ನನ್ನ ಜೀವನವನ್ನು ಪ್ರಭಾವಿಸಿದವರು ಅಟಲ್‌: ಶಾರುಖ್‌

By Web DeskFirst Published Aug 18, 2018, 12:08 PM IST
Highlights

‘ನಾನು ಚಿಕ್ಕವನಿದ್ದಾಗ ದಿಲ್ಲಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾಡುತ್ತಿದ್ದ ಪ್ರತಿ ಭಾಷಣಕ್ಕೂ ನನ್ನ ತಂದೆ ಕರೆದುಕೊಂಡು ಹೋಗುತ್ತಿದ್ದರು. ಆಗಿನ್ನೂ ನಾನು ಬೆಳೆದು ದೊಡ್ಡವನಾಗುತ್ತಿದ್ದೆ. ಇದಾದ ಹಲವಾರು ವರ್ಷಗಳ ಬಳಿಕ ನನಗೆ ವಾಜಪೇಯಿ ಅವರನ್ನು ಭೇಟಿಯಾಗುವ ಯೋಗ ಒದಗಿಬಂತು’ ಎಂದು ಶಾರುಖ್‌ ಹೇಳಿದ್ದಾರೆ.

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ನಟ ಶಾರುಖ್‌ಖಾನ್‌ ಅವರು ಅಕ್ಷರ ನಮನ ಸಲ್ಲಿಸಿದ್ದಾರೆ. ಅಟಲ್‌ಜಿ ಜತೆಗಿನ ತಮ್ಮ ಒಡನಾಟವನ್ನು ಅವರು ಬಣ್ಣಿಸಿದ್ದಾರೆ.

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಂನಲ್ಲಿ ಸವಿಸ್ತಾರವಾಗಿ ವಾಜಪೇಯಿ ಅವರ ಬಗ್ಗೆ ಶಾರುಖ್‌ ಮನೋಜ್ಞವಾಗಿ ಬರೆದಿದ್ದಾರೆ.

‘ನಾನು ಚಿಕ್ಕವನಿದ್ದಾಗ ದಿಲ್ಲಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾಡುತ್ತಿದ್ದ ಪ್ರತಿ ಭಾಷಣಕ್ಕೂ ನನ್ನ ತಂದೆ ಕರೆದುಕೊಂಡು ಹೋಗುತ್ತಿದ್ದರು. ಆಗಿನ್ನೂ ನಾನು ಬೆಳೆದು ದೊಡ್ಡವನಾಗುತ್ತಿದ್ದೆ. ಇದಾದ ಹಲವಾರು ವರ್ಷಗಳ ಬಳಿಕ ನನಗೆ ವಾಜಪೇಯಿ ಅವರನ್ನು ಭೇಟಿಯಾಗುವ ಯೋಗ ಒದಗಿಬಂತು’ ಎಂದು ಶಾರುಖ್‌ ಹೇಳಿದ್ದಾರೆ.

 

 

For The Poet Prime Minister of our country, love you Baapji...

A post shared by Shah Rukh Khan (@iamsrk) on Aug 16, 2018 at 9:30am PDT

 

‘ಅವರ ಜತೆ ನಾನು ಕವಿತೆ, ಚಲನಚಿತ್ರ, ರಾಜಕೀಯದ ಬಗ್ಗೆ ಬಹು ಹೊತ್ತು ಮಾತನಾಡಿದೆ. ನಮಗೆ ಕಾಡುತ್ತಿದ್ದ ಮಂಡಿನೋವಿನ ಬಗ್ಗೆಯೂ ತುಂಬಾ ಚರ್ಚಿಸಿದೆವು. ಅವರು ಬರೆದ ಒಂದು ಕವಿತೆಯನ್ನು ತೆರೆಯ ಮೇಲೆ ಓದುವ ಸುಯೋಗ ಕೂಡ ನನಗೆ ಲಭಿಸಿತು.’

‘ಅಟಲ್‌ ಅವರಿಗೆ ಮನೆಯಲ್ಲಿ ಪ್ರೀತಿಯಿಂದ ‘ಬಾಪ್‌ಜಿ’ ಎಂದು ಸಂಬೋಧಿಸಲಾಗುತ್ತಿತ್ತು. ಇಂದು ದೇಶವು ತಂದೆಯ ಸಮಾನವಾದ ವ್ಯಕ್ತಿಯನ್ನು ಹಾಗೂ ಉನ್ನತ ನಾಯಕನನ್ನು ಕಳೆದುಕೊಂಡಿದೆ. ನಾನು ಇಮದು ನನ್ನ ಬಾಲ್ಯದ ಒಂದು ಅಂಗವನ್ನು ಕಳೆದುಕೊಂಡಿದ್ದೇನೆ. ಜತೆಗೆ ಕವಿತೆ, ನಗುವಿನ ನೆನಪುಗಳನ್ನೂ ಕಳೆದುಕೊಂಡಿದ್ದೇನೆ. ನನ್ನ ಬಾಲ್ಯದಲ್ಲಿ ಜೀವನ ರೂಪಿಸಿಕೊಳ್ಳುವಾಗ ವಾಜಪೇಯಿ ಅವರ ಪ್ರಭಾವ ನನ್ನ ಮೇಲಾಯಿತು. ಹೀಗಾಗಿ ನಾನು ಅದೃಷ್ಟವಂತ.

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಂತಾಪಗಳು. ನಾನು ಬಾಪ್‌ಜಿ ಅವರನ್ನು ತುಂಬಾ ‘ಮಿಸ್‌’ ಮಾಡಿಕೊಳ್ಳುತ್ತಿದ್ದೇನೆ’ ಎಂದು ಖಾನ್‌ ದುಃಖಿಸಿದ್ದಾರೆ.

click me!