
ಸಿನಿರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗುತ್ತಿಲ್ಲ. ‘ಮಾ ಇಂಟಿ ಬಂಗಾರಂ’ನಂತಹ ಕೆಲ ಸಿನಿಮಾಗಳನ್ನು ಹೊರತುಪಡಿಸಿದರೆ, ಭರ್ಜರಿ ಹಿಟ್‌ಗಳು ಕಾಣಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ‘ಮೈಸಾ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸಂಪೂರ್ಣ ಆ್ಯಕ್ಷನ್ ಜಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಶ್ಮಿಕಾ ಗೋಂಡು ಸಮುದಾಯದ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ.
ರವೀಂದ್ರ ಪುಲ್ಲೆ ನಿರ್ದೇಶನದಲ್ಲಿ ‘ಮೈಸಾ’ ಸಿನಿಮಾ ಮೂಡಿಬಂದಿದ್ದು, ಅಜಯ್ ಸಾಯಿಪುರೆಡ್ಡಿ, ಅನಿಲ್ ಸಯ್ಯಪುರೆಡ್ಡಿ ಹಾಗೂ ವೀರಸಾಯಿ ಗೋಪಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೆಂಬರ್ 27ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆ ಎನ್ನಲಾಗಿದೆ. ರಿಯಲ್ ಆ್ಯಕ್ಷನ್ ಸ್ಟಂಟ್‌ಗಳಲ್ಲಿ ಭಾಗವಹಿಸಿರುವ ಅವರು, ಬರೋಬ್ಬರಿ ಎಂಟು ಗಂಟೆಗಳ ಕಾಲ ಅಂಡರ್‌ವಾಟರ್ ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದಾರೆ.
ವಿಭಿನ್ನವಾದ ಟ್ರೈಬಲ್ ಆ್ಯಕ್ಷನ್ ಡ್ರಾಮಾ
ಅಲ್ಲದೆ, ಡ್ಯಾನ್ಸ್ ಮಾಡುವ ವೇಳೆ ಹಿಪ್‌ಬೋನ್ ಮುರಿತಕ್ಕೂ ಒಳಗಾಗಿದ್ದರೂ ಶೂಟಿಂಗ್ ಮುಂದುವರಿಸಿರುವುದು ಅವರ ಪಾತ್ರಕ್ಕಾಗಿ ಪಟ್ಟ ಶ್ರಮಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ‘ಮೈಸಾ’ ಟೀಸರ್ ಸಿನಿಮಾದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಗ್ಲಾಮರಸ್ ಪಾತ್ರಗಳ ಜೊತೆಗೆ ಅಭಿನಯಕ್ಕೆ ಹೆಚ್ಚಿನ ಅವಕಾಶವಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರಶ್ಮಿಕಾ, ಈ ಬಾರಿ ವಿಭಿನ್ನವಾದ ಟ್ರೈಬಲ್ ಆ್ಯಕ್ಷನ್ ಡ್ರಾಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಇನ್ನು ‘ಮೈಸಾ’ ಮೂಲಕ ರಶ್ಮಿಕಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣುವುದರ ಜೊತೆಗೆ, ಮಹಿಳಾ ಸೆಂಟ್ರಿಕ್ ಸಿನಿಮಾಗಳಿಗೆ ಮತ್ತೆ ಉತ್ತಮ ದಿನಗಳು ಬರಲಿ ಎಂಬ ನಿರೀಕ್ಷೆಯೂ ಸಿನಿಪ್ರಿಯರಲ್ಲಿ ಮೂಡಿದೆ. ಈ ಸಿನಿಮಾ ಲೇಡಿ ಓರಿಯೆಂಟೆಡ್ ಚಿತ್ರಗಳ ಟ್ರೆಂಡ್‌ಗೆ ಹೊಸ ದಿಕ್ಕು ನೀಡುತ್ತದೆಯೇ ಎಂಬುದು ನವೆಂಬರ್ 27ರಂದು ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.