
ಬೆಂಗಳೂರು [ಮೇ.14] : ಹಿರಿಯ ನಟ ಅಂಬರೀಶ್ ಪುತ್ರ ಪುತ್ರ ಅಭಿಷೇಕ್ ಅವರ ಮೊದಲ ಚಿತ್ರಕ್ಕಾಗಿ ಫೊಟೊ ಶೂಟ್ ಮಾಡಲಾಗಿದೆ. ಪ್ರಸಿದ್ಧ ಸಿನಿಮಾಟೋಗ್ರಾಫರ್ ಭುವನ್ ಗೌಡ ಅವರಿಂದ ಚಿತ್ರ ಫೊಟೊ ಶೂಟ್ ಮಾಡಲಾಗಿದೆ.
ಅಲ್ಲದೇ ಈಗಾಗಲೇ ಈ ಚಿತ್ರಕ್ಕೆ ಅಮರ್ ಎಂದು ಹೆಸರನ್ನು ಇಡಲಾಗಿದೆ. ಅಂಬರೀಶ್ ಪುತ್ರ ಅಭಿಷೇಕ್ ಚಿತ್ರಕ್ಕಾಗಿ ಸಂಪೂರ್ಣ ಸ್ಯಾಂಡಲ್ ವುಡ್ ಕಾಯುತ್ತಿದೆ.
ಪ್ರಸಿದ್ಧ ನಿರ್ದೇಶಕ ನಾಗಶೇಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಜೂನ್ ವೇಳೆಗೆ ಈ ಚಿತ್ರದ ಚಿತ್ರೀಕರಣವನ್ನು ಆರಂಭ ಮಾಡಲಾಗುತ್ತದೆ. ಆದರೆ ಈ ಚಿತ್ರಕ್ಕಿನ್ನೂ ನಾಯಕ ನಟಿಯ ಆಯ್ಕೆ ಮಾಡಲಾಗಿಲ್ಲ.
ಇನ್ನುಈ ಅಭಿಷೇಕ್ ಜೊತೆ ಯಾವ ನಟಿ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುವ ವಿಚಾರ ಸಸ್ಪೆನ್ಸ್ ಆಗಿಯೇ ಉಳಿದಿದೆ. ಆದರೆ ಕನ್ನಡ ಅಥವಾ ಪರಭಾಷೆಯಿಂದ ಚಿತ್ರಕ್ಕೆ ನಾಯಕ ನಟಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನು ತೆಲುಗಿನಿಂದ ಹೀರೋಯಿನ್ ಬರಬಹುದು ಎನ್ನುವ ಗುಸುಗುಸು ಕೂಡ ಕೇಳಿ ಬಂದಿದೆ.
ಆದರೆ ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಾಗಶೇಖರ್ ಮಾತ್ರ ಇನ್ನೂ ಕೂಡ ಈ ಚಿತ್ರಕ್ಕೆ ನಟಿಯನ್ನು ಫೈನಲ್ ಮಾಡಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.