
ಬರ್ನ್ (ಸ್ವಿಜರ್ಲೆಂಡ್): ದಿವಂಗತ ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ.
ಶ್ರೀದೇವಿ ಅವರ ಜನಪ್ರಿಯ ಸಿನಿಮಾ ‘ಚಾಂದಿನಿ’ಯ ಚಿತ್ರೀಕರಣ ನಡೆದದ್ದು ಇಲ್ಲಿನ ಮನೋಹರ ಪ್ರದೇಶದಲ್ಲಿಯೇ. ಇಲ್ಲಿನ ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ ಗೌರವ ಸೂಚಿಸುವ ಚಿಂತನೆ ನಡೆದಿದೆ.
ಈ ಹಿಂದೆ ಇದೇ ಕಾರಣಕ್ಕಾಗಿ ಖ್ಯಾತ ಚಿತ್ರ ನಿರ್ದೇಶಕ ಯಶ್ ಚೋಪ್ರಾ ಪ್ರತಿಮೆಯನ್ನು ಸ್ವಿಜರ್ಲೆಂಡ್ ಸರ್ಕಾರ ಅನಾವರಣ ಗೊಳಿಸಿತ್ತು. ಚೋಪ್ರಾ ಅವರ ಹಲವು ಚಿತ್ರಗಳಲ್ಲಿ ಸ್ವಿಜರ್ಲೆಂಡ್‌ನ ಸುಂದರ ತಾಣ ಬಳಸಿಕೊಳ್ಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.