
ಸಿನಿಮಾದಲ್ಲಿ ನಟಿಯಾಗಬೇಕೆಂದು ಬಯಸುವ ಯುವತಿಯರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರಕ್ಕೆ ನಾಯಕ ನಟಿ ಬೇಕಾಗಿದ್ದಾರೆ. ಗಣೇಶ್‌ರ ಮುಂದಿನ ಚಿತ್ರ ಜಾಮೂನ್ ಸಿನಿಮಾಕ್ಕಾಗಿ ಹೊಸ ಮುಖಗಳ ಅನ್ವೇಷಣೆಯಲ್ಲಿದ್ದಾರೆ ನಿರ್ದೇಶಕ ಯೋಗರಾಜ್‌ಭಟ್. ಅದಕ್ಕಾಗಿ 19 ರಿಂದ 24 ವರ್ಷದೊಳಗಿನ ನಟಿಯ ಹುಡುಕಾಟದಲ್ಲಿದೆ ಚಿತ್ರತಂಡ. ಆಸಕ್ತ ಯುವತಿಯರು ತಮ್ಮ ಇತ್ತೀಚಿನ ಫೋಟೋವನ್ನು ಮೊಬೈಲ್ ಸಂಖ್ಯೆ : 8951834164ಗೆ ವಾಟ್ಸಾಪ್ ಮಾಡಲು ಕೋರಲಾಗಿದೆ. ಫೋಟೋದಲ್ಲಿ ಆಯ್ಕೆಯಾದವರನ್ನು ಆಡಿಷನ್ಸ್‌ಗೆ ಕರೆಸಲಾಗುತ್ತದೆ. ನವಂಬರ್ 27-28 ಆಡಿಷನ್ಸ್ ನಡೆಸಲಾಗುವುದು. ಈಗಾಗಲೇ ಮೊದಲ ದಿನದ ಆಡಿಷನ್ಸ್ ಶುರುವಾಗಿದೆ. ನಟಿಯಾಗಬೇಕೆಂದು ಕನಸು ಹೊತ್ತವರಿಗೆ ತಮ್ಮ ಕನಸು ನನಸಾಗಿಸು ಸದಾವಕಾಶ ಇದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.