ಇಂದು ಬುಧವಾರ ಯಾವ ರಾಶಿಗೆ ಶುಭ? ಅಶುಭ?

By Chirag Daruwalla  |  First Published Nov 13, 2024, 6:00 AM IST

13ನೇ ನವೆಂಬರ್ 2024 ಬುಧವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.. 
 


ಮೇಷ(Aries): ಅಲ್ಪಶ್ರಮದಿಂದ ಕಾರ್ಯಸಾಧನೆ ಸಾಧ್ಯವಾಗುವುದು. ಹಿತೈಷಿಗಳೊಂದಿಗೆ ಜೀವನದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುವು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಆಂಜನೇಯನಿಗೆ ಕೆಂಪು ವಸ್ತ್ರ ದಾನ ಮಾಡಿ. 

ವೃಷಭ(Taurus): ವ್ಯಾಪಾರದಲ್ಲಿ ಒತ್ತಡವಾದರೂ ಲಾಭವಿರಲಿದೆ. ಕುಟುಂಬ ಸದಸ್ಯರ ನಡುವೆ ಪ್ರಮುಖ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಏರ್ಪಟ್ಟು ಯಾವ ನಿರ್ಧಾರವೂ ತೆಗೆದುಕೊಳ್ಳಲಾಗದೆ ಹೋಗಬಹುದು. ಕ್ರಯ ವಿಕ್ರಯದಿಂದ ನಷ್ಟ. ಪಾರ್ವತಿ ಅಷ್ಟೋತ್ತರ ಪಠಿಸಿ. 

Tap to resize

Latest Videos

undefined

ಮಿಥುನ(Gemini): ಮನಸ್ಸು ಚಂಚಲವಾಗಿರುವುದು. ಅನಗತ್ಯ ಆತಂಕಗಳು ಕಾಡುವುವು. ವಿರೋಧಿಗಳ ಉಪದ್ರವ ಹೆಚ್ಚಬಹುದು. ಈ ಬಾರಿಯೂ ಪ್ರತಿಕ್ರಿಯಿಸದೆ ಉಳಿದರೆ ಮತ್ತಷ್ಟು ರಗಳೆಯಾದೀತು. ಪ್ರಬಲರ ಸಹಾಯ ಪಡೆದು ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಿ. ಆಂಜನೇಯ ಸ್ಮರಣೆ ಮಾಡಿ. 

ಕಟಕ(Cancer): ಆರಂಭಿಸಿದ ಕೆಲಸ ಕಾರ್ಯಗಳು ಅರ್ಧಕ್ಕೇ ನಿಲ್ಲಬಹುದು. ನೋವಿನ ವಿಷಯ ಕೇಳಬೇಕಾಗಿ ಬರಬಹುದು. ನೆಂಟರಿಷ್ಟರ ಸಹಾಯಕ್ಕೆ ಮುನ್ನುಗ್ಗಿ. ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಂಜಿಕೆ ಬೇಡ. ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ. ಲಲಿತಾ ಸಹಸ್ರನಾಮ ಹೇಳಿ.

ಸಿಂಹ(Leo): ಕಿರಿಯರಿಂದ ಗೌರವ ಪ್ರಾಪ್ತಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪ್ರೀತಿ ಪಾತ್ರರು ಮನೆಗೆ ಬರುವುದರಿಂದ ಸಂತಸ ಹೆಚ್ಚುವುದು. ಉತ್ತಮ ಭೋಜನದಿಂದ ಸಂತೋಷ. ಉದ್ಯೋಗದಲ್ಲಿ ಸಮಾಧಾನ ಇರಲಿದೆ. ಬಹು ದಿನಗಳಿಂದ ಕಷ್ಟವೆನಿಸಿದ್ದ ವಿಷಯವೊಂದು ಕರಗಿ ಹೋಗಲಿದೆ. ಸರಸ್ವತಿ ಅಷ್ಟೋತ್ತರ ಪಠಿಸಿ. 

ಕನ್ಯಾ(Virgo): ಹಬ್ಬದ ತಯಾರಿ ಕೆಲಸಗಳಿಂದ ಸ್ತ್ರೀಯರಿಗೆ ಹುರುಪು ದೊರೆಯಲಿದೆ. ಷೇರು ವ್ಯವಹಾರದಲ್ಲಿ ಲಾಭ. ವಾಹನಗಳಿಂದ ತೊಂದರೆ ಸಂಭವ. ಹೋರಾಟಗಳಿಗೆ ಗಣ್ಯರ ಸಹಕಾರ. ಅವಿವಾಹಿತರಿಗೆ ಸಂಬಂಧ ಬರಲಿದೆ, ಉದ್ಯೋಗದಲ್ಲಿ ಪ್ರಗತಿ ಇರಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ತುಲಾ(Libra): ವ್ಯಾಪಾರ ವಹಿವಾಟಿನಲ್ಲಿ ಲಾಭ. ನಿರೀಕ್ಷೆಯನ್ನೇ ಕೈ ಬಿಟ್ಟಿದ್ದ ದೊಡ್ಡ ಮೊತ್ತದ ಸಾಲ ಹಿಂದಿರುಗಿ ಬರಲಿದೆ. ಸರ್ಕಾರಿ ಕೆಲಸಗಳು ಸುಸೂತ್ರವಾಗಿ ಜರುಗಿ ಮನಸ್ಸಿಗೆ ನೆಮ್ಮದಿ. ಉದ್ಯೋಗದಲ್ಲಿ ಹಿರಿಯರಿಂದ ಪ್ರಶಂಸೆ, ಧನಲಾಭ ಇರಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿದ್ಧಿಸಲಿದೆ. ಮಹಾಲಕ್ಷ್ಮೀ ಅಷ್ಟೋತ್ತರ ಹೇಳಿ. 

ವೃಶ್ಚಿಕ(Scorpio): ಉದ್ಯೋಗರಂಗದಲ್ಲಿ ಕೆಲಸವು ಸಿಕ್ಕಾಪಟ್ಟೆ ಹೆಚ್ಚಿ ಆಯಾಸ ಎನಿಸುವುದು. ಕೆಲಸ ಬಿಡುವ ಯೋಚನೆಯೂ ಬರಲಿದೆ. ಸಂಗಾತಿಯೊಂದಿಗೆ ಕಳೆಯಲು ಸಮಯ ಸಿಗದೆ ನಿರಾಶೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಬಹುದು. ತಾಯಿಯ ಆರೋಗ್ಯದ ಕುರಿತು ಚಿಂತಿತರಾಗುವಿರಿ. ಧನ್ವಂತರಿ ಶ್ಲೋಕ ಹೇಳಿಕೊಳ್ಳಿ.

ಧನುಸ್ಸು(Sagittarius): ಗೃಹ ನವೀಕರಣ ಕಾರ್ಯಗಳು ನಡೆಯಲಿವೆ. ಸಾಲ ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ಮನಸ್ಸು ಚಂಚಲವಾಗಿರಲಿದೆ. ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗದಲ್ಲಿ ಎಡವಟ್ಟುಗಳಾಗಬಹುದು. ಒಪ್ಪಂದ ವ್ಯವಹಾರಗಳನ್ನು ಮುಂದೂಡಬೇಕಾಗಬಹುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಮಕರ(Capricorn): ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಹಣದ ಕೊರತೆ ನೀಗಿಸುವ ಅವಕಾಶ ಸಿಗಲಿದೆ. ರಾಜಕೀಯ, ಶೈಕ್ಷಣಿಕ ರಂಗದಲ್ಲಿ ಅವ್ಯವಹಾರಗಳು ಬೆಳಕಿಗೆ ಬಂದು ಅವಮಾನ ಎದುರಿಸಬೇಕಾಗಬಹುದು. ಸಂಗಾತಿಯೊಂದಿಗೆ ಜಗಳವಾಗಬಹುದು. ಹಸುವಿಗೆ ಗ್ರಾಸ ನೀಡಿ. 

ಕುಂಭ(Aquarius): ಯೋಜಿತ ಕಾರ್ಯಗಳು ಕಾರ್ಯ ರೂಪಕ್ಕೆ ಬರಲಿವೆ. ಆರ್ಥಿಕ ವ್ಯಯದಿಂದ ಅಭಿಮಾನ ಭಂಗವಾಗುವುದು. ಕ್ರೀಡಾಳುಗಳಿಗೆ ಸಂತಸ. ಕೌಟುಂಬಿಕವಾಗಿ ಉತ್ತಮ ಸಹಕಾರ ಮುಂದುವರಿಯಲಿದೆ. ಅಸೂಯೆಗೆ ಅಸಡ್ಡೆಯೇ ಮದ್ದು. ರಾಮನಾಮ ಸ್ಮರಣೆ ಮಾಡಿ.

ಮೀನ(Pisces): ಅಸೂಯಾಪರರಿಂದ ಉದ್ಯೋಗದಲ್ಲಿ ಕಿರಿಕಿರಿ. ಸ್ತ್ರೀಯರ ವಿಷಯದಲ್ಲಿ ನಿಮ್ಮ ಅವ್ಯವಹಾರವಿದ್ದರೆ ವಿಷಯ ಹೊರ ಬಂದೀತು. ವ್ಯಾಪಾರ ವ್ಯವಹಾರದಲ್ಲಿ ಲಾಭವಿದ್ದರೂ ಖರ್ಚೂ ಹೆಚ್ಚಲಿದೆ. ಮಕ್ಕಳಲ್ಲಿ ಅನಾರೋಗ್ಯ ಆತಂಕ ತರಬಹುದು. ಹಕ್ಕಿಗಳಿಗೆ ಕಾಳು ನೀಡಿ. 
 

click me!