
ಮದುನೆಯ ನಂತರ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಂಡತಿಯೊಟ್ಟಿಗೆ ಆಕೆ ಅಭಿನಯದ ಪರಿ ಚಿತ್ರ ವೀಕ್ಷಿಸಿದ್ದಾರೆ. ನಿನ್ನೆ ಮುಂಬೈ'ನಲ್ಲಿ ಚಿತ್ರತಂಡದೊಂದಿಗೆ ವಿಶೇಷ ಪ್ರದರ್ಶನದಲ್ಲಿ ವೀಕ್ಷಿಸಿದ ವಿರಾಟ್ ಅನುಷ್ಕಾ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್'ನಲ್ಲಿ ಬರೆದುಕೊಂಡಿರುವ ಅವರು ' ಕಳೆದ ರಾತ್ರಿ ಪರಿ ಚಿತ್ರವನ್ನು ವೀಕ್ಷಿಸಿದೆ. ನನ್ನ ಪತ್ನಿ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ತುಂಬ ದಿನಗಳ ನಂತರ ಒಂದು ಉತ್ತಮ ಚಿತ್ರವನ್ನು ವೀಕ್ಷಿಸಿದೆ. ತುಂಬಾ ಗಾಬರಿಯಾಗಿತ್ತು. ಆದರೆ ಆಕೆಯ ಅಭಿನಯವನ್ನು ಪ್ರಶಂಸಿಸುತ್ತೇನೆ'ಎಂದು ತಿಳಿಸಿದ್ದಾರೆ.
ಪ್ರೋಸಿತ್ ನಿರ್ದೇಶನದ ಪಾರಿ ಚಿತ್ರವನ್ನು ತಮ್ಮ ಬ್ಯಾನರ್'ಡಿ ಅನುಷ್ಕಾ ಶರ್ಮಾ ಅವರೆ ನಿರ್ಮಿಸಿದ್ದಾರೆ. ಅನುಷ್ಕಾ ಜೊತೆ ಪರಂಬ್ರತಾ ಚಟರ್ಜಿ ಪ್ರಮುಖ ತಾರಾಗಣದಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.