Fact Check: ಜೀಜಾಬಾಯಿ ಭೋಸಲೆ ಮೃಗಾಲಯದ ಹೆಸರು ಹಜರತ್ ಪೀರ್ ಬಾಬಾ ಎಂದು ಮರುನಾಮಕರಣ?

By Contributor Asianet  |  First Published Dec 27, 2021, 5:53 PM IST

ಛತ್ರಪತಿ ಶಿವಾಜಿ ತಾಯಿ ಜೀಜಾಬಾಯಿ ಭೋಸಲೆ ಹೆಸರನ್ನು ಬದಲಾಯಿಸಿ ಮೃಗಾಲಯಕ್ಕೆ ಮುಸ್ಲಿಂ ಹಜರತ್ ಹಾಜಿ ಪೀರ್ ಬಾಬಾ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮೃಗಾಲಯದಲ್ಲಿರುವ ಬೋರ್ಡ್ ಕೇವಲ ದರ್ಗಾಕೆ ಹೋಗಲು ದಾರಿ ತೋರಿಸುವ ಬೋರ್ಡ್ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದು ಬಂದಿದೆ.


Fact Check: ಮುಂಬೈನಲ್ಲಿರುವ ಏಕೈಕ ಮೃಗಾಲಯ 'ರಾಣಿಬಾಗ್' ಅಥವಾ 'ವೀರ್ ಮಾತಾ ಜೀಜಾಬಾಯಿ ಭೋಸಲೆ ಉದ್ಯಾನ್ ಮತ್ತು ಮೃಗಾಲಯ' ದ ಹೆಸರನ್ನು ಬದಲಾಯಿಸಿ 'ಹಜರತ್ ಹಾಜಿ ಪೀರ್ ಬಾಬಾ ರಾಣಿ ಬಾಗ್' ಎಂದು ಮರುನಾಮಕರಣ ಮಾಡಲಾಗಿದೆ ಎಂದು ಹೇಳಿ ಫಲಕದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಛತ್ರಪತಿ ಶಿವಾಜಿ ತಾಯಿ ಜೀಜಾಬಾಯಿ ಭೋಸಲೆ ಹೆಸರನ್ನು ಬದಲಾಯಿಸಿ ಮೃಗಾಲಯಕ್ಕೆ ಮುಸ್ಲಿಂ ಹೆಸರಾದ ಹಜರತ್ ಹಾಜಿ ಪೀರ್ ಬಾಬಾ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಆದರೆ  ಮೃಗಾಲಯದಲ್ಲಿರುವ ಬೋರ್ಡ್ ಕೇವಲ ದರ್ಗಾಕೆ ಹೋಗಲು ದಾರಿ ತೋರಿಸುವ ಬೋರ್ಡ್ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಟ್ವೀಟರ್‌ನಲ್ಲಿ ಮುಂಬೈ ಮೃಗಾಲಯದ ಅಧಿಕೃತ ಖಾತೆ ಸ್ಪಷ್ಟನೆ ನೀಡಿದೆ.  1861 ರಲ್ಲಿ ಸ್ಥಾಪನೆಯಾದಾಗಿನಿಂದ ಮೃಗಾಲಯದ ಭಾಗವಾಗಿರುವ ದರ್ಗಾಕ್ಕೆ ಹೋಗಲು ಸಹಾಯವಾಗುವಂತೆ ಮಂಡಳಿಯು ಈ ಬೋರ್ಡ್‌ ಸ್ಥಾಪಿಸಿದೆ ಎಂದು ಸ್ಪಷ್ಟನೆ ನೀಡಿದೆ.

Latest Videos

undefined

Claim

ಈ ಬೋರ್ಡ್‌ನ ಫೋಟೋವನ್ನು ಹಂಚಿಕೊಂಡ ಮಹಾರಾಷ್ಟ್ರ ಶಾಸಕ ನಿತೇಶ್ ರಾಣೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಮೃಗಾಲಯದ ಹೆಸರನ್ನು ಮುಸ್ಲಿಂ ಹೆಸರಿಗೆ ಬದಲಾಯಿಸಿರುವುದರಿಂದ ಈಗ ಪಕ್ಷವು ಅದರ ಹೆಸರನ್ನು ಬದಲಾಯಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ನಿತೇಶ್ ನಾರಾಯಣ ರಾಣೆ  ರಾಜಕಾರಣಿಯಾಗಿದ್ದು ಕಂಕಾವ್ಲಿ ವಿಧಾನಸಭಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿದ್ದಾರೆ.

ಮುಂಬೈ ಬಿಜೆಪಿ ಅಧ್ಯಕ್ಷ ಪ್ರತೀಕ್ ಕರ್ಪೆ ಕೂಡ ಇದೇ ಹೇಳಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿ ಮಾಹಿತಿ ಇರುವ ಹಲವಾರು ಪೋಸ್ಟ್‌ಗಳನ್ನು ಶೇರ್‌ ಮಾಡಲಾಗಿದೆ. ಇದನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್‌ ಲೈಕ್‌ ಕೂಡ ಮಾಡಿದ್ದಾರೆ.

Fact Check

ಮೃಗಾಲಯದ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ ಟ್ವೀಟರ್‌ನಲ್ಲಿ ಮೃಗಾಲಯದ ಖಾತೆಯಿಂದ ಸ್ಪಷ್ಟನೆ ನೀಡಿರುವುದು ಕಂಡುಬಂದಿದೆ.  ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಮತ್ತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅವರ ವೇರಿಫೈಡ್  ಖಾತೆಗಳು (Verified Account) ಫಾಲೋ ಮಾಡುವ '@TheMumbaiZoo' ಎಂಬ  ಹೆಸರಿನ ಖಾತೆಯು ಬೋರ್ಡ್‌ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡಿ ಟ್ವೀಟ್ ಮಾಡಿದೆ.

 

राणी बागेत एका टोकाला एक दर्गा आहे. त्याचं नाव हसरत हाजी पीर बाबा राणीबागवाले असं आहे. हा दर्गा राणीबागेच्या स्थापनेपासूनच म्हणजे १८६१ सालापासून तिथे आहे.
जो बोर्ड फोटोत दिसतोय तो बोर्ड फक्त दर्ग्याची जागा दाखवणारा दिशादर्शक बोर्ड आहे. pic.twitter.com/myEWUuMvUv

— The Mumbai Zoo (@TheMumbaiZoo)

 

ಮರಾಠಿಯಲ್ಲಿ ಟ್ವೀಟ್ ಮಾಡಿದ್ದು, "ರಾಣಿ ಬಾಗ್‌ನ ಒಂದು ತುದಿಯಲ್ಲಿ ಹಜರತ್ ಹಾಜಿ ಪೀರ್ ಬಾಬಾ ರಾಣಿಬಾಗ್ವಾಲೆ ಎಂದು ಕರೆಯಲ್ಪಡುವ ದರ್ಗಾವಿದೆ. 1861 ರಲ್ಲಿ ರಾಣಿ ಬಾಗ್ ಅನ್ನು ಸ್ಥಾಪಿಸಿದಾಗಿನಿಂದ ಈ ದರ್ಗಾ ಅಲ್ಲಿಯೇ ಇದೆ. ಫೋಟೋದಲ್ಲಿರುವ ಬೋರ್ಡ್ ದರ್ಗಾದ ದಾರಿಗಾಗಿ ಕೇವಲ ನಿರ್ದೇಶನ ಫಲಕವಾಗಿದೆ" ಎಂದು ಹೇಳಿದೆ.

'ದಿ ಮುಂಬೈ ಮೃಗಾಲಯ'ದ ಫೇಸ್‌ಬುಕ್ ಪೋಸ್ಟ್ ಪರಿಶೀಲಿಸಿದಾಗ ಅದರಲ್ಲಿ ಅವರು ಮೃಗಾಲಯದ ಇತಿಹಾಸದ ವೀಡಿಯೋಗೆ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಮೃಗಾಲಯಕ್ಕಾಗಿ ಭೂಮಿಯನ್ನು ಹೇಗೆ ಗುರುತಿಸಲಾಗಿದೆ ಮತ್ತು ಕಾಲಾನಂತರದಲ್ಲಿ ಅದರ ಹೆಸರು ಮತ್ತು ನಿರ್ವಹಣೆ ಹೇಗೆ ಬದಲಾಯಿತು ಎಂಬುದನ್ನು ಈ ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ. ವೀಡಿಯೊವನ್ನು 15 ಆಗಸ್ಟ್ 2021 ರಂದು ಅಪ್‌ಲೋಡ್ ಮಾಡಲಾಗಿದೆ ಮತ್ತು ಇದು ಮೃಗಾಲಯದ ಪ್ರವೇಶದ್ವಾರದಲ್ಲಿ  'ವೀರ್ ಮಾತಾ ಜೀಜಾಬಾಯಿ ಭೋಸಲೆ ಉದ್ಯಾನ್ ಮತ್ತು ಮೃಗಾಲಯ' ಎಂದು ಹೆಸರಿರುವ ಕಮಾನನ್ನು ಕೂಡ ತೋರಿಸಿದೆ.

ಹೆಚ್ಚುವರಿಯಾಗಿ, 17 ಜನವರಿ, 2019 ರಂದು ಅಪ್‌ಲೋಡ್ ಮಾಡಲಾದ YouTube ವ್ಲಾಗ್ (Vlog),ಮೃಗಾಲಯದ ಚಿತ್ರಣವನ್ನು ತೋರಿಸುತ್ತದೆ ಮತ್ತು ದರ್ಗಾಕ್ಕೆ ಹೋಗವ  ದಾರಿ ಬಗ್ಗೆ ಕೂಡ ಇದರಲ್ಲಿ ತಿಳಿಸಲಾಗಿದೆ. ವೀಡಿಯೊದಲ್ಲಿ 03:39 ನಿಮಿಷಕ್ಕೆ, ಅದೇ ಬೋರ್ಡ್ ಗೋಚರಿಸುತ್ತದೆ, ಹಾಗಾಗಿ ಈ ಬೋರ್ಡ್ ಜನವರಿ 2019 ರಿಂದ ಅಸ್ತಿತ್ವದಲ್ಲಿದೆ ಎಂದು ಇದು ಸ್ಪಷ್ಟಪಡಿಸುತ್ತದೆ. ಈ ಯೂಟ್ಯೂಬ್‌ ವ್ಲಾಗ್ ನೀವು ಇಲ್ಲಿ ನೋಡಬಹುದು.


ಆದ್ದರಿಂದ ವೀರ್ ಮಾತಾ ಜೀಜಾಬಾಯಿ ಭೋಸ್ಲೆ ಉದ್ಯಾನ ಮತ್ತು ಮೃಗಾಲಯದ ಹೆಸರನ್ನು ರಾಣಿಬಾಗ್ ಎಂದೂ ಕರೆಯಲಾಗುತ್ತಿದ್ದು, ಇದನ್ನು ಮುಸ್ಲಿಂ ಧರ್ಮದರ್ಶಿಯ ಹೆಸರಿಗೆ ಬದಲಾಯಿಸಲಾಗಿದೆ ಎಂದು ಹಂಚಿಕೊಳ್ಳಲಾದ ಮಾಹಿತಿಯೂ ಜನರನ್ನು ದಾರಿ ತಪ್ಪಿಸುವ ಮಾಹಿತಿಯಾಗಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದಿಬಂದಿದೆ.
 

click me!