ಡಾ. ರಾಜ್ ಬರ್ತಡೇಗೆ ಗಣ್ಯರು ಸಾಲು ಸಾಲಾಗಿ ವಿಶ್ ಮಾಡಿದ್ದಾರೆ. ಅದರಲ್ಲಿ ಸೌತ್ ಸ್ಟಾರ್ ಅನುಷ್ಕಾ ಶೆಟ್ಟಿ ಸಹ ಶುಭಾಶಯ ತಿಳಿಸಿದ್ದಾರೆ.
ಏಪ್ರಿಲ್ ತಿಂಗಳು ಬಂದರೆ ಡಾ. ರಾಜ್ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಅವರ ಸಿನಿಮಾಗಳು, ಅವರ ಹಾಡುಗಳು ಎಲ್ಲವೂ ಅದ್ಭುತ. ಇಡೀ ತಿಂಗಳು ರಾಜ್ ಕುಮಾರ್‌ರನ್ನು ಸ್ಮರಿಸುತ್ತಾರೆ.
ಅನೇಕರ ಗೆಳೆಯ, ಹಲವರಿಗೆ ಗುರು, ಅಭಿಮಾನಿಗಳಿಗೆ ದೇವರು, ಹೆಣ್ಮಕ್ಕಳಿಗೆ ಪುರುಷೋತ್ತಮ, ಪ್ರೇಮಿಗಳಿಗೆ ರಸಿಕರ ರಾಜ, ಕಲಾವಿದರಿಗೆ ನಟಸಾರ್ವಭೌಮ, ಹಿರಿಯರಿಗೆ ಸಜ್ಜನಿಕೆಗೆ ಮತ್ತೊಂದು ಹೆಸರು, ರೈತರಿಗೆ ಬಂಗಾರದ ಮನುಷ್ಯ, ನೆರವು ಪಡೆದವರಿಗೆ ದೇವತಾಮನುಷ್ಯ... ರಾಜ್‌ಕುಮಾರ್ ಎಲ್ಲರ ಮನಸ್ಸಿನಲ್ಲಿ ನೆಲೆಸಿದ ರೀತಿ ಅದು.
ಇಂತಹ ಮಹಾನ್ ಪುರುಷನನ್ನು ನೆನೆದು ಸ್ವೀಟಿ ಅನುಷ್ಕಾ ಶೆಟ್ಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು.
'90 ಹುಟ್ಟುಹಬ್ಬದಂದು ಡಾ. ರಾಜ್‌ಕುಮಾರ್ ಸರ್ ಅವರ ನೆನಪು' ಎಂದು ಬರೆದುಕೊಂಡಿದ್ದಾರೆ.
ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶೆಟ್ಟಿ ಸದ್ಯಕ್ಕೆ ಸೈಲೆನ್ಸ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದಾದ ನಂತರ ಐಶ್ಚರ್ಯ ರೈ ಜೊತೆ ಸಿನಿಮಾ ಮಾಡಲಿದ್ದಾರೆ.