
ಬೆಂಗಳೂರು (ಡಿ.05): ಸದ್ಯಕ್ಕೆ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್'ನಲ್ಲಿರುವ, ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ರೊಮ್ಯಾಂಟಿಕ್ ಹಾಡು ಟೈಗರ್ ಜಿಂದಾ ಹೈ ಚಿತ್ರದ ಮೋಸ್ಟ್ ಬ್ಯೂಟಿಫುಲ್ ರೊಮ್ಯಾಂಟಿಕ್ ಹಾಡು, ಈಗ ಬಾಲಿವುಡ್ ನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಹಳೆ ಲವ್ ಸ್ಟೋರಿ ಮತ್ತೆ ಚಿಗರು ಹೊಡೆಯುವಂತೆ ಮಾಡಿದೆ. ಸಲ್ಮಾನ್ ಖಾನ್ ಮಂಜುಗಡ್ಡೆ ಮೇಲೆ ಕತ್ರೀನಾ ಕೈಫ್ ಭಾವಚಿತ್ರವನ್ನ ಬಿಡಿಸಿದ್ದು , ಈಗ ಇವರಿಬ್ಬರ ಹಳೇ ಲವ್ ಸ್ಟೋರಿಗೆ ಜೀವ ಬಂದಿದೆ ಎನ್ನಲಾಗುತ್ತಿದೆ.
ಸಿನಿಮಾವೊಂದು ಬರುತ್ತಿದೆ ಅಂದರೆ ಆ ಜೋಡಿಯ ಫೋಟೊಶೂಟ್ ಇದ್ದೆ ಇರುತ್ತದೆ. ಮ್ಯಾಗಜಿನ್ ಕವರ್ ಪೇಜ್'ಗಾಗಿ ಈ ಜೋಡಿ ಸಖತ್ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ಸಲ್ಲೂ ಕ್ಯಾಟ್ 5 ವರ್ಷಗಳ ನಂತರ ಮತ್ತೆ ಜೋಡಿಯಾಗಿದ್ದು ಈ ಜೋಡಿಯ ಸಿನಿಮಾ ಈ ಬಾರಿ ಬ್ಲಾಕ್ ಬಸ್ಟರ್ ಹಿಟ್ ಆಗೋದು ಗ್ಯಾರೆಂಟಿ ಅಂತಿದ್ದಾರೆ ಅಭಿಮಾನಿಗಳು. ಒಟ್ಟಾರೆ ಇವರಿಬ್ಬರ ಆತ್ಮೀಯತೆ ಕುತೂಹಲ ಮೂಡಿಸಿದ್ದಂತೂ ನಿಜ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.