ರಣಬೀರ್ ಕಪೂರ್ ಮದ್ವೆಯಂತೆ!

Published : Apr 26, 2018, 07:12 PM IST
ರಣಬೀರ್ ಕಪೂರ್ ಮದ್ವೆಯಂತೆ!

ಸಾರಾಂಶ

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಔಟಿಂಗು, ಡೇಟಿಂಗು ಅಂತೆಲ್ಲಾ ಐದು ವರ್ಷಗಳ ಕಾಲ ಜೊತೆಗೆ ಇದ್ದು, ಆಮೇಲೆ ಬ್ರೇಕ್ ಅಪ್ ಆದವರು. ಪ್ರೀತಿ ಸಹಜ, ಅದು ಬ್ರೇಕ್ ಅಪ್ ಆಗುವುದು ಇನ್ನೂ ಸಹಜ ಎನ್ನುವುದು ಬಾಲಿವುಡ್‌ನಲ್ಲಿ ಸದಾ ಹಸಿರಾಗಿರುವ ಮಾತು. ಅದಕ್ಕೆ ಈ ಜೋಡಿಯೂ ಹೊರತಾಗಲಿಲ್ಲ. ಆದದ್ದೆಲ್ಲಾ ಆಗಿ ಹೋಯಿತು ಮುಂದಿನ ದಾರಿ ಯಾವುದಯ್ಯ ಎಂದು ರಣಬೀರ್ ಕಪೂರ್ ಅವರನ್ನು ಕೇಳಿದರೆ ಅವರು ಸದ್ಯ ಏನು ಹೇಳುತ್ತಾರೋ ಗೊತ್ತಿಲ್ಲ. ಆದರೆ ಅವರ ತಂದೆ ರಿಷಿ ಕಪೂರ್ ಒಂದು ವಿಷಯ  ಹೊರ ಹಾಕಿದ್ದಾರೆ. 

ಅದು ರಣಬೀರ್ ಅಭಿಮಾನಿಗಳು, ಅದರಲ್ಲೂ ಹೆಂಗೆಳೆಯರ ಮನದಲ್ಲಿ ಸಣ್ಣ ನಗುವನ್ನೂ ಜೊತೆ ಜೊತೆಯಲ್ಲೇ ನೋವನ್ನೂ ಉಂಟುಮಾಡಿದೆ. ನಗುವಿಗೆ ಕಾರಣ ರಣಬೀರ್ ಇನ್ನು ಯಾವುದೇ ಪ್ರೀತಿಯಲ್ಲಿ  ಬೀಳುವುದಿಲ್ಲ ಎನ್ನುವುದಾದರೆ, ನೋವಿಗೆ ಇನ್ನೇನು ಕೆಲವೇ ತಿಂಗಳಲ್ಲಿ ದಾಂಪತ್ಯಕ್ಕೆ ಜಿಗಿಯುತ್ತಾರೆ ಎನ್ನುವುದು. ಈ ವಿಚಾರವನ್ನು ಸ್ವತಃ ರಣಬೀರ್ ತಂದೆ ರಿಷಿ ಕಪೂರ್  ಬಹಿರಂಗಪಡಿಸಿದ್ದಾರೆ. ‘ಒಬ್ಬ ತಂದೆಯಾಗಿ ರಣಬೀರ್‌ಗೆ ಒಂದು ಒಳ್ಳೆಯ ಜೀವನ ಕಟ್ಟಿಕೊಡಬೇಕು. ಅವನಿಗೆ ಬೇಗ ಮದುವೆಯಾಗಿ ನಾನು ತಾತನಾಗಬೇಕು. ಇನ್ನು ಪ್ರೀತಿ  ಮಾಡಿ ಮದುವೆಯಾಗುವುದೆಲ್ಲವೂ ದೂರದ ಮಾತು. ಸಾಧ್ಯವಾದಷ್ಟು ಬೇಗ ರಣಬೀರ್ ಮದುವೆಯನ್ನು ಕಣ್ತುಂಬಿಕೊಳ್ಳುತ್ತೇನೆ. ಇದಕ್ಕಾಗಿ ಸಕಲ ಸಿದ್ಧತೆಯೂ ನಡೆಯುತ್ತಿದೆ’ ಎಂದಿರುವುದು  ರಣಬೀರ್ ಮದುವೆ ಸುದ್ದಿ ಯಾವಾಗ ಹೊರ ಬೀಳುವುದೋ ಎನ್ನುವ ಕುತೂಹಲವನ್ನು ಹೆಚ್ಚು ಮಾಡಿದೆ.

ಅದಕ್ಕಿಂತ ಹೆಚ್ಚಾಗಿ ಹುಡುಗಿ ಯಾರಾಗಿರಬಹುದು, ರಣಬೀರ್ ಮನಸ್ಸಿನಲ್ಲಿ ಏನಿದೆ? ರಿಷಿ ಕಪೂರ್ ಯಾರನ್ನಾದರೂ ಈಗಾಗಲೇ ಸೆಲೆಕ್ಟ್ ಮಾಡಿದ್ದಾರಾ? ಹಿಂದೊಮ್ಮೆ ‘ಹೌದು ನಾನು  ಪ್ರೀತಿ ಮಾಡುತ್ತಿದ್ದೇನೆ. ಆದರೆ ಮದುವೆ ವಿಚಾರ ಈಗ ನನ್ನ ಮುಂದೆ ಇಲ್ಲ’ ಎಂದು ಮಾಧ್ಯಮಗಳ ಮುಂದೆಯೇ ಹೇಳಿದ್ದ ರಣಬೀರ್ ಪ್ರೀತಿ ಮಾಡಿ ಮದುವೆಯಾಗುವುದು ಬೇಡ,  ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆಯೇ ಎನ್ನುವ ಸಾಕಷ್ಟು ಪ್ರಶ್ನೆಗಳನ್ನು ರಾಶಿ ಮಾಡಿಕೊಂಡು  ಕುಂತಿದೆ ರಣಬೀರ್ ಅಭಿಮಾನಿ ಬಳಗ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!