Fact Check: ದ್ರೌಪದಿ ಮುರ್ಮು ಮೋಹನ್ ಭಾಗವತ್‌ರನ್ನು ಭೇಟಿಯಾಗಿಲ್ಲ, ಎಡಿಟೆಡ್ ಚಿತ್ರ ವೈರಲ್

By Manjunath Nayak  |  First Published Jul 16, 2022, 4:15 PM IST

Fact Check: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಎನ್‌ಡಿಎ ರಾಷ್ಟ್ರಪತಿ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಭೇಟಿಯಾಗಿದ್ದಾರೆ ಎಂಬ ಶಿರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗಿದೆ


ನವದೆಹಲಿ (ಜು. 15): ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರ ಚಿತ್ರ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ ಮೋಹನ್ ಭಾಗವತ್ ಅವರೊಂದಿಗೆ ಎನ್‌ಡಿಎ ರಾಷ್ಟ್ರಪತಿ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಅವರನ್ನೂ ಕಾಣಬಹುದು. ಈ ಫೋಟೋವನ್ನು ಹಂಚಿಕೊಳ್ಳುವಾಗ, ಸಾಮಾಜಿಕ ಮಾಧ್ಯಮ ಬಳಕೆದಾರರು ದ್ರೌಪದಿ ಮುರ್ಮು ನಾಗಪುರದ ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ ಎಂದು ಬರೆಯಲಾಗಿದೆ. 

ವೈರಲ್ ಪೋಸ್ಟ್ ಕುರಿತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ ಮಾಡಿದಾಗ  ವೈರಲ್ ಫೋಟೋ ಸುಳ್ಳು ಎಂದು ತಿಳಿದುಬಂದಿದೆ. ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ. ಎರಡು ವಿಭಿನ್ನ ಚಿತ್ರಗಳನ್ನು ಎಡಿಟ್ ಮಾಡುವ ಮೂಲಕ ವೈರಲ್ ಚಿತ್ರವನ್ನು ರಚಿಸಲಾಗಿದೆ. 

Tap to resize

Latest Videos

undefined

Claim: ವೈರಲ್ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು "Smt Draupadi Murmu visits RSS headquarters to meet Mohan Bhagwat at Nagpur to seek his blessings for her candidature. Have we got any more doubts as to where we are being led from?We are led from the RSS headquarters" ಎಂದು ಬರೆಯಲಾಗಿದೆ

ಅನುವಾದ: ಶ್ರೀಮತಿ ದ್ರೌಪದಿ ಮುರ್ಮು ಅವರು ತಮ್ಮ ಉಮೇದುವಾರಿಕೆಗೆ ಆಶೀರ್ವಾದ ಪಡೆಯಲು ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಲು ನಾಗಪುರದ  ಆರ್‌ಎಸ್‌ಎಸ್ ಪ್ರಧಾನ ಕಛೇರಿಗೆ ಭೇಟಿ ನೀಡಿದರು. ನಮ್ಮನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ಬಗ್ಗೆ ನಮಗೆ ಇನ್ನೂ ಅನುಮಾನವಿದೆಯೇ? ನಾವು ಆರ್‌ಎಸ್‌ಎಸ್ ಕೇಂದ್ರ ಕಚೇರಿಯಿಂದ ಮುನ್ನಡೆಸಲ್ಪಡುತ್ತಿದ್ದೇವೆ. ಹಲವು ಫೇಸ್‌ಬುಕ್‌ ಬಳಕೆದಾರರು ಇದೇ  ಮಾಹಿತಿಯೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. 

Fact Check: ಈ ಫೋಟೊವನ್ನು ಕ್ರಾಪ್ ಮಾಡಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿ ವೈರಲ್ ಆಗಿರುವ ಚಿತ್ರದ ಸತ್ಯಾಸತ್ಯತೆ ತಿಳಿದಿದೆ. ಈ ಸಮಯದಲ್ಲಿ ನಮಗೆ ವಿವಿಧ ಸ್ಥಳಗಳಲ್ಲಿ ಮೋಹನ್ ಭಾಗವತ್ ಮತ್ತು ದ್ರೌಪದಿ ಮುರ್ಮು ಅವರ ಚಿತ್ರ ಸಿಕ್ಕಿದ್ದು, ಈ ಚಿತ್ರಗಳನ್ನು ಎಡಿಟ್ ಮಾಡಿ ಸೇರಿಸಿ ಈ ವೈರಲ್‌ ಚಿತ್ರ ರಚಿಸಲಾಗಿದೆ

ಮೋಹನ್ ಭಾಗವತ್ ಅವರ ಚಿತ್ರವನ್ನು ಕ್ರಾಪ್ ಮಾಡಿದಾಗ ಮತ್ತು ಅದನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, 11 ಮಾರ್ಚ್ 2022 ರಂದು ಆರ್‌ಎಸ್‌ಎಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿದ ಟ್ವೀಟ್‌ನಲ್ಲಿ ವೈರಲ್ ಚಿತ್ರದ ಇದೇ ರೀತಿಯ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಟ್ವೀಟ್ ಮಾಡಿರುವ ಚಿತ್ರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೈಮುಗಿದು ನಿಂತಿರುವುದನ್ನು ಕಾಣಬಹುದು, ಆದರೆ ಮೂಲ ಚಿತ್ರದಲ್ಲಿ ಮೋಹನ್ ಭಾಗವತ್ ಜೊತೆಗಿರುವುದು ದ್ರೌಪದಿ ಮುರ್ಮು ಅಲ್ಲ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ. ಮುರ್ಮು ಅವರ ಚಿತ್ರವನ್ನು ಪ್ರತ್ಯೇಕವಾಗಿ ಸೇರಿಸಿ ಫೋಟೋವನ್ನು ಫ್ಲಿಪ್ ಮಾಡಲಾಗಿದೆ.

 

"प्रतिवर्ष बड़ी संख्या में युवा संघ से जुड़ रहे हैं" – डॉ. मनमोहन वैद्य जीhttps://t.co/U1zoemIUEy

— RSS (@RSSorg)

 

11 ಮಾರ್ಚ್ 2022 ರಂದು aninews.in ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಮೋಹನ್ ಭಾಗವತ್ ಅವರ ಈ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ವರದಿಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, “ವಿಸ್ತರಣಾ ಯೋಜನೆಗಳ ಕುರಿತು ಚರ್ಚಿಸಲು ಗುಜರಾತ್‌ನಲ್ಲಿ ಆರ್‌ಎಸ್‌ಎಸ್‌ನ ವಾರ್ಷಿಕ ಸಭೆ ಪ್ರಾರಂಭವಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಭಾರತಮಾತೆಗೆ ನಮನ ಸಲ್ಲಿಸುವುದರೊಂದಿಗೆ ಸಭೆ ಆರಂಭವಾಯಿತು. ಮೂಲ ಚಿತ್ರದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬೋಳೆ ಅವರೊಂದಿಗೆ ಮೋಹನ್ ಭಾಗವತ್ ಅವರನ್ನು ಕಾಣಬಹುದು." ಎಂದು ಹೇಳಲಾಗಿದೆ 

ಇನ್ನು ಈ ಬಗ್ಗೆ  ಮತ್ತಷ್ಟು ತನಿಖೆ ನಡೆಸಿದಾಗ, ನಾವು ದ್ರೌಪದಿ ಮುರ್ಮು ಅವರ ಚಿತ್ರವನ್ನು ಕ್ರಾಪ್ ಮಾಡಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ  29 ಡಿಸೆಂಬರ್ 2020 ರಂದು ಹೇಮಂತ್ ಸೊರೆನ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್‌ನಲ್ಲಿ ಹಂಚಿಕೊಂಡ ಮೂಲ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಹೇಮಂತ್ ಸೊರೆನ್ ಅವರು 2020 ರಲ್ಲಿ ಜಾರ್ಖಂಡ್ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದರು. ಈ ಫೋಟೋದಿಂದ ದ್ರೌಪದಿ ಮುರ್ಮು ಅವರ ಚಿತ್ರವನ್ನು ಕ್ರಾಪ್ ಮಾಡಲಾಗಿದೆ ಮತ್ತು ವೈರಲ್ ಚಿತ್ರಕ್ಕೆ ಸೇರಿಸಲಾಗಿದೆ.

 

आज झारखण्ड सरकार के एक साल पूरे होने के अवसर पर राजभवन में राज्यपाल श्रीमती द्रौपदी मुर्मू जी से मुलाकात की। pic.twitter.com/Si262ts95D

— Hemant Soren (@HemantSorenJMM)

 

ಇನ್ನು ಇವರಿಬ್ಬರೂ ಇತ್ತೀಚೆಗೆ ಭೇಟಿಯಾಗಿದ್ದಾರೆಯೇ ಎಂದು ಹಲವಾರು ಕೀವರ್ಡ್‌ಗಳ ಮೂಲಕ ಗೂಗಲ್‌ನಲ್ಲಿ ಹುಡುಕಿದಾಗ ಇಬ್ಬರ ಭೇಟಿಯ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ಕೆಳಗಿನ ಕೊಲಾಜ್‌ನಲ್ಲಿ ಎರಡೂ ಚಿತ್ರಗಳ ಹೋಲಿಕೆಯನ್ನು ಸ್ಪಷ್ಟವಾಗಿ ಕಾಣಬಹುದು.

Conclusion: ಫ್ಯಾಕ್ಟ್‌ ಚೆಕ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ದ್ರೌಪದಿ ಮುರ್ಮು ಅವರ ವೈರಲ್ ಚಿತ್ರ ನಕಲಿ ಎಂದು ಸಾಬೀತಾಗಿದೆ. ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ. ಎರಡು ವಿಭಿನ್ನ ಚಿತ್ರಗಳನ್ನು ಎಡಿಟ್ ಮಾಡುವ ಮೂಲಕ ವೈರಲ್ ಚಿತ್ರವನ್ನು ರಚಿಸಲಾಗಿದೆ. 

click me!