ಚೀನಾ ಆಪ್ ಗಳ ಮೇಲೆ ನಿರ್ಬಂಧ/ ಕೇಂದ್ರ ಸರ್ಕಾರದಿಂದ ಆದೇಶ/ ನಿಜಕ್ಕೂ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆಯಾ/ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಚೀನಾ ಕ್ಯಾಂಪೆನ್
ನವದೆಹಲಿ(ಜೂ. 19) ರಾಷ್ಟ್ರೀಯ ಮಾಹಿತಿ ಕೇಂದ್ರ ಚೀನಾ ಮೂಲದ ಆಪ್ ಗಳ ಮೇಲೆ ನಿರ್ಬಂಧ ಹೇರಿದೆ ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಚೀನಾ- ಭಾರತ ನಡುವಿನ ಸಂಘರ್ಷ.
ಗೂಗಲ್ ಮತ್ತು ಆಪಲ್ ನೊಂದಿಗೆ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರ ಚೀನಾ ಮೂಲದ ಹಲವು ಆಪ್ ಗಳ ಮೇಲೆ ನಿರ್ಬಂಧ ವಿಧಿಸಿದೆ ಎಂದು ಸಂದೇಶ ಹೇಳುತ್ತದೆ.
undefined
ಟಿಕ್ ಟಾಕ್ ಸೇರಿ 52 ಆಪ್ ಬ್ಯಾನ್ ಮಾಡಲು ನಿರ್ಧಾರ
ಟಿಕ್ ಟಾಕ್, ಲೈವ್ ಮೀ, ಕ್ಲಬ್ ಫ್ಯಾಕ್ಟರಿ, ಕಾಮ್ ಸ್ಕಾನರ್, ವಿ ಮೇಟ್ ಸೇರಿದಂತೆ ಅನೇಕ ಆಪ್ ಗಳ ಪಟ್ಟಿಯೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ.
ಆದರೆ ಅಸಲಿಗೆ ಕೇಂದ್ರ ಸರ್ಕಾರ ಇಂಥ ಯಾವುದೇ ಆರ್ಡರ್ ನೀಡಿಲ್ಲ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹ ಈ ರೀತಿಯ ಆದೇಶ ನೀಡಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಇದು ನಕಲಿ ಎಂದು ತಿಳಿಸಿದೆ.
ಭಾರತೀಯ ಕೇಂದ್ರ ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ. ವ್ಯಾಪಾರ ವಹಿವಾಟಿನ ಹೆಸರಿನಲ್ಲಿ ಚೀನಾ ಭಾರತೀಯರ ಮಾಹಿತಿ ಕದಿಯುತ್ತಿದೆ. ಚೀನಾದ ಬಹುತೇಕ ಆ್ಯಪ್ ಸುರಕ್ಷತೆ ಇಲ್ಲ ಎಂದು ವರದಿ ನೀಡಿದೆ. ಟಿಕ್‌ಟಾಕ್ ಸೇರಿದಂತೆ 52 ಮೊಬೈಲ್ ಆ್ಯಪ್ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಗುಪ್ತಚರ ಇಲಾಖೆ ಸೂಚಿಸಿದೆ ಎಂದು ಹೇಳಲಾಗಿತ್ತು.
ಕ್ಲಾಶ್ ಆಫ್ ಕಿಂಗ್ಸ್, uc ಬ್ರೌಸರ್, ಶೈನ್, APUS ಬ್ರೌಸರ್, ಬೈದು ಮ್ಯಾಪ್, ಬೈದು ಟ್ರಾನ್ಸಲೇಟ್, ಬ್ಯೂಟಿ ಪ್ಲಸ್, ಬಿಗೋ ಲೈವ್, ಕ್ಯಾಶ್ ಕ್ಲಿಯರ್ du ಆ್ಯಪ್ ಸ್ಟುಡಿಯೋ, ಕ್ಲೀನ್ ಮಾಸ್ಟರ್, ಚೀತಾ, ಕ್ಲಬ್ ಫ್ಯಾಕ್ಟರಿ, cm ಬ್ರೌಸರ್, du ಬ್ರೌಸರ್, DU ಬ್ಯಾಟರಿ ಸೇವರ್, DU ಕ್ಲೀನರ್, DU ರಿಕಾರ್ಡರ್, DU ಪ್ರವೈಸಿ, ES ಫೈಲ್ ಎಕ್ಸಪ್ಲೋರರ್, ಹೆಲೋ, ಕ್ವಾವೈ, ಲೈಕ್, ಮೈಲ್ ಮಾಸ್ಟರ್, ನ್ಯೂಸ್ ಡಾಗ್, ಪ್ಯಾರೆಲ್ ಸ್ಪೇಸ್ ಸೇರಿದಂತೆ 52 ಪ್ರಮುಖ ಆ್ಯಪ್ ಗಳನ್ನು ಪಟ್ಟಿ ಮಾಡಲಾಗಿತ್ತು.
ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಚೀನಾ ಕ್ಯಾಂಪೇನ್ ನಡೆಯುತ್ತಿದ್ದು ಚೀನಾ ವಸ್ತುಗಳ ಬಹಿಷ್ಕಾರ ಮತ್ತು ಚೀನಾದ ಅಪ್ಲಿಕೇಶನ್ ಬಳಸದಂತೆ ಕೇಳಿಕೊಳ್ಳಲಾಗುತ್ತಿದೆ.