45 ದಿನ ನಡೆಯುವ ಈ ಧಾರ್ಮಿಕ ಹಬ್ಬಕ್ಕೆ ಈಗಾಗಲೇ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿದ್ದು, ಒಟ್ಟು 40 ಕೋಟಿಗೂ ಅಧಿಕ ಜನರು ಭೇಟಿ ನಿರೀಕ್ಷೆ ಇಟುಕೊಳ್ಳಲಾಗಿದೆ. ಈ ಬಾರಿ ಮಹಾಕುಂಭದಲ್ಲಿ ದೇಶದ ವಿವಿಧ ಭಾಗಳ 13 ಅಖಾಡಗಳು ಭಾಗವಹಿಸಿವೆ. ಮೇಳಕ್ಕೆ ಬರುವ ಕೋಟ್ಯಂತರ ಭಕ್ತರಿಗೆ ಕಿಂಚಿತ್ತು ಲೋಪವಾಗಬಾರದು ಎನ್ನುವ ಕಾರಣಕ್ಕೆ ಅಚ್ಚುಕಟ್ಟಾಗಿ ಸರ್ಕಾರ ಕಾರ್ಯಕ್ರಮ ಆಯೋಜಿಸಿದೆ.
ಮಹಾಕುಂಭ ನಗರ(ಜ.14): ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ, ವಿಶ್ವದ ಅತಿ ದೊಡ್ಡ ಧಾರ್ಮಿಕ ಸಮಾಗಮ ಎಂದೇ ಬಿಂಬಿತ ಪವಿತ್ರ ಕುಂಭಮೇಳಕ್ಕೆ ಸೋಮವಾರ ಉತ್ತರಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ಚಾಲನೆ ಸಿಕ್ಕಿದೆ. ಗಂಗೆ, ಯಮನೆ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲೇ ಮೊದಲ ದಿನವೇ 1.5 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದರು.
ಶಂಕ, ಭಜನೆಗಳ ಮೂಲಕ ಪೌಶ ಪೂರ್ಣಿಮಾ' ಕಾರ್ಯಕ್ರಮದೊಂದಿಗೆ ಮೇಳಕ್ಕೆ ಚಾಲನೆ ದೊರಕಿದೆ. 45 ದಿನ ನಡೆಯುವ ಈ ಧಾರ್ಮಿಕ ಹಬ್ಬಕ್ಕೆ ಈಗಾಗಲೇ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿದ್ದು, ಒಟ್ಟು 40 ಕೋಟಿಗೂ ಅಧಿಕ ಜನರು ಭೇಟಿ ನಿರೀಕ್ಷೆ ಇಟುಕೊಳ್ಳಲಾಗಿದೆ. ಈ ಬಾರಿ ಮಹಾಕುಂಭದಲ್ಲಿ ದೇಶದ ವಿವಿಧ ಭಾಗಳ 13 ಅಖಾಡಗಳು ಭಾಗವಹಿಸಿವೆ. ಮೇಳಕ್ಕೆ ಬರುವ ಕೋಟ್ಯಂತರ ಭಕ್ತರಿಗೆ ಕಿಂಚಿತ್ತು ಲೋಪವಾಗಬಾರದು ಎನ್ನುವ ಕಾರಣಕ್ಕೆ ಅಚ್ಚುಕಟ್ಟಾಗಿ ಸರ್ಕಾರ ಕಾರ್ಯಕ್ರಮ ಆಯೋಜಿಸಿದೆ.
ಮಹಾ ಕುಂಭ ಮೇಳದಲ್ಲಿ ಹಿಂದೂ ಹೆಸರಿಟ್ಟುಕೊಂಡ ಸ್ಟೀವ್ ಜಾಬ್ಸ್ ಪತ್ನಿ!
ಇಂದು ಮೊದಲ ಪವಿತ್ರ ಸ್ನಾನ:
ಕುಂಭಮೇಳದ ಮೊದಲ ಶಾಹಿ ಸ್ಥಾನ ಸಂಕ್ರಾತಿ ದಿನ ನಡೆಯಲಿದೆ.
ಬಿಗಿ ಭದ್ರತೆ:
10 ಸಾವಿರ ಎಕರೆಗಳಷ್ಟು ವಿಸ್ತಾರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ಭದ್ರತೆಗೆ ಹೆಚ್ಚಿನಒತ್ತು ನೀಡಲಾಗಿದೆ.ಎಕ್ಯಾಮರಾ, ಡೋನ್ ಸೇರಿ ಒಟ್ಟು 7 ಸ್ತರದ ಭದ್ರತೆಯನ್ನು ಕುಂಭನಗರಕ್ಕೆ ಒದಗಿಸಲಾಗಿದೆ.
ಯೋಗಿ, ಮೋದಿ ಕಟೌಟ್ ಎದುರು ಸೆಲ್ಪಿಗೆ ಜನ ಸಾಲು
ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಭಾರೀ ಬೇಡಿಕೆ ಬಂದಿತ್ತು. ಪವಿತ್ರ ಸಂಗಮದಲ್ಲಿ ಮಿಂದೆದ್ದ ಜನರು ಪ್ರಧಾನಿ ಮೋದಿ, ಸಿಎಂ ಯೋಗಿ ಅವರ ಕಟೌಟ್ ಎದುರು ಫೋಟೋ, ಸಪ್ಪೆತೆಗೆದುಕೊಳ್ಳಲು ಮುಗಿಬಿದ್ದರು. ಅದಕ್ಕಾಗಿಯೇ ಜನರು ಸಾಲುಗಟ್ಟಿನಿಂತು ಇಬ್ಬರ ಕಟ್‌ಟ್ ಎದುರು ಫೋಟೋ ಶಿಕ್ಷಿಸಿಕೊಂಡು ಖುಷಿಪಟ್ಟರು.
ಕುಂಭ ಮೇಳಕ್ಕೆ ಹೊರಟಿದ್ದ ರೈಲಿನ ಮೇಲೆ ಕಲ್ಲೆಸೆತ
ಮುಂಬೈ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಮಹಾರಾಷ್ಟ್ರದ ಜಲಗಾವ್ ರೈಲು ನಿಲ್ದಾಣದ ಬಳಿ ಭಾನುವಾರ ನಡೆದಿದೆ. ಪುಣೆಯಿಂದ ಜಲಗಾವ್ ಮಾರ್ಗವಾಗಿ ಉತ್ತರ ಪ್ರದೇಶದ ಛಪ್ರಾಗೆ ತೆರಳುತ್ತಿದ್ದ ರೈಲು ಜಲಗಾವ್ ನಿಲ್ದಾಣ ದಾಟಿ 3-4 ಕಿ. ಮೀ ಮುಂದೆ ಬಂದಾಗ ದುರ್ಘಟನೆ ಸಂಭವಿಸಿದೆ. ಕಲ್ಲಿನ ಹೊಡೆತಕ್ಕೆ ಬಿ6 ಬೋಗಿಯ ಒಂದು ಕ್ಯಾಬಿನ್‌ನ ಗಾಜು ಪುಡಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಸಂಬಂಧ ರೈಲ್ವೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.
-20 ಡಿಗ್ರಿ ಚಳಿಗೂ ಬಟ್ಟೆ ಹಾಕದ ನಾಗಸಾಧುಗಳ ಶಕ್ತಿ ವೈದ್ಯಕೀಯ ವಿಜ್ಞಾನಕ್ಕೆ ಸವಾಲು
ದೇಶವ್ಯಾಪಿ ದೇಗುಲ ಮೇಲೆ ನಿರ್ಮಿಸಿದ ಮಸೀದಿ ತೆರವಿಗೆ ಅಖಾಡ ಪರಿಷತ್ ಆಗ್ರಹ
ಮಹಾಕುಂಭ ನಗರ: ಪ್ರೀತಿ, ಭೂಮಿ ಸೇರಿದಂತೆ ಇತರ ಧರ್ಮದವರನ್ನು ವಿಭಜಿಸುವ, ಅವಹೇಳನ ಮಾಡುವ ಮುಸ್ಲಿಂ ಜಿಹಾದಿಗಳನ್ನು ಮಹಾಕುಂಭ ಮೇಳದಿಂದ ನಿಷೇಧಿಸಬೇಕು ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಮುಖ್ಯಸ್ಥ ರವೀಂದ್ರ ಪುರಿ ಸೋಮವಾರ ಕರೆ ನೀಡಿದ್ದಾರೆ.
ಹರಿದ್ವಾರದಲ್ಲಿ ಮಾತನಾಡಿದ ಪುರಿ, 'ಕುಂಭಮೇಳಕ್ಕೆ ಮುಸ್ಲಿಮರಿಗೆ ನಾವು ಪ್ರವೇಶ ನಿರ್ಬಂಧಿಸಿಲ್ಲ, ಆದರೆ ಬೇರೆ ಧರ್ಮದವರಿಗೆ ತೆಗಳುವ ಮುಸ್ಲಿಮರಿಗೆ ನಮ್ಮ ನಿರ್ಬಂಧವಿದೆ. ಸಾಮಾನ್ಯ ಮುಸ್ಲಿಮರನ್ನು ನಾವೇಕೆ ವಿರೋಧಿಸೋಣ' ಎಂದು ಪ್ರಶ್ನಿಸಿದ್ದಾರೆ. ದೇಶದಾದ್ಯಂತ ಪುರಾತನ ದೇಗುಲ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಮಸೀದಿಗಳು ತೆರವಾಗಬೇಕು. ಭಾರತದಲ್ಲಿ ಶೇ.80 ಮಸೀದಿಗಳು ದೇಗುಲಗಳ ಮೇಲೆ ನಿರ್ಮಾಣವಾಗಿದೆ. ಇಂತಹ ಮಸೀದಿಗಳ ತೆರವಿಗೆ ಸಾವಿರ ಬಾರಿ ಮುಸ್ಲಿಮರಿಗೆ ಬೇಡಿದ್ದೇವೆ. ಈ ಕುಂಭ ಮೇಳದಿಂದ ಮತ್ತೊಮ್ಮೆ ಮುಸ್ಲಿಮರಿಗೆ ಮನವಿ ಮಾಡು ತ್ತಿದ್ದೇವೆ ಎಂದು ಹೇಳಿದ್ದಾರೆ.