್ಯಾ(Virgo): ಕಷ್ಟ ಪಡುತ್ತೀರಿ ನಿಜ, ಆತುರದಲ್ಲಿ ಫಲಿತಾಂಶ ಬಯಸಲು ಹೋಗಬೇಡಿ. ಯಾವಾಗ ಫಲ ಕೊಡಬೇಕೆಂಬುದನ್ನು ಕಾಲ ನಿರ್ಧಾರ ಮಾಡುತ್ತದೆಂಬುದನ್ನು ಅರಿಯಿರಿ. ಮನೆಯಲ್ಲಿ ಎಲ್ಲರ ಮನಸ್ಸಿಗೆ ಅಗತ್ಯ ಸಮಾಧಾನ ಹೇಳಿ. ಆಂಜನೇಯ ಅಷ್ಟೋತ್ತರ ಶತನಾಮಾವಳಿ ಹೇಳಿ. 

ತುಲಾ(Libra): ಸ್ನೇಹಿತರು ಹೆಚ್ಚಿದ್ದಾರೆ ಎಂಬುದೇನೋ ಸರಿ, ಆದರೆ ಎಂಥ ಸ್ನೇಹಿತರು ಇದ್ದಾರೆ ಎಂದು ಯೋಚಿಸಿದ್ದೀರಾ? ದುಷ್ಟ ಸ್ನೇಹಿತರ ಸಹವಾಸದಿಂದ ದೂರ ಉಳಿಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ದಂಡ ತೆರಬೇಕಾಗುವುದು. ಆಂಜನೇಯ ಭಜಂಗ ಸ್ತೋತ್ರ ಹೇಳಿ. 

ವೃಶ್ಚಿಕ(Scorpio): ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನ ಹರಿಸಿ. ಇದರಿಂದಾಗಿ ಸುತ್ತಲಿರುವವರು ಎಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಒಮ್ಮೆ ಅವಲೋಕಿಸಿ. ಯೋಗ, ಧ್ಯಾನದ ಮೊರೆ ಹೋಗಿ. ಹತ್ತಿರದ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ಧನುಸ್ಸು(Sagittarius): ಸುಮ್ಮನೆ ಕಷ್ಟ ಪಟ್ಟು ದುಡಿಯುತ್ತಾ ಕೂರಬೇಡಿ. ನೀವು ಮಾತನಾಡದೆ ಬರೀ ಕೆಲಸ ಮಾಡುತ್ತಿದ್ದರೆ ನಿಮ್ಮನ್ನು ಬಳಸಿಕೊಳ್ಳುವವರು ಹೆಚ್ಚುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಿ. ಪ್ರಯಾಣ ಯೋಜನೆಗಳನ್ನು ಮಾಡುವಿರಿ. ಆಂಜನೇಯನಿಗೆ ವೀಳ್ಯದ ಹಾರ ಸಮರ್ಪಿಸಿ. 

ಮಕರ(Capricorn): ಹಿಂದೆ ಮಾಡಿದ ತಪ್ಪುಗಳು ಇಂದು ಕಾಡಬಹುದು. ಶತ್ರುಗಳಿಂದ ಕೊಂಚ ಬಾಧೆ ಇರುತ್ತದೆ. ಸಮಾಧಾನದಿಂದ ಮಾತನಾಡಿದರೆ ಅದರಿಂದ ಹೊರ ಬರುವ ಸಾಧ್ಯತೆಗಳು ಗೋಚರವಾಗಲಿವೆ.  ಮನೆದೇವರ ಸ್ಮರಣೆ ಮಾಡಿ. 

ಕುಂಭ(Aquarius): ಇನ್ನೂ ಎಷ್ಟು ಸಮಯ ಎಲ್ಲವನ್ನೂ ನುಂಗಿಕೊಂಡಿರುತ್ತೀರಿ? ನಿಮ್ಮ ಮೌನದಿಂದ ಒಳಿತಾಗಿದ್ದಕ್ಕಿಂತ ನಿಮಗೆ ಕೇಡಾಗುವುದೇ ಹೆಚ್ಚು. ನಿಮಗೇನು ಬೇಕೋ ಅದನ್ನು ಬಾಯಿ ಬಿಟ್ಟು ಕೇಳದ ಹೊರತು ಸಿಗುವುದಿಲ್ಲ, ಕೆಟ್ಟವರಾಗುವ ಭಯ ಬಿಡಿ. ಇಷ್ಟ ದೇವರಲ್ಲಿ ಪ್ರಾರ್ಥಿಸಿ.

ಮೀನ(Pisces): ಆತುರಪಟ್ಟು ಕೆಲವೊಂದು ಮಾತು ಕೊಟ್ಟಿದ್ದೀರಿ. ಈಗದನ್ನು ನಡೆಸಿಕೊಡುವುದು ಕಷ್ಟ ಎಂದಾಗಿದೆ. ಸರಿಯಾದ ಮಾತುಕತೆಯಿಂದ ಬಹುತೇಕ ಸಮಸ್ಯೆಗಳು ಈಡೇರುತ್ತವೆ ಎಂಬುದು ತಿಳಿದು ಮುಂದುವರಿಯಿರಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

PREV
click me!

Recommended Stories

ತಂದೆ ಇರುವಾಗ ಮಗ ಇದನ್ನೆಲ್ಲ ಮಾಡಲೇಬಾರದು!
ಫೆಬ್ರವರಿ 25 ಇಂದು ಕುಂಭ ರಾಶಿಯಲ್ಲಿ ಐದು ಗ್ರಹಗಳ ಸಂಯೋಗ, ಈ ರಾಶಿಗೆ ಬಂಪರ್‌ ಅದೃಷ್ಟ