ನಟ ನಾಗಾರ್ಜುನ ಫೋನ್‌ನಲ್ಲಿ ಒಂದೇ ಒಂದು ಫೋಟೋ ಕೂಡ ಇರಲ್ಲ: ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ!

Published : Oct 09, 2026, 04:30 PM IST
Nagarjuna

ಸಾರಾಂಶ

ಟಾಲಿವುಡ್ ನಟ ಕಿಂಗ್ ನಾಗಾರ್ಜುನ ತಮ್ಮ ಮೊಬೈಲ್ ಫೋನ್‌ನಲ್ಲಿ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿಟ್ಟುಕೊಳ್ಳದಿರುವುದಕ್ಕೆ ಸೈಬರ್ ಸುರಕ್ಷತೆಯೇ ಕಾರಣ ಎನ್ನಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ.

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಕೈಯಲ್ಲಿದ್ದರೆ ಸಾಕು, ಯಾವಾಗ ನೋಡಿದರೂ ಫೋಟೋ, ಸೆಲ್ಫಿ ತೆಗೆಯುವುದರಲ್ಲಿ ಹಲವರು ಬ್ಯುಸಿಯಾಗಿರುತ್ತಾರೆ. ಕೆಲವರಂತೂ ಫೋಟೋ ತೆಗೆಯಲೆಂದೇ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಾರೆ. ಆದರೆ ಟಾಲಿವುಡ್‌ನ ಕಿಂಗ್ ನಾಗಾರ್ಜುನ ಅವರ ಫೋನ್‌ನಲ್ಲಿ ಮಾತ್ರ ವೈಯಕ್ತಿಕ ಫೋಟೋಗಳೇ ಇರುವುದಿಲ್ಲವಂತೆ! ಇದಕ್ಕೆ ಅವರು ನೀಡಿರುವ ಕಾರಣ ಇದೀಗ ಕುತೂಹಲ ಮೂಡಿಸಿದೆ.

ಸದ್ಯ ನಾಗಾರ್ಜುನ ಸಿನಿಮಾಗಳು ಹಾಗೂ ಕಿರುತೆರೆ ಕಾರ್ಯಕ್ರಮಗಳ ಮೂಲಕ ಬ್ಯುಸಿಯಾಗಿದ್ದಾರೆ. ಒಂದು ಕಡೆ ನಾಯಕನಾಗಿ ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು, ಮತ್ತೊಂದೆಡೆ ‘ಕುಬೇರ’, ‘ಕೂಲಿ’ಯಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಜನಪ್ರಿಯ ತೆಲುಗು ರಿಯಾಲಿಟಿ ಶೋ ‘ಬಿಗ್ ಬಾಸ್ ತೆಲುಗು’ ಕಾರ್ಯಕ್ರಮದ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ನಾಗಾರ್ಜುನ ತಮ್ಮ ವೃತ್ತಿಜೀವನದ ಮಹತ್ವದ ಮೈಲಿಗಲ್ಲಿನತ್ತ ಸಾಗುತ್ತಿದ್ದಾರೆ. ಈಗಾಗಲೇ 99 ಸಿನಿಮಾಗಳಲ್ಲಿ ನಟಿಸಿರುವ ಕಿಂಗ್, ತಮ್ಮ 100ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಮಹತ್ವದ ಚಿತ್ರಕ್ಕೆ ‘ಕಿಂಗ್ 100’ ಎಂಬ ಶೀರ್ಷಿಕೆ ಇಡಲಾಗಿದ್ದು, ತಮಿಳು ನಿರ್ದೇಶಕ ರಾ. ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಐಶ್ವರ್ಯಾ ರಾಜೇಶ್ ಹಾಗೂ ಸುಷ್ಮಿತಾ ಭಟ್ ನಾಯಕಿಯರಾಗಿ ನಟಿಸುತ್ತಿದ್ದು, ಟಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ವರ್ಷದ ಕ್ರಿಸ್‌ಮಸ್ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ನಾಗಾರ್ಜುನ ಫೋನ್‌ನಲ್ಲಿ ಫೋಟೋಗಳನ್ನೇ ಇಟ್ಟುಕೊಳ್ಳುವುದಿಲ್ಲವಂತೆ! ಯಾಕೆ ಗೊತ್ತಾ?

ಸಿನಿಮಾ ಹಾಗೂ ‘ಬಿಗ್ ಬಾಸ್’ ಕಾರ್ಯಕ್ರಮದ ವಿಚಾರಗಳನ್ನು ಬದಿಗಿಟ್ಟರೆ, ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸೈಬರ್ ಸುರಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ ನಾಗಾರ್ಜುನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮೊಬೈಲ್ ಬಳಕೆ, ವೈಯಕ್ತಿಕ ಮಾಹಿತಿಯ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳಿಂದ ದೂರವಿರಲು ತಾವು ಅನುಸರಿಸುವ ಕೆಲವು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅವರು ಮಾತನಾಡಿದ್ದಾರೆ.

ತಮ್ಮ ಮೊಬೈಲ್‌ನಲ್ಲಿ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ ಎಂದು ನಾಗಾರ್ಜುನ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಸೈಬರ್ ಸುರಕ್ಷತೆ. ಒಂದು ವೇಳೆ ಮೊಬೈಲ್ ಹ್ಯಾಕ್ ಆದರೆ, ಅದರಲ್ಲಿರುವ ಫೋಟೋಗಳು ಹಾಗೂ ಖಾಸಗಿ ಮಾಹಿತಿಗಳು ಸೈಬರ್ ಅಪರಾಧಿಗಳ ಕೈಗೆ ಸಿಲುಕುವ ಅಪಾಯವಿರುತ್ತದೆ. ಅಂತಹ ಸಮಸ್ಯೆಗಳನ್ನು ತಪ್ಪಿಸಲು ಫೋನ್‌ನಲ್ಲಿ ಸಾಧ್ಯವಾದಷ್ಟು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿರಲು ನಿರ್ಧರಿಸಿದ್ದಾರಂತೆ. ಸೈಬರ್ ಅಪರಾಧಿಗಳು ದಿನಕ್ಕೊಂದು ಹೊಸ ತಂತ್ರಗಳನ್ನು ಬಳಸುತ್ತಿರುವ ಇಂದಿನ ಕಾಲದಲ್ಲಿ, ಮುನ್ನೆಚ್ಚರಿಕೆ ವಹಿಸುವುದೇ ಸುರಕ್ಷಿತ ಮಾರ್ಗ ಎಂಬುದನ್ನು ನಾಗಾರ್ಜುನ ತಮ್ಮ ಅನುಭವದ ಮೂಲಕ ವಿವರಿಸಿದ್ದಾರೆ.

ಪ್ರತಿ 15 ದಿನಕ್ಕೊಮ್ಮೆ ಮೊಬೈಲ್ ಪಾಸ್‌ವರ್ಡ್ ಬದಲಾವಣೆ!

ಫೋನ್‌ನಲ್ಲಿ ವೈಯಕ್ತಿಕ ಫೋಟೋಗಳನ್ನು ಇಟ್ಟುಕೊಳ್ಳದಿರುವುದಷ್ಟೇ ಅಲ್ಲ, ಮೊಬೈಲ್ ಸುರಕ್ಷತೆಯ ವಿಚಾರದಲ್ಲಿ ನಾಗಾರ್ಜುನ ಮತ್ತೊಂದು ಪ್ರಮುಖ ಕ್ರಮವನ್ನೂ ಅನುಸರಿಸುತ್ತಾರಂತೆ. ಅದೇನೆಂದರೆ, ಪ್ರತಿ 15 ದಿನಗಳಿಗೊಮ್ಮೆ ತಮ್ಮ ಮೊಬೈಲ್ ಪಾಸ್‌ವರ್ಡ್ ಬದಲಾಯಿಸುವುದು! ಮೊಬೈಲ್ ಪಾಸ್‌ವರ್ಡ್‌ನಂತೆ ವೈ-ಫೈ ಪಾಸ್‌ವರ್ಡ್ ಬದಲಿಸುವ ವಿಚಾರದಲ್ಲೂ ಅವರು ಎಚ್ಚರಿಕೆ ವಹಿಸುತ್ತಾರಂತೆ.

ಈ ಹಿಂದೆ ಎರಡು ಅಥವಾ ಮೂರು ತಿಂಗಳಿಗೊಮ್ಮೆ ವೈ-ಫೈ ಪಾಸ್‌ವರ್ಡ್ ಬದಲಾಯಿಸುತ್ತಿದ್ದ ನಾಗಾರ್ಜುನ, ಈಗ ಪ್ರತಿ 15 ದಿನಗಳಿಗೊಮ್ಮೆ ಅದನ್ನು ಬದಲಾಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ತಂತ್ರಜ್ಞಾನ ಎಷ್ಟು ಅನುಕೂಲಗಳನ್ನು ನೀಡುತ್ತದೆಯೋ, ಅಷ್ಟೇ ಎಚ್ಚರಿಕೆಯಿಂದ ಅದನ್ನು ಬಳಸುವುದು ಅಗತ್ಯ ಎಂಬ ಸಂದೇಶವನ್ನು ನಾಗಾರ್ಜುನ ಅವರ ಮಾತುಗಳು ಸಾರುತ್ತವೆ. ಇದೀಗ ಮೊಬೈಲ್ ಸುರಕ್ಷತೆ ಹಾಗೂ ವೈಯಕ್ತಿಕ ಮಾಹಿತಿಯ ಗೌಪ್ಯತೆಯ ಬಗ್ಗೆ ಕಿಂಗ್ ಹಂಚಿಕೊಂಡಿರುವ ಈ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅವನು ನನಗೆ ಐ ಲವ್ ಯು ಹೇಳಿದ, ನಾನು ಓಕೆ ಅಂದೆ: ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಅನುಷ್ಕಾ
‘ಡೊರೊಥಿ’ ನೋಡಿ ಉಪೇಂದ್ರ ಹೇಳಿದ್ದೇನು? ಕಾರ್ತಿಕ್ ಸುಬ್ಬರಾಜ್‌ಗೆ ರಿಯಲ್ ಸ್ಟಾರ್ ಕೊಟ್ಟ ಮೆಚ್ಚುಗೆ!