ವೈರಲ್ ಆಯ್ತು ಸೃಜನ್-ಹರಿಪ್ರಿಯಾ ಲಿಪ್ ಲಾಕ್.. ರೋಮ್ಯಾಂಟಿಕ್ ಹಾಡು ಇಂಪಾಗಿದೆ!

By Web Desk  |  First Published Sep 20, 2019, 6:51 PM IST

ಎಲ್ಲಿದ್ದೆ ಇಲ್ಲಿತನಕ ಚಿತ್ರದ ರೋಮ್ಯಾಂಟಿಕ್ ಹಾಡು ರಿಲೀಸ್/ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ ಲಿಪ್ ಲಾಕ್ ಸೀನ್/ ಮಾತುಗಾರ ಸೃಜನ್ ಜತೆ ಕಾಣಿಸಿಕೊಂಡಿರುವ ಹರಿಪ್ರಿಯಾ


ಬೆಂಗಳೂರು[ಸೆ. 20] ಮಜಾ ಟಾಕೀಸ್ ಮೂಲಕ ಮನೆ ಮಾತಾಗಿರುವ ಮಾತುಗಾರ ಸೃಜನ್ ಮತ್ತು ಕನ್ನಡತಿ ಹರಿಪ್ರಿಯಾ ಕಾಣಿಸಿಕೊಂಡಿರುವ ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರದ ಸಾಂಗ್ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ಈ ಖುಷಿಗೆ ಹೆಸರೇನು... ಈ ನಶೆಗೆ ವಶ ನಾನು.. ಎಂಬ ರೋಮ್ಯಾಂಟಿಕ್ ಸಾಂಗ್ ನಲ್ಲಿ ಹರಿಪ್ರಿಯಾ ಮತ್ತು ಸೃಜನ್ ಕಾಣಿಸಿಕೊಂಡಿದ್ದಾರೆ. ಹಾಡು ಇಂಪಾಗಿದೆ ಜತೆಗೆ ನಾಯಕ ಮತ್ತು ನಾಯಕಿ ಬೋಲ್ಡ್ ಆಗಿ ತೆರೆ ಹಂಚಿಕೊಂಡಿದ್ದಾರೆ.

Tap to resize

Latest Videos

ಹಾಡಿನಲ್ಲಿ ಎರಡು ಕಡೆ ಲಿಪ್ ಲಾಕ್  ಸೀನ್ ಬಂದು ಹೋಗುತ್ತದೆ. ಬಹುಪಾಲು ವಿದೇಶದಲ್ಲಿಯೇ ಶೂಟ್ ಮಾಡಿರುವ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

 

click me!