ಮಕ್ಕಳೇ ಡಿಸೈನರ್ಸ್! ಕಾಲಿನ ಮೇಲೆ ಆ ಹೊಸ ಟ್ಯಾಟೂ ಹಾಕಿಸಿಕೊಂಡ ಗ್ಲೋಬಲ್ ಪಾಪ್ ತಾರೆ ರಿಹಾನಾ!

Published : May 09, 2026, 09:22 PM IST
Rihanna

ಸಾರಾಂಶ

ಗ್ಲೋಬಲ್ ಪಾಪ್ ಐಕಾನ್ ರಿಹಾನಾ ತಮ್ಮ ಕಾಲಿನ ಮೇಲೆ ಒಂದು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ವಿಶೇಷತೆ ಏನೆಂದರೆ, ಈ ಟ್ಯಾಟೂವನ್ನು ಡಿಸೈನ್ ಮಾಡಿದ್ದು ರಾಪರ್ A$AP Rocky ಜೊತೆಗಿನ ಅವರ ಮೂವರು ಮಕ್ಕಳು!

ಪಾಪ್ ತಾರೆ ರಿಹಾನಾ ತಮ್ಮ ಮೂವರು ಮಕ್ಕಳೇ ಗೀಚಿದ ಚಿತ್ರವನ್ನು ಕಾಲಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ರಾಪರ್ A$AP Rocky ಜೊತೆಗಿನ ಮಕ್ಕಳ ಈ ಆರ್ಟ್‌ವರ್ಕ್‌ ಅನ್ನು ಖ್ಯಾತ ಟ್ಯಾಟೂ ಕಲಾವಿದ ಬ್ಯಾಂಗ್ ಬ್ಯಾಂಗ್ ಅವರು ರಿಹಾನಾ ಕಾಲಿನ ಮೇಲೆ ಮೂಡಿಸಿದ್ದಾರೆ.

ಗ್ಲೋಬಲ್ ಪಾಪ್ ಐಕಾನ್ ರಿಹಾನಾ ತಮ್ಮ ಕಾಲಿನ ಮೇಲೆ ಒಂದು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ವಿಶೇಷತೆ ಏನೆಂದರೆ, ಈ ಟ್ಯಾಟೂವನ್ನು ಡಿಸೈನ್ ಮಾಡಿದ್ದು ರಾಪರ್ A$AP Rocky ಜೊತೆಗಿನ ಅವರ ಮೂವರು ಮಕ್ಕಳು! E! News ವರದಿ ಪ್ರಕಾರ, ರಿಹಾನಾ ಅವರ ಎಡಗಾಲಿನ ಮೇಲೆ ಈ ದೊಡ್ಡ ಸ್ಕ್ರಿಬಲ್-ಶೈಲಿಯ ಟ್ಯಾಟೂವನ್ನು ಖ್ಯಾತ ಸೆಲೆಬ್ರಿಟಿ ಟ್ಯಾಟೂ ಕಲಾವಿದ ಬ್ಯಾಂಗ್ ಬ್ಯಾಂಗ್ (ಕೀತ್ ಮೆಕ್ಕರ್ಡಿ) ಹಾಕಿದ್ದಾರೆ.

ಟ್ಯಾಟೂ ಹಾಕುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬ್ಯಾಂಗ್ ಬ್ಯಾಂಗ್, ಇದನ್ನು 'ಅವರ ಮಕ್ಕಳೇ ಡಿಸೈನ್ ಮಾಡಿದ್ದು' ಎಂದು ಬರೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ರಿಹಾನಾ ಮತ್ತು A$AP Rocky ಅವರ ಮಕ್ಕಳಾದ 3 ವರ್ಷದ Rza, 2 ವರ್ಷದ Riot ಮತ್ತು 7 ತಿಂಗಳ ಮಗಳು Rocki, ಬಣ್ಣದ ಮಾರ್ಕರ್‌ಗಳಿಂದ ಚಿತ್ರ ಬಿಡಿಸಿ ಸ್ಟಿಕ್ಕರ್‌ಗಳಿಂದ ಅಲಂಕರಿಸಿದ್ದರು. ಆದರೆ, ರಿಹಾನಾ ಈ ಡಿಸೈನ್ ಅನ್ನು ಕೇವಲ ಕಪ್ಪು ಬಣ್ಣದ ಟ್ಯಾಟೂ ಆಗಿ ಹಾಕಿಸಿಕೊಳ್ಳಲು ನಿರ್ಧರಿಸಿದರು.

ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ರಿಹಾನಾ, "ಈ ಶಾಪ್‌ನಲ್ಲಿ ನಾನು ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ" ಎಂದು ತಮಾಷೆ ಮಾಡಿದ್ದಾರೆ. ಇನ್ನೊಂದು ಕ್ಲಿಪ್‌ನಲ್ಲಿ, "ಮುಖ್ಯ ಶಾಟ್‌ಗಳಲ್ಲಿ ನನ್ನ... ಚೆನ್ನಾಗಿ ಕಾಣುವಂತೆ ನೋಡಿಕೊಳ್ಳಿ" ಎಂದು ನಗುತ್ತಾ ಹೇಳಿದ್ದಾರೆ.

ರಿಹಾನಾ ಮತ್ತು ಬ್ಯಾಂಗ್ ಬ್ಯಾಂಗ್ ಹಳೆಯ ನಂಟು

ರಿಹಾನಾ ಅವರು ಬ್ಯಾಂಗ್ ಬ್ಯಾಂಗ್ ಬಳಿ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2013ರಲ್ಲಿ ಹಾಕಿಸಿಕೊಂಡಿದ್ದ ಮಾವೊರಿ ಟ್ಯಾಟೂ ಮೇಲೆ, ಅವರ ಬಲಗೈಗೆ ಹೆನ್ನಾ ಡಿಸೈನ್‌ನ ಟ್ಯಾಟೂ ಹಾಕಿದ್ದೂ ಇದೇ ಕಲಾವಿದ.

ಮಕ್ಕಳ ಸಂಗೀತ ಪ್ರತಿಭೆ

ಚಿತ್ರ ಬಿಡಿಸುವುದರ ಜೊತೆಗೆ, ರಿಹಾನಾ ಅವರ ಮಕ್ಕಳಿಗೆ ಸಂಗೀತದಲ್ಲೂ ಆಸಕ್ತಿ ಬೆಳೆಯುತ್ತಿದೆ. 2025ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಿಹಾನಾ, "ಅವರಿಬ್ಬರಿಗೂ ಸಂಗೀತ ಇಷ್ಟ. ವಾದ್ಯಗಳನ್ನು ನುಡಿಸುವುದು ಇಷ್ಟ" ಎಂದು ಹೇಳಿದ್ದರು. ಅವರಿಗೆ ಈ ಗುಣ ಯಾರಿಂದ ಹೆಚ್ಚು ಬಂದಿದೆ ಎಂದು ನನಗೆ ಗೊತ್ತಿಲ್ಲ. ಇದು ನನ್ನಿಂದನಾ ಅಥವಾ ನಿನ್ನಿಂದನಾ ರಾಕಿ? ಎಂದು ನಾನು ಕೇಳುತ್ತೇನೆ ಎಂದೂ ಅವರು ತಮಾಷೆಯಾಗಿ ಹೇಳಿದ್ದರು. ನನ್ನ ಕಿರಿಯ ಮಗ Riot ಫ್ರೀಸ್ಟೈಲ್ ಮಾಡುತ್ತಾನೆ. ಅದು ಖಂಡಿತ ರಾಕಿಯಿಂದ ಬಂದಿದ್ದು ಎಂದು ರಿಹಾನಾ ತಿಳಿಸಿದ್ದಾರೆ.

ಮಕ್ಕಳ ಬಗ್ಗೆ A$AP Rocky ಮಾತು

ಇದೇ ವೇಳೆ, A$AP Rocky ಕೂಡ ತಮ್ಮ ಮಕ್ಕಳ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. "Rza ಅಷ್ಟಾಗಿ ಮಾತಾಡಲ್ಲ. ಆದರೆ Riot ಬಾಯಿ ಮುಚ್ಚುವುದೇ ಇಲ್ಲ" ಎಂದು ತಮಾಷೆ ಮಾಡಿದ್ದಾರೆ. E! News ವರದಿಯ ಪ್ರಕಾರ, ಈ ವರ್ಷದ ಆರಂಭದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದರು. "ಮೊದಲು Riotಗೆ ನಡೆಯಲು, ಮಾತನಾಡಲು ಬಾರದಿದ್ದಾಗ Rza ಅವನಿಗೆ ತುಂಬಾ ಕಾಟ ಕೊಡುತ್ತಿದ್ದ. ಈಗ Riot ಅವನ ಪುಸ್ತಕ, ಪೆಸಿಫೈಯರ್ ಎಲ್ಲ ಕಿತ್ತುಕೊಳ್ಳುತ್ತಾನೆ" ಎಂದು ಸಹೋದರರ ಬಾಂಧವ್ಯದ ಬಗ್ಗೆ ರಾಕಿ ತಮಾಷೆಯಾಗಿ ಹೇಳಿದ್ದನ್ನು E! News ವರದಿ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಾಲಿವುಡ್‌ನಲ್ಲಿ ಬಾಲಿವುಡ್ ನಟಿ ಹವಾ: ಅಲೌಕಿಕ ಯುದ್ಧದ ಕಥೆಯಲ್ಲಿ ದಿಶಾ ಪಟಾನಿ ಹೊಸ ಅವತಾರ!
ದಳಪತಿ ವಿಜಯ್ 'SSLC ಮಾಕ್ಸ್‌ಕಾರ್ಡ್' ವೈರಲ್ ಆಗಿರೋ ಬೆನ್ನಲ್ಲೇ ಓಡಾಡ್ತಿರೋ ಕಾಮೆಂಟ್ ಏನ್ ಗೊತ್ತಾ?