
ತಮಿಳಿನ ಸೂಪರ್‌ಸ್ಟಾರ್ ವಿಜಯ್ ಸೇತುಪತಿ ಮತ್ತು ತೆಲುಗಿನ ಹಿಟ್ ನಿರ್ದೇಶಕ ಪುರಿ ಜಗನ್ನಾಥ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಸ್ಲಂ ಡಾಗ್' ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಬರ್ತಿದೆ. ಈ ಚಿತ್ರದ ಮೊದಲ ಟೀಸರ್ ಅನ್ನು ಜೂನ್ 8 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಸದ್ಯಕ್ಕೆ ಎಲ್ಲಾ ಭಾಷೆಗಳಲ್ಲೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. "33 ಟೆಂಪಲ್ ರೋಡ್" ಅನ್ನೋದು ಈ ಚಿತ್ರದ ಟ್ಯಾಗ್‌ಲೈನ್.
ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್, ಹಾಗೂ ಜೆಬಿ ಮೋಷನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಜೆ.ಬಿ. ನಾರಾಯಣ್ ರಾವ್ ಕೊಂಡ್ರೊಳ್ಳ ಅವರು ಈ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದಾರೆ.
ಟೀಸರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಒಂದು ಹೊಸ ಪೋಸ್ಟರ್ ಮೂಲಕ ಅನೌನ್ಸ್ ಮಾಡಿದೆ. ಈ ಪೋಸ್ಟರ್‌ನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿರೋ ವ್ಯಕ್ತಿಯೊಬ್ಬರ ಕುತ್ತಿಗೆಗೆ ರಕ್ತಸಿಕ್ತ ಚಾಕು ಇಟ್ಟಿರುವುದನ್ನು ನೋಡಬಹುದು. ಈ ಭಯಾನಕ ಮತ್ತು ಕುತೂಹಲಕಾರಿ ಪೋಸ್ಟರ್, ಸಿನಿಮಾದ ಕಥೆ ಎಷ್ಟು ಕ್ರೂರವಾಗಿರಬಹುದು ಅನ್ನೋ ಸುಳಿವು ನೀಡುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು.
ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಿಂದೆಂದೂ ಕಾಣದ ಮಾಸ್ ಮತ್ತು ಸ್ಟೈಲಿಶ್ ಪಾತ್ರದಲ್ಲಿ ಮಿಂಚಲಿದ್ದಾರೆ ಅಂತ ಚಿತ್ರತಂಡ ಹೇಳಿದೆ. ಬಾಲಿವುಡ್ ನಟಿ ಟಬು ಮತ್ತು ಕನ್ನಡದ ನಟ ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಕೂಡ ಇಂಟರೆಸ್ಟಿಂಗ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಅರ್ಜುನ್ ರೆಡ್ಡಿ', 'ಕಬೀರ್ ಸಿಂಗ್' ಮತ್ತು 'ಅನಿಮಲ್' ನಂತಹ ಸೂಪರ್‌ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಆ್ಯಕ್ಷನ್, ಎಮೋಷನ್, ಮಾಸ್, ಸಂಗೀತ ಮತ್ತು ಕಾಮಿಡಿ ಎಲ್ಲವನ್ನೂ ಸೇರಿಸಿ ಪುರಿ ಜಗನ್ನಾಥ್ ತಮ್ಮ ವೃತ್ತಿಜೀವನದ ಅತಿದೊಡ್ಡ ಚಿತ್ರವನ್ನಾಗಿ 'ಸ್ಲಂ ಡಾಗ್' ಅನ್ನು ರೂಪಿಸುತ್ತಿದ್ದಾರೆ. ಕಥೆ ಬರೆದು, ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ಸಿಇಒ ಆಗಿ ವಿಷು ರೆಡ್ಡಿ, ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಹ್ಯಾಶ್‌ಟ್ಯಾಗ್ ಮೀಡಿಯಾ ಮತ್ತು ಪಿಆರ್‌ಒ ಆಗಿ ಶಬರಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.