
ವರದಿ: ಕನ್ನಡ ಪ್ರಭ, ಸಿನಿ ವಾರ್ತೆ
ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ. ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ಪತಿ ತ್ಯಾಗರಾಜ್ ಕೂಡ ಚಿತ್ರರಂಗದಲ್ಲಿದ್ದಾರೆ. ಅದ್ಭುತ ಛಾಯಾಗ್ರಾಹಕರು...'
‘ಅಯ್ಯೋ ನಿಲ್ಲುಸ್ರೀ... ತ್ಯಾಗರಾಜ್ ನನ್ನ ಗಂಡ ಅಲ್ಲ. ತಂದೆ'
‘ಹೌದಾ ಮೇಡಮ್. ದಯವಿಟ್ಟು ಕ್ಷಮಿಸಿ ತಪ್ಪಾಗಿದೆ. ನಾವು ವಿಕಿಪೀಡಿಯಾ ನೋಡಿಕೊಂಡು ನಿಮ್ಮ ಬಯೋಡೆಟಾ ರೆಡಿ ಮಾಡಿಕೊಂಡಿದ್ದೇವೆ'
-ಈ ಪ್ರಕರಣ ನಡೆದಿದ್ದು ನಟಿ ತಾರಾ ಬಗ್ಗೆ!
ಅಂದಹಾಗೆ ಇವತ್ತು ತಾರಾಅನುರಾಧಾ ಜನ್ಮದಿನ. ಎಲ್ಲರಿಗೂ ಜನ್ಮದಿನ ಸಂತೋಷ ಕೊಟ್ಟರೆ ತಾರಾ ಅವರಿಗೆ ತುಂಬ ಸಲ ಮುಜುಗರ ಕೊಟ್ಟದ್ದೇ ಜಾಸ್ತಿ. ಕೃಪೆ: ವಿಕಿಪೀಡಿಯಾ. ವಿಕಿಪೀಡಿಯಾದಲ್ಲಿ ಆಗುತ್ತಿರುವ ಹಲವು ಎಡವಟ್ಟುಗಳನ್ನು ತುಂಬಾ ಸಲ ತಾರಾ ಅವರೇ ತಿದ್ದುಪಡಿ ಮಾಡಿದ್ದಾರೆ. ಸಾಕಷ್ಟುಬಾರಿ ಗಂಡನ ಜಾಗದಲ್ಲಿ ವೇಣು ಹಾಗೂ ಅಪ್ಪನ ಹೆಸರಿನ ಜಾಗದಲ್ಲಿ ತ್ಯಾಗರಾಜ್ ಅಂತ ಸೇರಿಸಿದ್ದಾರೆ. ಆದರೆ ಅವರು ಹುಟ್ಟಿದ ವರ್ಷ ಮಾತ್ರ ವಿಕಿಪೀಡಿಯಾದಲ್ಲಿ ಇನ್ನೂ ತಿದ್ದುಪಡಿ ಆಗಿಲ್ಲ. ‘ನನ್ನ ಡೇಟ್ ಆಫ್ ಬತ್‌ರ್ ತಪ್ಪಿದೆ ಅಂತ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಕೊಟ್ಟೆ. ನಾನೇ ಒಮ್ಮೆ ತಿದ್ದಿದೆ. ಯಾಕೋ ವಿಕಿಪೀಡಿಯಾಗೆ ನನ್ನ ಕಂಡರೆ ಅದೇನು ಕೋಪಾನೋ? ನಾನು ಹುಟ್ಟಿದ್ದು 1973ರಲ್ಲಿ. ಆದರೂ ವಿಕಿಪೀಡಿಯ 1965 ಅನ್ನುತ್ತದೆ. ಏನ್ ಮಾಡ್ಲಿ'ಅಂತಾರೆ ತಾರಾ.
ಅಂದಹಾಗೆ ತಾರಾ ಹುಟ್ಟಿದ ವರ್ಷ 1965 ಆಗೋಕ್ಕೆ ಸಾಧ್ಯನೇ ಇಲ್ಲ. ಯಾಕೆಂದರೆ ಆ ಹೊತ್ತಿಗೆ ತಾರಾ ಅಪ್ಪಾಮ್ಮ ಮದುವೆನೇ ಆಗಿರ ಲಿಲ್ಲ! ಮದುವೆ ಆಗದೇ ನಾನು ಹುಟ್ಟಿದ್ದೀನಿ ಅಂತ ಹೇಳುವ ವಿಕಿಪೀಡಿ ಯಾಕ್ಕೆ ತಾರಾ ಸಿಟ್ಟಾಗದೇ ಇರುತ್ತಾರಾ? ವಿಕಿಪಿಡಿಯಾ ವಿವರ- ಪ್ರವರವನ್ನೇ ಓದಿ ಓದಿ ಮುಜುಗರಕ್ಕೀಡು ಮಾಡುತ್ತಿರುವ ತಾರಾ ಇದಕ್ಕೆ ಒಂದು ಅಂತ್ಯ ಹಾಡೋದು ಹೇಗೆ ಅಂತ ಗೊತ್ತಾಗದೇ ಕಂಗಾಲಾಗಿದ್ದಾರೆ, ಅವರು ನಟಿಸದ ಸಿನಿಮಾಗಳ ಪಟ್ಟಿಯೂ ಅದರಲ್ಲಿವೆಯಂತೆ. ತಾರಾಗೆ ಒಂದು ಶುಭಾಶಯ ಹೇಳಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.