
ಮಂಡ್ಯ (ಆ. 24): ನೂತನ ಸಂಸದೆ ಸುಮಲತಾ ಅಂಬರೀಶ್, ನಾಲ್ಕು ವರ್ಷಗಳ ಹಿಂದೆ ತೆಲುಗು ನಟ ಚಿರಂಜೀವಿ ಮಗಳ ಮದುವೆಯಲ್ಲಿ ಭಾಗವಹಿಸಿದ್ದ ವೀಡಿಯೋ ಹಾಗೂ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಿರಂಜೀವಿ ಹುಟ್ಟುಹಬ್ಬ ಆ. 23 ರಂದು ಈ ವಿಡಿಯೋವನ್ನು ಹರಿಯಬಿಡಲಾಗಿದ್ದು, ಚಿರಂಜೀವಿ ಬರ್ತಡೇ ಪಾರ್ಟಿಯಲ್ಲಿ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎಂದು ವೈರಲ್ ಮಾಡಲಾಗಿತ್ತು. ಸುಮಲತಾ ಅಂಬರೀಶ್ ಹೆಸರಿನ ಫೇಸ್ ಬುಕ್ ಖಾತೆಯಿಂದಲೇ ಅಪ್ಲೋಡ್ ಆಗಿದ್ದು ಇನ್ನಷ್ಟು ಪುಷ್ಟಿ ನೀಡಿದಂತಾಗಿತ್ತು.
ಈ ವಿಡಿಯೋಗೆ ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಹಿಂದೆ ನಡೆದ ಚಿರಂಜೀವಿ ರವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಅಂಬರೀಶ್ ಅವರೊಂದಿಗೆ 4 ವರ್ಷಗಳ ಹಿಂದಿನ ಹಳೆಯ ನೆನಪುಗಳನ್ನು ಮರಳಿ ತಂದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.
ಚಿರಂಜೀವಿ ಹುಟ್ಟುಹಬ್ಬದಲ್ಲಿ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿರುವ ವಿಡಿಯೋ 3 ವರ್ಷ ಹಿಂದಿನದ್ದು. ಅಂದರೆ 2016 ರಲ್ಲಿ ಅರಮನೆ ಮೈದಾನದಲ್ಲಿ ಚಿರಂಜೀವಿ ಮಗಳು ಶ್ರೀಜಾ ಮದುವೆ ನಡೆದಿತ್ತು. ಈ ಸಂದರ್ಭದಲ್ಲಿ ಸುಮಲತಾ, ಚಿರಂಜೀವಿ ಜೊತೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ಕಿಡಿಗೇಡಿಗಳು ಸುಮಲತಾ ತೇಜೋವಧೆಗೆ ಯತ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.