
ಬೆಂಗಳೂರು(ಅ.25): ಬೆಳಗ್ಗೆ ಹಾಸಿಗೆಯಿಂದ ಎದ್ದು, ರಾತ್ರಿ ಮಲಗುವವರೆಗೆ ಕೇವಲ ತನ್ನದಲ್ಲದೇ ಇಡೀ ಕುಟುಂಬದ ಪೋಷಣೆ, ರಕ್ಷಣೆಗೆ ದುಡಿಯುವ ಅಮ್ಮ-ಮಡದಿ ಅನ್ನುವವಳಿಗೆ ಪ್ರತಿ ನಿತ್ಯ ಕ್ಷಣಕಾಲವೂ ಪುರುಸೊತ್ತೆ ಇಲ್ಲ. ಅವಳಿಗೂ ರೆಸ್ಟ್ ಬೇಕಲ್ವಾ..? ಅಮ್ಮ ಮನೆಯಲ್ಲೇ ಇದ್ರೂ, ಮಡದಿ ಆಫೀಸಿಗೆ ಹೋಗಿ ಬಂದ್ರ ನಮ್ಮಷ್ಟು ವಿಶ್ರಾಂತಿ ಎಂದಿಗೂ ಪಡೆಯುವುದೇ ಇಲ್ಲ. ಆಕೆಯ ಆರೈಕೆಗೆ ಅವಳಿಗೂ ಸಮಯ ಸಿಕ್ಕುವುದೇಇಲ್ಲ.
ಪ್ರತಿ ನಿತ್ಯ ಆಫೀಸ್'ಗೆ ಹೋಗುವ ಮುಂಚೆಯೇ ನಮ್ಮನ್ನು ರೆಡಿ ಮಾಡಿ, ಆಕೆಯೂ ದಡ-ಬಡ ಅಂತ ಹೊರಡುವುದು ಸಾಮಾನ್ಯವಾಗಿದೆ. ಮನೆಯಲ್ಲಿರುವ ಭಾನುವಾರ ಒಂದು ದಿನವಾದರು ಆಕೆ ಏಳುವ ಮುಂಚೆಯೇ ಎದ್ದು ಕಾಫಿ ಮಾಡಿಕೊಡುವುದರಿಂದ ಹಿಡಿದು, ಆಕೆ ಅಡುಗೆ ಮನೆಗೆ ಇಣುಕುವ ಮುನ್ನವೆ ಚೆಚ್ಚನೆಯ ತಿಂಡಿ ರೆಡಿ ಮಾಡುವ, ಮಧ್ಯಾಹ್ನದ ಊಟಕ್ಕೆ ಕುಕ್ಕರ್ ಇಡಲು ಹೋಗುವ ಮೊದಲೇ ಡೈನಿಂಗ್ ಟೇಬಲ್ ನಲ್ಲಿ ಅಡುಗೆ ರೆಡಿಯಾದರೆ ಆಕೆಗೂ ವಿಶ್ರಾಂತಿ ಜೊತೆಗೆ ನಮ್ಮ ಮೇಲೆಯೂ ಪ್ರೀತಿ ಜಾಸ್ತಿ.
ದಣಿವಾರಿಸಿಕೊಳ್ಳದೇ ದುಡಿಯುವ ಅವಳಿಗೂ ವಾರದಲ್ಲಿ ಒಮ್ಮೆಯಾದರು ರೆಸ್ಟ್ ನೀಡುವ, ಇದಕ್ಕಾಗಿ ವಾರದಲ್ಲಿ ಒಂದು ದಿನವಾದರು ಆಕೆ ಕೆಲಸಕ್ಕೆ ರಜೆ ಕೊಡಿಸಿ, ಮನೆಯಲ್ಲಿ ಮಹಾರಾಣಿಯ ಹಾಗೇ ನೋಡಿಕೊಳ್ಳುವ ಎಂಬುದನ್ನು ಸಾರುತ್ತಿದೆ ಈ ವಿಡಿಯೋ. ಒಮ್ಮೆ ನೋಡಿ ಸಾಧ್ಯವಾದಷ್ಟು ಅಳವಡಿಸಿಕೊಳ್ಳಿ ಅವಳನ್ನು ಪ್ರೀತಿಸಿ, ಪೋಷಿಸಿ, ಆರೈಕೆ ಮಾಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.