ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿ ಪ್ರೀತಿಯ ಪತ್ರ ಬರೆದ ಕಿಚ್ಚ

Published : Jul 11, 2017, 09:22 PM ISTUpdated : Apr 11, 2018, 01:02 PM IST
ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿ ಪ್ರೀತಿಯ ಪತ್ರ ಬರೆದ ಕಿಚ್ಚ

ಸಾರಾಂಶ

ಅಭಿಮಾನಿಗಳಿಗೆ ಸುದೀಪ್ ಬರೆದ ಪತ್ರದ ಸಂಕ್ಷಿಪ್ತ ಸಾರಂಶ

ಬೆಂಗಳೂರು(ಜು.11): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಅಭಿಮಾನಿಗಳಿಗೆ ಅನಿರೀಕ್ಷಿತ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ತಾವು ಇನ್ನು ಮುಂದೆ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಅವರು ತಾವುಗಳೆಲ್ಲರೂ ಇಷ್ಟು ವರ್ಷಗಳಿಂದ ನನ್ನ ಹುಟ್ಟುಹಬ್ಬವನ್ನು ಅತ್ಯುತ್ಸಾಹದಿಂದ ಆಚರಿಸಿ ಪ್ರೀತಿಯಿಂದ ತೋರಿದ ಅಭಿಮಾನಕ್ಕೆ ನಾನು ಸದಾ ಚಿರಋಣಿ'ಎಂದು ತಮ್ಮ ಗೂಗಲ್ ಪ್ಲಸ್ ಅಕೌಂಟ್'ನಲ್ಲಿ ಬರೆದುಕೊಂಡು ಟ್ವಿಟರ್'ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಸುದೀಪ್ ಬರೆದ ಪತ್ರದ ಸಂಕ್ಷಿಪ್ತ ಸಾರಂಶ

ನಮಸ್ತೆ ಗೆಳೆಯರೇ,

'ಹಲವು ವರ್ಷಗಳಿಂದ ನನ್ನ ಹುಟ್ಟುಹಬ್ಬವನ್ನು ಸಡಗರದಿಂದ, ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೀರಿ. ಅದಕ್ಕಾಗಿ ತಾವುಗಳು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೇಕುಗಳು, ಹೂಮಾಲೆ ಸೇರಿದಂತೆ ಅಲಂಕಾರಿಕಾ ವಸ್ತುಗಳಿಗಾಗಿ ಖರ್ಚು ಮಾಡುತ್ತಾ ಬಂದಿದ್ದೀರಿ. ಅದೆಷ್ಟೋ ದೂರದಿಂದ ಬಂದು ಮನೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಅಲಂಕರಿಸುತ್ತಿದ್ದೀರಾ.

ಇನ್ನು ಮುಂದು ನನ್ನ ಹುಟ್ಟುಹಬ್ಬಕ್ಕೆ ಪೋಲು ಮಾಡುವ ಹಣವನ್ನು ದಿನದ ಊಟಕ್ಕೆ ಪರದಾಡುವ ಬಡವರಿಗಾಗಿ ವೆಚ್ಚ ಮಾಡಿ ಎಂದು ವಿನಮ್ರವಾ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಹುಟ್ಟು ಹಬ್ಬಕ್ಕಾಗಿ ಖರ್ಚು ಮಾಡುವ ಹಣ ಬೇರೆಯೊಬ್ಬರ ಜೀವನ ಅಥವಾ ಮನೆಯನ್ನು ಬೆಳಗಲಿ. ಇದೆ ನನಗೆ ನೀವು ಕೊಡುವ ಅತ್ಯುತ್ತಮ ಉಡುಗೊರೆ. ಇದೇ ಉತ್ತಮವಾಗಿ ಹುಟ್ಟುಹಬ್ಬ ಆಚರಿಸುವ ವಿಧಾನ ಹಾಗೂ ಕಷ್ಟದಲ್ಲಿರುವವರಿಗೆ ಮಾಡುವ ಸೇವೆ.

ಇನ್ನು ಮುಂದೆ ನಾನು ಕೂಡ ಹುಟ್ಟುಹಬ್ಬದಂದು ಮನೆಯಲ್ಲಿ ಇರದೆ ಹೊರಗಡೆ ಉಳಿಯಲು ಬಯಸುತ್ತೇನೆ. ಅಲ್ಲದೆ ನಿಮಗೆ ಹೇಳಿದಂತೆಯೇ ಮಾಡುತ್ತೇನೆ. ನೊಂದವರಿಗೆ ಸಹಾಯ ಮಾಡಿ. ಮುಂದೊಂದು ದಿನ, ಒಂದೇ ಒಂದು ಬೆಳಕಿನ ಕಿರಣಕ್ಕಾಗಿ ಹಂಬಲಿಸುವ ಹೊತ್ತಲ್ಲಿ, ಬೆಳಕು ನಿಮ್ಮ ಮೇಲೆ ಬಿದ್ದು ಹೊಳೆಯುವುದನ್ನು ನೀವು ಕಾಣುತ್ತೀರಿ.

ನಿಮ್ಮ ಪ್ರೀತಿಯ

ಕಿಚ್ಚ.'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!