
ತುಮಕೂರು[ಫೆ.08] ನವರಸ ನಾಯಕ ಜಗ್ಗೇಶ್ ಅವರ ಒಲವು ಅಧ್ಯಾತ್ಮದತ್ತ ಸಾಗಿದೆ. ತಮ್ಮ ಮುತ್ತಾತನ ಕಾಲದಿಂದಲೂ ಪೂಜಿಸಿಕೊಂಡು ಬಂದ ಕಾಲ ಭೈರವ ದೇವರಿಗೆ ನೂತನ ದೇವಸ್ಥಾನ ಕಟ್ಟಿ ಲೋಕಾರ್ಪಣೆ ಮಾಡಿದ್ದಾರೆ. ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ವಿವಿಧ ವಿವಿಧ ಪೂಜಾ ವಿಧಾನಗಳೊಂದಿಗೆ ಕಳಸಾರೋಹಣ ಮಾಡಿ ದೇವಾಲಯ ಉದ್ಘಾಟನೆ ಮಾಡಲಾಗಿದೆ.
ದೇವಾಲಯದ ಉದ್ಘಾಟನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್, ಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಪ್ರಸನ್ನನಾಥ ಸ್ವಾಮೀಜಿಯೂ ಆಗಮಿಸಿದ್ದರು.
ಜಗ್ಗೇಶ್ ಸಂಕಲ್ಪದ ಹಿಂದಿನ ಕತೆ: ಒಂದು ವರ್ಷದಿಂದ ನಟ ಜಗ್ಗೇಶ್ ತಮ್ಮ ಊರಿಗೆ ಹೋದಾಗ ದೇವಸ್ಥಾನ ಕಂಡು ನೂತನ ದೇವಸ್ಥಾನ ಕಟ್ಟಿಸುವ ಸಂಕಲ್ಪ ಮಾಡಿಕೊಂಡರು ಪುರೋಹಿತರನ್ನು ಸಂಪರ್ಕಿಸಿ ದೇವಸ್ಥಾನ ಕಟ್ಟುವ ಕಾರ್ಯದಲ್ಲಿ ತಲ್ಲೀನರಾದರು ಜ್ಯೋತಿಷಿಗಳ ಮಾರ್ಗದರ್ಶನದಂತೆ ಕಾಶಿ ಪಟ್ಟಣಕ್ಕೆ ಹೋಗಿ ಬಂದರು.
ಇದಾದ ಮೇಲೆ ಒಂದು ರಾತ್ರಿ ಚಾಂಡಾಲ ವೃತ್ತಿಯನ್ನ ಮಾಡೋ ಸಲುವಾಗಿ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ 7 ಗಂಟೆಯಿಂದ ಬೆಳಗಿನ ಜಾವ ನಾಲ್ಕೂವರೆ ವರೆಗೂ 11 ಶವ ಸಂಸ್ಕಾರದಲ್ಲಿ ಭಾಗಿಯಾಗಿಯಾದರು. ಮತ್ತೆ ಕಾಶಿಗೆ ತೆರಳಿ ರುದ್ರಾಭಿಷೇಕ ಮುಗಿಸಿ ಕಾಲಭೈರವೇಶ್ವರನ ಮುಂದೆ ನಿಂತು ಪ್ರಾರ್ಥನೆ ಮಾಡಿ ಕಾಲಿಗೊಂದು ಬಳೆ ಧರಿಸಿ ವ್ರತ ಕೈಗೊಂಡರು.
ಸದಾ ರಾಜಕೀಯ ಹಾಗೂ ಚಿತ್ರರಂಗದ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಇರ್ತಿದ್ದ ಜಗ್ಗೇಶ್ ತಮ್ಮ ಹುಟ್ಟೂರಿನಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.