18 ತಾಸು ಕ್ಯೂ ನಿಂತ್ರೂ ಅಯ್ಯಪ್ಪ ದರ್ಶನವಿಲ್ಲ: ಅವ್ಯವಸ್ಥೆಯಿಂದ ಭಕ್ತರ ಪರದಾಟ, ಕಾಡಿನಲ್ಲೇ ವಾಸ!

By Kannadaprabha News  |  First Published Dec 15, 2023, 11:53 AM IST

ಆನ್‌ಲೈನಲ್ಲಿ ದರ್ಶನಕ್ಕೆ ಬುಕ್‌ ಮಾಡಿಕೊಂಡವರ ಜೊತೆಗೆ ನಿತ್ಯ 5,00,000 ಹೆಚ್ಚುವರಿ ಭಕ್ತರಿಗೂ ಪ್ರವೇಶ ಕಲ್ಪಿಸಲಾಗಿದೆ. ಆದರೆ ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳದ ಕಾರಣ ಈ ಗೊಂದಲ ಎದುರಾಗಿದೆ.


ತಿರುವನಂತಪುರ (ಡಿಸೆಂಬರ್ 15, 2023): ಶಬರಿಮಲೆಯಲ್ಲಿ ಎಲ್ಲಾ ವ್ಯವಸ್ಥೆ ಸೂಕ್ತವಾಗಿದೆ, ಭಕ್ತರಿಗೆ ಏನೂ ತೊಂದರೆ ಇಲ್ಲ ಎಂಬ ಕೇರಳ ಸಿಎಂ ಹೇಳಿಕೆ ಹೊರತಾಗಿಯೂ ಪರಿಸ್ಥಿತಿ ಹಾಗಿಲ್ಲ. ಅವ್ಯವಸ್ಥೆ ಈಗಲೂ ಮುಂದುವರೆದಿದೆ. 18 ಗಂಟೆ ಸರದಿಯಲ್ಲಿ ನಿಂತು ಹೋದರೂ ದೇವರ ಮುಖವನ್ನು ನೋಡುವ ಮುನ್ನವೇ ನಮ್ಮನ್ನು ಎಳೆದು ಹೊರಗೆ ಹಾಕಲಾಗುತ್ತಿದೆ ಎಂದು ಭಕ್ತರು ದೂರಿದ್ದಾರೆ.

ನಮ್ಮ ಬಸ್‌, ನಿಂತ ಜಾಗದಿಂದ ಗಂಟೆಗಟ್ಟಲೆ ಕದಲುತ್ತಿಲ್ಲ. ಭಕ್ತರ ನಿರ್ವಹಣೆಯಲ್ಲಿ ಸರ್ಕಾರ ಪೂರ್ಣ ವಿಫಲವಾಗಿದೆ. ಬೆಟ್ಟದ ಬುಡದವರೆಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲೇ ಮೇಲೇರಬೇಕು. ಅಷ್ಟಾದ ಮೇಲೂ ಸರದಿ ಉದ್ದ ಇರುವ ಕಾರಣ ಮಕ್ಕಳು, ವೃದ್ಧ ಭಕ್ತರು ಕೂಡಾ ಅರಣ್ಯದಲ್ಲಿ ಮಲಗಿ, ಅಲ್ಲೇ ನದಿಯಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ.
ಇಷ್ಟೆಲ್ಲಾ ಆಗಿ ಬೆಟ್ಟ ಏರಿದ ಬಳಿಕ ತಗಡಿನ ಶೆಡ್‌ನೊಳಗೆ ಮತ್ತೆ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕು. ಇಷ್ಟೆಲ್ಲಾ ಸಾಹಸ ಮಾಡಿ ದೇಗುಲದ 18 ಮೆಟ್ಟಿಲೇರಿ ದೇವರ ದರ್ಶನ ಮಾಡೋಣವೆಂದರೆ ಅಲ್ಲಿ ನಿಂತಿರುವ ಭದ್ರತಾ ಸಿಬ್ಬಂದಿ ದೇವರನ್ನೂ ನೋಡಲು ಬಿಡದೆ ಎಳೆದು ಹಾಕುತ್ತಾರೆ ಎಂದು ಹಲವು ಭಕ್ತರು ಗೋಳು ತೋಡಿಕೊಂಡಿದ್ದಾರೆ.

Tap to resize

Latest Videos

310 ಕೋಟಿ ಆದಾಯ ಬಂದರೂ ಅಯ್ಯಪ್ಪನ ಸನ್ನಿಧಿ ಅವ್ಯವಸ್ಥೆ ಆಗರ: ಶಬರಿಮಲೆಯಲ್ಲಿ ನೂಕುನುಗ್ಗಲು, ಪ್ರತಿಭಟನೆ

ಗೊಂದಲ ಏಕೆ?
ಆನ್‌ಲೈನಲ್ಲಿ ದರ್ಶನಕ್ಕೆ ಬುಕ್‌ ಮಾಡಿಕೊಂಡವರ ಜೊತೆಗೆ ನಿತ್ಯ 5,00,000 ಹೆಚ್ಚುವರಿ ಭಕ್ತರಿಗೂ ಪ್ರವೇಶ ಕಲ್ಪಿಸಲಾಗಿದೆ. ಆದರೆ ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳದ ಕಾರಣ ಈ ಗೊಂದಲ ಎದುರಾಗಿದೆ.

ಶಬರಿಮಲೆ ದೇಗುಲದಲ್ಲಿ ಭಕ್ತರ ನೂಕುನುಗ್ಗಲು, ಜನಸಂದಣಿ ನಿಯಂತ್ರಿಸಲು ಕೇರಳ ಸರ್ಕಾರ ವಿಫಲ

click me!