Fact Check| ಕೊರೋನಾ ನಿಗ್ರಹಕ್ಕೆ ಐಎಂಸಿಆರ್‌ ಸಲಹೆ!

By Kannadaprabha News  |  First Published May 14, 2020, 11:55 AM IST

ಲಾಕ್‌ಡೌನ್‌ ಇದ್ದರೂ ಇಲ್ಲದಿದ್ದರೂ ಮುಂದಿನ 6-12 ತಿಂಗಳ ವರೆಗೆ ಕೊರೋನಾ ನಿಯಂತ್ರಣಕ್ಕೆ ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಎಂಬ ಸಂದೇಶ ವೈರಲ್ ಆಗಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯ ಸತ್ಯಾಸತ್ಯತೆ


ನವದೆಹಲಿ(ಮೇ.14): ಲಾಕ್‌ಡೌನ್‌ ಇದ್ದರೂ ಇಲ್ಲದಿದ್ದರೂ ಮುಂದಿನ 6-12 ತಿಂಗಳ ವರೆಗೆ ಕೊರೋನಾ ನಿಯಂತ್ರಣಕ್ಕೆ ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮತ್ತು ದೆಹಲಿಯ ಶ್ರೀ ಗಂಗಾ ರಾಮ್‌ ಆಸ್ಪತ್ರೆ ಹೆಸರಿನಲ್ಲೂ ಇಂಥದ್ದೇ ಸಂದೇಶ ವೈರಲ್‌ ಆಗುತ್ತಿದೆ.

ಅದರಲ್ಲಿ 2 ವರ್ಷಗಳ ಕಾಲ ವಿದೇಶಿ ಪ್ರವಾಸ ಮುಂದೂಡಿ, ಕನಿಷ್ಠ 1 ವರ್ಷದ ವರೆಗೆ ಹೊರಗಿನ ಆಹಾರವನ್ನು ಸೇವಿಸಬೇಡಿ, ಕೆಮ್ಮು, ಜ್ವರ ಇರುವ ವ್ಯಕ್ತಿಯಿಂದ ದೂರ ಇರಿ, ಸಸ್ಯಾಹಾರಿ ಆಹಾರವನ್ನು ಆದ್ಯತೆಯಾಗಿ ಸ್ವೀಕರಿಸಿ, ಹೊರ ಹೋಗುವಾಗ ಬೆಲ್ಟ್‌ , ಉಂಗುರ ಅಥವಾ ಮಣಿಕಟ್ಟಿನ ವಾಚನ್ನ ಬಳಸಬೇಡಿ ಎಂಬಂತಹ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ. ಮತ್ತು ಈ ಎಲ್ಲಾ ಅಂಶಗಳನ್ನು ಐಸಿಎಂಆರ್‌ ದೃಢೀಕರಿಸಿದೆ ಎಂದು ಹೇಳಲಾಗಿದೆ.

Latest Videos

undefined

ಆದರೆ ನಿಜಕ್ಕೂ ಐಸಿಎಂಆರ್‌ ಈ ಮಾರ್ಗಸೂಚಿಗಳನ್ನು ಪ್ರಕಟಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಐಸಿಎಂಆರ್‌ ಹೆಸರಿನ ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಬೂಮ್‌ ಐಸಿಎಂಆರ್‌ ವಕ್ತಾರರ ಬಳಿಯೇ ಈ ಬಗ್ಗೆ ಸ್ಪಷ್ಟನೆ ಪಡೆದಿದ್ದು ಅವರು, ‘ಐಸಿಎಂಆರ್‌ನ ಎಲ್ಲಾ ಅಧಿಕೃತ ಘೋಷಣೆಗಳನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ. ಇಂಥ ಯಾವುದೇ ಮಾರ್ಗಸೂಚಿಯನ್ನೂ ಐಸಿಎಂಆರ್‌ ಪ್ರಕಟಿಸಿಲ್ಲ. ಇದು ಸುಳ್ಳುಸುದ್ದಿ’ ಎಂದಿದ್ದಾರೆ. ಹಾಗೆಯೇ ದೆಹಲಿಯ ಶ್ರೀ ಗಂಗಾ ಆಸ್ಪತ್ರೆಯೂ ಈ ಸುದ್ದಿಯನ್ನು ಅಲ್ಲಗಳೆದಿದೆ. ಹಾಗೆಯೇ ವಾಚ್‌ ಧರಿಸಬಾರದು ಮತ್ತು ಸಸ್ಯಾಹಾರಿಗಳಿಗೆ ಕೊರೋನಾ ಸೋಂಕು ತಗುಲಲ್ಲ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ.

click me!