ನಟಿ ಮೀನಾಕ್ಷಿ ಚೌಧರಿಗೆ ಸಿಕ್ಕಾಪಟ್ಟೆ ಇಷ್ಟವಾದ ಆ ಹೀರೋ ಯಾರು? ಹೆಸರು ಕೇಳಿ ಅಭಿಮಾನಿಗಳೇ ಶಾಕ್

Published : Aug 29, 2026, 05:55 PM IST
Meenakshi Chaudhary

ಸಾರಾಂಶ

ಟಾಲಿವುಡ್ ನಟಿ ಮೀನಾಕ್ಷಿ ಚೌಧರಿ ಸಿಂಬು ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಯೊಂದು ಇದೀಗ ಮತ್ತೆ ವೈರಲ್ ಆಗಿದೆ. ಸಿನಿಮಾ ಇಂಡಸ್ಟ್ರಿಯ ಯಾವ ಹೀರೋ ಜೊತೆ ‘ಮೂವಿ ಡೇಟ್’ಗೆ ಹೋಗಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಮೀನಾಕ್ಷಿ, ತಾನು ಸಿಂಬು ಜೊತೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

ಟಾಲಿವುಡ್‌ನ ಮೋಸ್ಟ್ ವಾಂಟೆಡ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿರುವ ಪಂಜಾಬಿ ಬೆಡಗಿ ಮೀನಾಕ್ಷಿ ಚೌಧರಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2019ರಲ್ಲಿ ಹಿಂದಿ ಸಿನಿಮಾವೊಂದರಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು, 2021ರಲ್ಲಿ ನಾಯಕಿಯಾಗಿ ಟಾಲಿವುಡ್‌ಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ತಮ್ಮ ಸೌಂದರ್ಯ ಮತ್ತು ಅಭಿನಯದ ಮೂಲಕ ಗಮನ ಸೆಳೆದ ಮೀನಾಕ್ಷಿ, ಇದೀಗ ತೆಲುಗು ಚಿತ್ರರಂಗದ ಜನಪ್ರಿಯ ನಟಿಯರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.

‘ಹಿಟ್ 2’, ‘ಗುಂಟೂರು ಖಾರಂ’, ‘ಲಕ್ಕಿ ಭಾಸ್ಕರ್’, ‘ಅನಗನಗಾ ಒಕ ರಾಜು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮೀನಾಕ್ಷಿ ಚೌಧರಿ ಸತತ ಯಶಸ್ಸಿನ ಮೂಲಕ ‘ಲಕ್ಕಿ ಚಾರ್ಮ್’ ಎಂಬ ಇಮೇಜ್ ಕೂಡ ಪಡೆದುಕೊಂಡಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ಕಾಲಿವುಡ್‌ನಲ್ಲೂ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಂಡು ಅಲ್ಲಿನ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ ಕಥೆ ಮತ್ತು ಪಾತ್ರಗಳನ್ನು ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಮೀನಾಕ್ಷಿ, ಹಿಂದೆ ನೀಡಿದ್ದ ಸಂದರ್ಶನವೊಂದರ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದೆ.

ಯಾವ ಹೀರೋ ಜೊತೆ ‘ಮೂವಿ ಡೇಟ್’ಗೆ ಹೋಗ್ತೀರಾ?

ಹಿಂದೆ ನಡೆದ ಸಂದರ್ಶನವೊಂದರಲ್ಲಿ ನಿರೂಪಕರು ಮೀನಾಕ್ಷಿಗೆ ಕುತೂಹಲಕಾರಿ ಪ್ರಶ್ನೆಯೊಂದನ್ನು ಕೇಳಿದ್ದರು. ಸಿನಿಮಾ ಇಂಡಸ್ಟ್ರಿಯ ಯಾವುದೇ ಹೀರೋ ಜೊತೆ ‘ಮೂವಿ ಡೇಟ್’ಗೆ ಅಂದರೆ ಸಿನಿಮಾ ನೋಡಲು ಹೋಗುವ ಅವಕಾಶ ಸಿಕ್ಕರೆ, ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಎಂದು ಕೇಳಿದ್ದರು. ಈ ಪ್ರಶ್ನೆಗೆ ಮೀನಾಕ್ಷಿ ಯಾವುದೇ ಗೊಂದಲವಿಲ್ಲದೆ ತಕ್ಷಣವೇ ಕಾಲಿವುಡ್ ಸ್ಟಾರ್ ಹೀರೋ ಸಿಂಬು ಅವರ ಹೆಸರನ್ನು ಹೇಳಿದ್ದರು.

ನಾನು ಮೂವಿ ಡೇಟ್‌ಗೆ ಹೋಗಬೇಕೆಂದರೆ ಖಂಡಿತವಾಗಿಯೂ ಸಿಂಬು ಸರ್ ಜೊತೆ ಹೋಗುತ್ತೇನೆ ಎಂದು ಉತ್ಸಾಹದಿಂದ ಹೇಳಿದ್ದರು. ಸಿಂಬು ಅವರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ನಟನೆ ತಮಗೆ ತುಂಬಾ ಇಷ್ಟ ಎಂದು ಕೂಡ ಮೀನಾಕ್ಷಿ ಹೇಳಿಕೊಂಡಿದ್ದರು. ಸದ್ಯ ಮೀನಾಕ್ಷಿ ಚೌಧರಿ ಸಿಂಬು ಬಗ್ಗೆ ನೀಡಿದ್ದ ಈ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ.

ಸಿಂಬು ಜೊತೆ ಪ್ರೀತಿ ಇತ್ತಾ?

ಇನ್ನು ಈ ಹಿಂದೆ ಸಿಂಬು ಮತ್ತು ಮೀನಾಕ್ಷಿ ಚೌಧರಿ ಪ್ರೀತಿಯಲ್ಲಿದ್ದಾರೆ ಎಂಬ ರೀತಿಯ ಸುದ್ದಿಗಳು ಕೂಡ ಹರಿದಾಡಿದ್ದವು. ಆದರೆ ಈ ವಿಚಾರಕ್ಕೆ ಇಬ್ಬರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೀನಾಕ್ಷಿ ಸಿಂಬು ಜೊತೆ ಮೂವಿ ಡೇಟ್‌ಗೆ ಹೋಗುತ್ತೇನೆ ಎಂದು ಹೇಳಿದ್ದ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ವಿಶೇಷವಾಗಿ ಸಿಂಬು ಅಭಿಮಾನಿಗಳು ಈ ಹೇಳಿಕೆಗೆ ಖುಷಿ ವ್ಯಕ್ತಪಡಿಸುತ್ತಿದ್ದು, ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

STR 49ರಲ್ಲಿ ಮೀನಾಕ್ಷಿ ನಾಯಕಿ?

ಇದರ ನಡುವೆ ಕಾಲಿವುಡ್‌ನಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಅಶ್ವತ್ ಮರಿಮುತ್ತು ಸಾರಥ್ಯದಲ್ಲಿ ಸಿಂಬು ನಟಿಸುತ್ತಿರುವ ಬಹುನಿರೀಕ್ಷಿತ ‘STR 49’ ಸಿನಿಮಾದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕಾಂಬಿನೇಷನ್ ಬಗ್ಗೆ ಸದ್ಯ ಅಧಿಕೃತ ಘೋಷಣೆ ಹೊರಬಂದಿಲ್ಲವಾದರೂ, ಸಿಂಬು ಜೊತೆ ಮೀನಾಕ್ಷಿ ಚೌಧರಿ ನಾಯಕಿಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಖಂಡಿತವಾಗಿಯೂ ಅದು ಸ್ಪೆಷಲ್ ಟ್ರೀಟ್ ಆಗಲಿದೆ. ಸದ್ಯ ಮೀನಾಕ್ಷಿ ಅವರ ಹಳೆಯ ಹೇಳಿಕೆ ವೈರಲ್ ಆಗಿರುವ ಬೆನ್ನಲ್ಲೇ ‘STR 49’ ಕುರಿತ ಈ ಸುದ್ದಿ ಮತ್ತಷ್ಟು ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

1978ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ರಂಗಾ-ಬಿಲ್ಲಾ ಕೇಸ್: ಈಗ OTTಯಲ್ಲಿ ಸೃಷ್ಟಿಸುತ್ತಿದೆ ಭಯ
'ಮನುಷ್ಯರಲ್ಲಿ 2 ರೀತಿ, ಹಣ ಇರೋರು': ನಾಗಾರ್ಜುನ 100ನೇ ಸಿನಿಮಾ ಟೈಟಲ್ ಗ್ಲಿಂಪ್ಸ್ ರೋಮಾಂಚನಕಾರಿ