ಇಂದು ರವಿವಾರ ಯಾರಿಗೆ ಶುಭ? ಯಾರಿಗೆ ಅಶುಭ?

By Chirag Daruwalla  |  First Published Nov 10, 2024, 6:00 AM IST

10ನೇ ನವೆಂಬರ್ 2024 ರವಿವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 


ಮೇಷ (Aries): ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಮಾನಸಿಕ ಅಸ್ಥಿರತೆ ಮತ್ತು ವ್ಯಥೆ ಉಂಟಾಗಬಹುದು. ನಿಮ್ಮ ಧೈರ್ಯ ಕಳೆದುಕೊಳ್ಳಬೇಡಿ. ಉದ್ಯೋಗಿಗಳು ನೀವು ಹುಡುಕದೆ ಇರುವ ಕ್ಷೇತ್ರದಿಂದ ಬರುತ್ತಿರುವ ಅವಕಾಶವನ್ನು ಒಪ್ಪಿಕೊಳ್ಳುವುದರಿಂದ ಒಳಿತಾಗುವುದು. ಶನಿಯನ್ನು ಸ್ಮರಿಸಿ. 

ವೃಷಭ (Taurus): ಸಾಮಾಜಿಕ ಮತ್ತು ಸಾರ್ವಜನಿಕ ವ್ಯವಹಾರಗಳು ಸುಲಭವಾಗಿ ನಡೆಯಲಿವೆ.  ನೂತನ ಗೃಹ ನಿರ್ಮಾಣ ಕಾರ್ಯಗಳು ಅನುಕೂಲಕರ ರೀತಿಯಲ್ಲಿ ಪೂರ್ಣವಾಗಲಿವೆ. ಕೆಲ ವಿಚಾರಗಳಲ್ಲಿ ಈಗಾಗಲೇ ಹೆಜ್ಜೆ ಮುಂದಿರಿಸಿದ್ದೀರಿ. ಅದನ್ನು ಕೈ ಬಿಡುವ ಯೋಚನೆ ಶುರುವಾಗಿರಬಹುದು. ಆದರೆ, ಮುಂದಿಟ್ಟ ಹೆಜ್ಜೆ ಹಿಂತೆಗೆಯಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.

Tap to resize

Latest Videos

undefined

ಮಿಥುನ (Gemini): ಮನೆಯಲ್ಲಿ ಸಂಗಾತಿಯ ಜೊತೆ ಜಗಳವಾಗಬಹುದು. ನಿಮ್ಮ ಮೇಲೆ ಅಸೂಯೆ ಪಡುವ ಜನರ ಬಗ್ಗೆ ಎಚ್ಚರವಿರಲಿ. ಜೊತೆಯಲ್ಲೇ ಇದ್ದು ನಿಮ್ಮ ಪ್ರಗತಿಯನ್ನು ಜೀರ್ಣಿಸಿಕೊಳ್ಳಲಾಗದವರು ಅವರು. ಸ್ವಯಂಕೃತಾಪರಾಧದಿಂದ ಮಾನಸಿಕ ವೇದನೆ ಉಂಟಾಗುವುದು. ಶನಿ ದೇವರಲ್ಲಿ ಸ್ಮರಣೆ ಮಾಡಿ.

ಕಟಕ (Cancer): ಮನೆಗೆ ಬೇಕಾದ ವಸ್ತುಗಳಿಗಾಗಿ ಧನವ್ಯಯ ಮಾಡಲಿರುವಿರಿ. ತಂದೆತಾಯಿಯ ಆರೋಗ್ಯ ಸಮಸ್ಯೆಗಳು ಚಿಂತೆ ತರುವುವು. ಕೆಲಸ ಕಾರ್ಯಗಳಲ್ಲಿ ಸಹೋದರ, ಸಹೋದರಿಯರ ಸಹಕಾರ ಸಿಕ್ಕಿ ಕೊಂಚ ಸಮಾಧಾನ ಸಿಗಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಸಿಂಹ (Leo): ಬಹಳ ದಿನದಿಂದ ಮುಂದೂಡಿಕೊಂಡು ಬಂದ ಕೆಲಸಕ್ಕೆ ಇಂದು ಮುಹೂರ್ತ ಬರಲಿದೆ. ಧೈರ್ಯ, ಪ್ರಯತ್ನ ಬಲ ಮುಂದುವರಿಯಲಿ. ದೇವರ ವಿಚಾರ ನಿರ್ಲಕ್ಷ್ಯ ಮಾಡದಿರಿ. ಮಾತಿನ ಮೇಲೆ ಬಹಳ ನಿಗಾ ಬೇಕು. ಮನೆ ದೇವರಿಗೆ ದೀಪ ಹಚ್ಚಿ.

ಕನ್ಯಾ (Virgo): ಸ್ನೇಹಿತರು ಸರಿಯಾಗಿ ಪ್ರತಿಕ್ರಿಯಿಸದೆ ಮನಸ್ಸಿಗೆ ಕಸಿವಿಸಿಯಾಗುವುದು. ಸೃಜನಶೀಲತೆಯಿಂದ ಹೆಚ್ಚಿನ ಲಾಭ ಗಳಿಸುವಿರಿ. ದಾಂಪತ್ಯದಲ್ಲಿ ಅಸಮಾಧಾನ, ಬಯಕೆಗಳು ಅಪೂರ್ಣವಾಗುತ್ತವೆ, ಮಕ್ಕಳಿಂದ ಕೊರಗು ಹೆಚ್ಚುವುದು. ಅಶ್ವತ್ಥ ಮರಕ್ಕೆ ದೀಪ ಹಚ್ಚಿ. 

ತುಲಾ (Libra): ವಿವಾಹಾದಿ ಮಂಗಳಕಾರ್ಯಕ್ಕೆ ಪುಷ್ಠಿ ಸಿಕ್ಕೀತು. ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ತುಸು ಅಭಿವೃದ್ಧಿ ಇರಲಿದೆ. ಬಾಕಿ ಇರಿಸಿದ ಹಿಂದಿನ ಕೆಲಸಗಳು ಪೂರ್ಣಗೊಂಡಾವು. ಬುದ್ಧಿ ಬಲವಿರಲಿದೆ. ತಂದೆ ತಾಯಿಯ ಆಶೀರ್ವಾದ ಪಡೆಯಿರಿ. 

ವೃಶ್ಚಿಕ (Scorpio): ಹೊಸಬರ ಭೇಟಿಯಿಂದ ಕೆಲಸಗಳು ಈಡೇರಲಿವೆ. ಮಾಡುವ ಕೆಲಸಕ್ಕೆ ಪೋಷಕಾರ ಸಂಪೂರ್ಣ ಸಹಕಾರ ಸಿಗಲಿದೆ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ವಾಹನ ಖರೀದಿ, ಹಾಗೂ ಎಲೆಕ್ಟ್ರಿಕ್ ಉಪಕರಣಗಳ ಖರೀದಿಗೆ ಶುಭ ದಿನ. ಕುಟುಂಬದಲ್ಲಿ ಮಾತುಕತೆಯಿಂದ ಸಂತಸ. 

ಧನುಸ್ಸು (Sagittarius): ಪ್ರತಿಭಾ ರಂಗದಲ್ಲಿರುವವರಿಗೆ ಉತ್ತಮ ಅವಕಾಶಗಳು, ಮೆಚ್ಚುಗೆ ದೊರೆಯುತ್ತದೆ. ಯಾವುದೋ ಭಯ ಕಾಡಬಹುದು. ತಾಯಿಯ ಆರೋಗ್ಯ ಸುಧಾರಿಸಿ ಸಮಾಧಾನವಾಗಲಿದೆ. ಕೆಲಸವು ಪ್ರಗತಿ ಪಥದಲ್ಲಿ ಮುಂದುವರಿಯಲಿದೆ. ಶಿವ ಸ್ಮರಣೆ ಮಾಡಿ. 

ಮಕರ (Capricorn): ಒತ್ತಡವಿದ್ದರೂ ಕೆಲಸಗಳನ್ನು ಸುಲಭವಾಗಿ ನಿಭಾಯಿಸುವಿರಿ. ಕುಟುಂಬದವರ ಮೇಲೆ ಕೋಪತಾಪಗಳನ್ನು ತೋರಬೇಡಿ. ದೂರ ಪ್ರಯಾಣದಿಂದ ಕಾರ್ಯ ಸಿದ್ಧಿ. ಅಂದುಕೊಂಡ ಕೆಲಸಗಳು ಆಗುತ್ತವೆ. ಎಣ್ಣೆ, ಕಪ್ಪು ಧಾನ್ಯ ದಾನ ಮಾಡಿ. 

ಕುಂಭ (Aquarius): ಕಚೇರಿ ಅಸಾಮಾಧಾನಗಳು ನಿಮ್ಮ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಲಿವೆ. ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹಿರಿಯರೊಡನೆ ವಾದ ಮಾಡಲು ಹೋಗಿ ಮನಸ್ಸು ಕೆಡಿಸಿಕೊಳ್ಳಬೇಡಿ. ಆದಷ್ಟು ವಿನಯದಿಂದ ವರ್ತಿಸಿ ಅವರ ಆಶೀರ್ವಾದ ಬಲ ಪಡೆಯಿರಿ. ಕಪ್ಪು ವಸ್ತ್ರ ದಾನ ಮಾಡಿ. 

ಮೀನ (Pisces): ಇಂದು ನೀವು ಗೊಂದಲದಲ್ಲಿರುವ ಸಾಧ್ಯತೆಯಿದೆ. ಕೆಲಸದಲ್ಲಿ ನಿತ್ರಾಣ, ಜಡತ್ವ ಮತ್ತು ನಿರಾಸಕ್ತಿ ಎದುರಾಗಬಹುದು. ಪ್ರೇಮ ವ್ಯವಹಾರಗಳು ಗೊಂದಲದ ಗೂಡಾಗಲಿವೆ. ಬಡವರಿಗೆ ಹಣ ದಾನ ಮಾಡಿ. 
 

click me!