Samantha: ಪತಿ ರಾಜ್ ನಿಡಿಮೋರುಗೆ ಸಮಂತಾ ಮುದ್ದಾಗಿ ಏನ್ ಕರೀತಾರೆ ಗೊತ್ತಾ? ನಿಕ್‌ನೇಮ್ ಸೀಕ್ರೆಟ್ ರಿವೀಲ್!

Published : Jun 27, 2026, 11:28 PM IST
Samantha

ಸಾರಾಂಶ

Samantha: ಸದ್ಯ 'ಮಾ ಇಂಟಿ ಬಂಗಾರಂ' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಸಮಂತಾ, ಪತಿಯೊಂದಿಗೆ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ನಡುವೆಯೇ ಅವರು ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.

ಸದ್ಯ 'ಮಾ ಇಂಟಿ ಬಂಗಾರಂ' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಸಮಂತಾ, ಪತಿಯೊಂದಿಗೆ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ನಡುವೆಯೇ ಅವರು ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಸಮಂತಾ ತಮ್ಮ ಪತಿ ರಾಜ್ ನಿಡಿಮೋರು ಅವರನ್ನು ಮುದ್ದಾಗಿ ಏನೆಂದು ಕರೆಯುತ್ತಾರೆ ಗೊತ್ತೇ? ಸಮಂತಾ ತಮ್ಮ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದ್ದಾರೆ. 'ಮಾ ಇಂಟಿ ಬಂಗಾರಂ' ಮೂಲಕ ವೃತ್ತಿಪರ ಯಶಸ್ಸು ಮತ್ತು ವೈಯಕ್ತಿಕ ಜೀವನದಲ್ಲಿ ಅನಿರೀಕ್ಷಿತ ಸಿಹಿ ಸುದ್ದಿ, ಎರಡನ್ನೂ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಕಂಗೆಟ್ಟಿದ್ದ ಸಮಂತಾ, ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಪ್ರೀತಿಸಿ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ 'ಮಾ ಇಂಟಿ ಬಂಗಾರಂ' ಸಕ್ಸಸ್ ಮೀಟ್‌ನಲ್ಲಿ ಸಮಂತಾ, ತಮ್ಮ ಪತಿ ಹಾಗೂ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಬಗ್ಗೆ ಆಸಕ್ತಿಕರ ವಿಚಾರ ಹಂಚಿಕೊಂಡರು. ಸಿನಿಮಾದಲ್ಲಿ ತಮ್ಮ ತೆರೆಯ ಮೇಲಿನ ಪತಿಯನ್ನು 'ಅನಿ' ಎಂದು ಕರೆಯುತ್ತಾರೆ. ಹಾಗಾದರೆ ನಿಜ ಜೀವನದಲ್ಲಿ ಪತಿ ರಾಜ್‌ಗೆ ಏನು ಕರೆಯುತ್ತಾರೆ ಎಂಬ ಪ್ರಶ್ನೆ ಎದುರಾಯಿತು.

ಇದಕ್ಕೆ ನಾಚಿಕೆಯಿಂದಲೇ ಉತ್ತರಿಸಿದ ಸಮಂತಾ, 'ರಾಜ್ ಅವರ ತಾಯಿ ಮತ್ತು ಸಹೋದರಿ ಮನೆಯಲ್ಲಿ ಪ್ರೀತಿಯಿಂದ 'ಬಾಬು' ಎಂದು ಕರೆಯುತ್ತಾರೆ. ಅವರಂತೆಯೇ ನಾನೂ ಕೂಡ ರಾಜ್ ಅವರನ್ನು 'ಬಾಬು' ಎಂದೇ ಕರೆಯುತ್ತೇನೆ' ಎಂದು ನಗುತ್ತಾ ಹೇಳಿದರು. ಈ ಕ್ಯೂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ಯಶಸ್ಸಿನ ಜೊತೆಗೆ ಸಮಂತಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

ತಾವು ಗರ್ಭಿಣಿ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ 'ಮಾ ಇಂಟಿ ಬಂಗಾರಂ' ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಅವರು, ತಮ್ಮ ಜೀವನಕ್ಕೆ ಹೊಸ ಅತಿಥಿ ಬರಲಿದ್ದಾರೆ ಎಂದು ಸಂತಸದಿಂದ ತಿಳಿಸಿದರು. ಈ ಸುದ್ದಿ ಕೇಳಿದೊಡನೆ ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು. ಈ ಘೋಷಣೆಯಿಂದ ಅಭಿಮಾನಿಗಳ ಸಂತಸ ಇಮ್ಮಡಿಯಾಗಿದೆ.

ದಾಖಲೆಗಳ ಸುರಿಮಳೆ

ಸುಮಾರು ಮೂರು ವರ್ಷಗಳ ಗ್ಯಾಪ್ ನಂತರ ಸಮಂತಾ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಜೂನ್ 19 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ದಾಖಲೆಗಳ ಸುರಿಮಳೆಗೈಯುತ್ತಿದೆ. ಸೆಂಟಿಮೆಂಟ್ ಮತ್ತು ಫ್ಯಾಮಿಲಿ ಡ್ರಾಮಾ ಕಥೆಯುಳ್ಳ ಈ ಚಿತ್ರದಲ್ಲಿ ಸಮಂತಾ ನಟನೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಿಡುಗಡೆಯಾದ ವಾರದಲ್ಲೇ ಈ ಸಿನಿಮಾ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Nagadurga: ಸಿನಿಮಾಗೆ ಎಂಟ್ರಿ ಕೊಡ್ತಿದ್ದಂತೆ 15 ಕಂಡೀಷನ್ ಹಾಕಿದ ಜಾನಪದ ಕಲಾವಿದೆ!
Anushka Shetty: ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್: ಬಾಹುಬಲಿ ರಹಸ್ಯ ಬಯಲು