
ಬಿಗ್‌ಬಾಸ್ 6ನೇ ಸೀಸನ್‌ಗೆ ಬರುತ್ತಿದ್ದಂತೆ, ‘ಮೂರಡಿ ಬುಲೆಟ್ಟು, ಆಟಂ ಬಾಂಬು...’ ಎಂದೆಲ್ಲಾ ಬಿಲ್ಡಪ್ ತಗೊಂಡವರು ಮೊದಲ ದಿನವೇ ಜಿಮ್ ರವಿ ಜೊತೆ ಜಗಳವಾಡಿದ್ದಾರೆ. ಯಾರಪ್ಪಾ ಇದು ಮಾತಿನ ಮಲ್ಲಿ, ಪಟ ಪಟ ಅಂತ ಮಾತಾಡಿ ಎಲ್ಲಾರೊಂದಿಗೂ ಜಗಳವಾಡುವವಳು ಎಂದು ಕೊಳ್ಳುವವರಿಗೆ ಇಲ್ಲಿದೆ ಉತ್ತರ.
- ಈಕೆ ಬಾಗಲಕೋಟೆಯ ಪುಟ್ಟ ಹಳ್ಳಿಯಲ್ಲಿರುವ ರೈತನ ಮಗಳು. ಓದಿದ್ದು ಎಂಎ ಜರ್ನಲಿಸಂ. ಬಣ್ಣದ ಲೋಕದೆಡೆಗೆ ಆಸಕ್ತಿ. ಅದಕ್ಕೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
- ಸೋನು ರಿಯಲ್ ನೇಮ್ ಜ್ಯೋತಿ. ಪೆಟ್ ಆ್ಯಂಡ್ ಲಕ್ಕಿ ನೇಮ್ ಸೋನು ಅಂತೆ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಸೋನುಗೆ ಇಲ್ಲಿ ಕಂಡಿದ್ದು ಕೇವಲ ಕಲ್ಲು ಮುಳ್ಳುಗಳ ಹಾದಿ. ಬಸ್‌ಸ್ಟ್ಯಾಂಡ್‌ನಲ್ಲಿಯೇ ಮಲಗಿ, ಮನೆಗೆಲಸ ಮಾಡಿ ತುತ್ತು ದುಡಿದುಕೊಂಡಿದ್ದಿದೆ.
- ಗಾಂಧಾರಿ, ಅಮೃತ ವರ್ಷಿಣಿ, ಶ್ರೀಮಾನ್ ಶ್ರೀಮತಿ, ಮೊಗ್ಗಿನ ಮನಸ್ಸು..ಮುಂತಾದ ಧಾರಾವಾಹಿಗಳಲ್ಲಿ ಪಾತ್ರ ಮಾಡಿಯೂ ಗುರುತಿಸಿಕೊಂಡಿದ್ದಾರೆ.
- ಅಷ್ಟೇ ಅಲ್ಲದೆ ಸಂಚಾರಿ ವಿಜಯ್ ಜೊತೆ 'ಕೊಟ್ಟೂರೇಶ್ವರ ಮಹಾತ್ಮೆ' ಚಿತ್ರದಲ್ಲಿಯೂ ನಟಿಸಿದ್ದಾರೆ. ಜೀವನದಲ್ಲಿ ಒಂದು ಸಲವಾದರೂ ಸುದೀಪ್ ಅವರನ್ನು ಮೀಟ್ ಆಗಬೇಕೆಂಬ ಮಹಾನ್ ಕನಸು ಹೊತ್ತ ಸೋನುಗೆ ಬಿಗ್‌ಬಾಸ್‌ಗೆ ಪ್ರವೇಶ ಸಿಕ್ಕಿದ್ದು, ಕೋಟಿ ಸಿಕ್ಕಷ್ಟು ಖುಷಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.