ರಾಯಚೂರು: ಪೆನ್ಸಿಲ್‌ನಲ್ಲಿ ಅರಳಿದ ಬಾಲಕೃಷ್ಣನ ಸುಂದರ ಕಲಾಕೃತಿ

By Ravi Janekal  |  First Published Aug 26, 2024, 12:05 PM IST

ಸಂತೋಷವು ಹೊರಗೆ ಎಲ್ಲೂ ಇಲ್ಲ, ಅದು ಮನಸ್ಸಿನಲ್ಲಿದೆ ಎಂಬ ಶ್ರೀಕೃಷ್ಣ ಮಾತಿನಂತೆ. ರಾಯಚೂರು ಜಿಲ್ಲೆಯ ನಳಿನಿ ನವೀನ್ ಕುಮಾರ್ ಎಂಬುವವರು ಪೆನ್ಸಿಲ್‌ನಲ್ಲಿ ಬಾಲ ಕೃಷ್ಣನ ಕೆತ್ತನೆ ಮಾಡಿ ಗಮನ ಸೆಳೆದಿದ್ದಾರೆ.


ರಾಯಚೂರು (ಆ.26): 'ಸಂತೋಷವು ಹೊರಗೆ ಎಲ್ಲೂ ಇಲ್ಲ, ಅದು ಮನಸ್ಸಿನಲ್ಲಿದೆ ಎಂಬ ಶ್ರೀಕೃಷ್ಣ ಮಾತಿನಂತೆ. ರಾಯಚೂರು ಜಿಲ್ಲೆಯ ನಳಿನಿ ನವೀನ್ ಕುಮಾರ್ ಎಂಬುವವರು ಪೆನ್ಸಿಲ್‌ನಲ್ಲಿ ಬಾಲ ಕೃಷ್ಣನ ಕೆತ್ತನೆ ಮಾಡಿ ಗಮನ ಸೆಳೆದಿದ್ದಾರೆ.

ಲಿಂಗಸುಗೂರು ಪಟ್ಟಣದ ನಿವಾಸಿಯಾಗಿರುವ ನಳಿನಿ. ಗೃಹಿಣಿಯಾಗಿದ್ದುಕೊಂಡು ಸೂಕ್ಷ್ಮ ಕಲಾಕೃತಿ ರಚಿಸುವುದರಲ್ಲಿ ತೊಂಡಗಿದ್ದಾರೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಒಂದು ಪೆನ್ಸಿಲ್‌ನಲ್ಲಿ 1ಮಿಲಿ ಮೀಟರ್ ಅಗಲ ಹಾಗೂ 1 ಸೆಮೀ ಎತ್ತರದ ಶ್ರೀಕೃಷ್ಣನ ಕಲಾಕೃತಿ ರಚಿಸಿದ್ದಾರೆ. ಇದಕ್ಕಾಗಿ ಅವರು ನಾಲ್ಕು ಗಂಟೆಗಳ ಕಾಲ ಶ್ರೀಕೃಷ್ಟನ ಧ್ಯಾನಿಸುತ್ತಲೇ ಅತ್ಯಂತ ಸುಂದರವಾದ ಬಾಲಕೃಷ್ಣನ ಕಲಾಕೃತಿ ಕೆತ್ತನೆ ಮಾಡಿದ್ದಾರೆ.  ಅಂದಹಾಗೆ ಇದು ನಳಿನಿಯವರ 104ನೇ ಸೂಕ್ಷ್ಮ ಕಲಾಕೃತಿಯಾಗಿದೆ. ಜಗತ್ತಿನಾದ್ಯಂತ ಶ್ರೀಕೃಷ್ಣನನ್ನು ಒಬ್ಬೊಬ್ಬರು ಒಂದೊಂದು ರೀತಿ ಆರಾಧಿಸುತ್ತಾರೆ, ನಳಿನಿ ಸೂಕ್ಷ್ಮ ಕೆತ್ತನೆ ಮಾಡುತ್ತಲೇ ಧ್ಯಾನಿಸಿದಂತೆ ಇಲ್ಲಿದೆ ಕಲಾಕೃತಿ. 

Latest Videos

undefined

ಕೇವಲ ದೇವರೆಂದು ಪೂಜಿಸಬೇಡಿ, ಪರಿಪೂರ್ಣ ಬದುಕಿಗೆ ಆದರ್ಶ ಶ್ರೀಕೃಷ್ಣ

ಇಂದು ಜನ್ಮಾಷ್ಟಮಿ:

 ದೇಶದ್ಯಾಂತ ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ಹಿಂದೂಗಳು ಅತ್ಯಂತ ವೈಭವ, ಉತ್ಸಾಹದಿಂದ ಆಚರಿಸುತ್ತಿದ್ದಾರೆ.  ಶ್ರೀಕೃಷ್ಣ ಜನ್ಮಾಷ್ಟಮಿಯು ಹಿಂದೂಗಳ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಇದು ಒಂದಾಗಿದೆ. ಈ ಹಬ್ಬವು ಶ್ರೀಕೃಷ್ಣನ ಜನ್ಮವನ್ನು ಸೂಚಿಸುತ್ತದೆ. ಈ ವರ್ಷ ಜನ್ಮಾಷ್ಟಮಿ ಆಗಸ್ಟ್ 26 ರಂದು ಬಂದಿದೆ. ಶಾಸ್ತ್ರಗಳ ಪ್ರಕಾರ, ಭಾದ್ರಪದ ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ಸುಮಾರು 12 ಗಂಟೆಗೆ (ಮಧ್ಯರಾತ್ರಿ) ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು ಎಂದು ನಂಬಲಾಗಿದೆ. ಹೀಗಾಗಿ ಭಕ್ತರು ಜನ್ಮಾಷ್ಟಮಿಯ ಇಂದು ಇಡೀದಿನ ಉಪವಾಸವನ್ನು ಆಚರಿಸಿ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ತಮ್ಮ ನೆಚ್ಚಿನ ಆಹಾರ ಪದಾರ್ಥಗಳನ್ನು ತಯಾರಿಸಿ, ಕೃಷ್ಣನ ಮೂರ್ತಿಗಳನ್ನು, ಬಾಲಕೃಷ್ಣನನ್ನ  ಸುಂದರವಾಗಿ ಅಲಂಕರಿಸಿ, ಮಗುವನ್ನು ತಮ್ಮ ಮನೆಗಳಿಗೆ ಆಹ್ವಾನಿಸಲು ಮಗುವಿನ ಪಾದಗಳಿಗೆ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ.

click me!