ರಾಮಾಯಣಕ್ಕೆ ಸಂಬಂಧಿಸಿದ ಸೀತಾ ಮಾತೆಯ ಜಾನಕಿ ಮಂದಿರ, 3 ಮಹಡಿ, 60 ಕೊಠಡಿ ರೋಚಕ ರಹಸ್ಯ

Chethan Kumar   | ANI
Published : Nov 13, 2026, 04:23 PM IST
Secrets of 152 Year-Old Janaki Mandir

ಸಾರಾಂಶ

ರಾಮಾಯಣ ಜೊತೆ ನೇರ ಸಂಬಂಧ ಹೊಂದಿದ ಸೀತಾ ಮಾತೆಗಾಗಿ ನಿರ್ಮಿಸದ ಜಾನಕಿ ಮಂದಿರ ಭವ್ಯ ಹಿಂದೂ ಮಂದಿರಗಳ ಪೈಕಿ ಒಂದಾಗಿದೆ. 3 ಮಹಡಿ, 60 ಕೊಠಡಿ ಹಾಗೂ ಬರೋಬ್ಬರಿ 152 ವರ್ಷ ಹಳೇ ಈ ಮಂದಿರದ ರೋಚಕ ರಹಸ್ಯ ಇಲ್ಲಿದೆ.

ಕಾಠ್ಮಂಡು (ನ.13) ರಾಮಾಯಣ ಸಿನಿಮಾಗೆ ಜನರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀರಾಮ, ಸೀತೆ, ರಾವಣ, ಜಟಾಯು, ಪುಷ್ಪಕ ವಿಮಾನ ಸೇರಿದಂತೆ ಹಲವು ಅತ್ಯಂತ ರೋಚಕ ಸನ್ನಿವೇಶಗಳು ಅದ್ಭುತವಾಗಿ ಚಿತ್ರಿಸಲಾಗಿದೆ. ರಾಮಾಯಣ ಸಿನಿಮಾದಲ್ಲಿ ಸೀತಾ ದೇವಿಯನ್ನು ರಾವಣ ಪುಷ್ಪಕ ವಿಮಾನದಲ್ಲಿ ಅಪಹರಿಸುವ ಹಾಗೂ ಜಟಾಯುವಿನ ಯುದ್ಧವರೆಗೆ ನೀಡಲಾಗಿದೆ. ಇನ್ನುಳಿದ ಭಾಗ ಎರಡನೇ ಭಾಗದಲ್ಲಿ ನೀಡಲಾಗುತ್ತದೆ. ರಾಮಾಯಣದ ಸೀತಾ ದೇವಿಗೆ ಸಂಬಂಧಿಸಿದ ಅತ್ಯಂತ ಭವ್ಯ ಮಂದಿರವಿದೆ. ಜಾನಕಿ ಮಂದಿರ 3 ಮಹಡಿ, 60 ಕೊಠಡಿಗಳ ಭವ್ಯ ಮಂದಿರ. ಸೀತಾ ದೇವಿಯ ಹುಟ್ಟೂರಿನಲ್ಲೇ ಈ ಮಂದಿರವಿದೆ.

ರಾಮಾಯಣದ ಕೇಂದ್ರಬಿಂದು ಸೀತಾ ಮಾತೆ. ಜನಕ ಮಹಾರಾಜನ ಮುದ್ದಿನ ಮಗಳಾಗಿ, ಪ್ರಭು ಶ್ರೀರಾಮನ ಧರ್ಮಪತ್ನಿಯಾಗಿ ಹಾಗೂ ಲವ-ಕುಶರ ತಾಯಿಯಾಗಿ ಸೀತಾ ಮಾತೆಯನ್ನು ಇಡೀ ಜಗತ್ತು ಪೂಜಿಸುತ್ತದೆ. ಭಾರತದಲ್ಲಿ ಶ್ರೀರಾಮನಿಗೆ ಸಮರ್ಪಿತವಾದ ನೂರಾರು ಭವ್ಯ ಮಂದಿರಗಳಿವೆ. ಆದರೆ, ಸೀತಾ ಮಾತೆಯ ತವರು ನೆಲವಾದ ನೇಪಾಳದಲ್ಲಿ ಆಕೆಗಾಗಿಯೇ ನಿರ್ಮಿಸಲಾದ ಅತ್ಯಂತ ವಿಶೇಷ ಹಾಗೂ ಐತಿಹಾಸಿಕ ದೇವಾಲಯವಿದೆ. ಇದು ನೇಪಾಳದ ಧನುಷಾ ಜಿಲ್ಲೆಯ ಜನಕಪುರದಲ್ಲಿರುವ ಜಾನಕಿ ಮಂದಿರ. 152 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ದೇವಾಲಯವು ಕೇವಲ ಧಾರ್ಮಿಕ ತಾಣವಷ್ಟೇ ಅಲ್ಲ, ಅದ್ಭುತ ವಾಸ್ತುಶಿಲ್ಪದ ಸಾಕ್ಷಿಯಾಗಿದೆ.

ನೇಪಾಳದ ಅತೀ ದೊಡ್ಡ ದೇವಾಲಯ

ನೇಪಾಳ ಪ್ರವಾಸೋದ್ಯಮ ಮಂಡಳಿಯ (Nepal Tourism Board) ಅಧಿಕೃತ ಮಾಹಿತಿಯ ಪ್ರಕಾರ, ಈ ಜಾನಕಿ ಮಂದಿರವನ್ನು ಕ್ರಿ.ಶ 1874 ರಲ್ಲಿ ನಿರ್ಮಿಸಲಾಯಿತು. ಸ್ಥಳೀಯ ಮಿಥಿಲಾ ವಾಸ್ತುಶಿಲ್ಪ ಶೈಲಿಯ ಈ ದೇವಾಲಯವಿದೆ. 3 ಮಹಡಿಗಳನ್ನು ಹೊಂದಿದೆ. ಆವರಣದಲ್ಲಿ 60 ಕೊಠಡಿಗಳಿವೆ. ನೇಪಾಳದ ಅತೀ ದೊಡ್ಡ ದೇವಾಲಯ ಇದಾಗಿದೆ. 1480 ಚದರಮೀಟರ್ ಹೆಚ್ಚು ವೀಸ್ತೀರ್ಣದಲ್ಲಿ ದೇವಾಲಯವಿದೆ. ಕಲ್ಲು ಹಾಗೂ ಅಮೃತಶಿಲೆ ಕೆತ್ತಲಾಗಿದೆ.

9 ಲಕ್ಷ ಚಿನ್ನದ ನಾಣ್ಯದಲ್ಲಿ ನಿರ್ಮಾಣವಾದ ಮಂದಿರ

ಸ್ಥಳೀಯರು ಈ ಜಾನಕಿ ಮಂದಿರವನ್ನು ಪ್ರೀತಿಯಿಂದ 'ನೌ ಲಖಾ ಮಂದಿರ್' (Nau Lakha Mandir) ಎಂದೂ ಕರೆಯುತ್ತಾರೆ. ಈ ದೇವಾಲಯದ ನಿರ್ಮಾಣಕ್ಕೆ ದುಬಾರಿ ಖರ್ಚು ಮಾಡಲಾಗಿತ್ತು. ಭವ್ಯ ಮಂದಿರ ನಿರ್ಮಾಣಕ್ಕೆ ಅೆಂದಿನ ಕಾಲದಲ್ಲಿ ಬರೋಬ್ಬರಿ 9 ಲಕ್ಷ ಚಿನ್ನದ ನಾಣ್ಯಗಳು ವೆಚ್ಚವಾಗಿತ್ತು. ಇದೇ ಕಾರಣದಿಂದ ನೌ ಲಖಾ ಮಂದಿರ್ ಅನ್ನೋ ಹೆಸರಿದೆ.

ಪುರಾಣದಲ್ಲಿ ಈ ಸ್ಥಳ ಅತ್ಯಂತ ಪವಿತ್ರವಾಗಿದೆ. ಜನಕ ಮಹಾರಾಜ ಶಿವ ಧನಸ್ಸು ಪೂಜಿಸಿದ ಸ್ಥಳವಿದು. 1956ರಲ್ಲಿ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಸ್ಮಾರಕ ವಲಯ ಎಂದು ಘೋಷಿಸಿದೆ. ಈ ಮಂದಿರದ ಒಂದು ಭಾಗದಲ್ಲಿ ವಿವಾಹ ಮಂಟಪವಿದೆ. ಶ್ರೀರಾಮ ಹಾಗೂ ಸೀತಾ ದೇವಿಯ ವಿವಾಹ ಮಹೋತ್ಸವ ನಡೆದ ಸ್ಥಳ ಇದೇ ಎಂದು ನಂಬಲಾಗಿದೆ. ಶುಕ್ಲ ಪಕ್ಷದ ಪಂಚಮಿದಿನ ಇಲ್ಲಿ ವಿವಾಹ ಪಂಚಮಿ ಈಗಲೂ ಆಚರಿಸಲಾಗುತ್ತದೆ. ಇದೇ ಜಾನಕಿ ಮಂದಿರದ ಕೆಲವೇ ದೂರದಲ್ಲಿ ಶ್ರೀರಾಮನಿಗೆ ಅರ್ಪಿತವಾದ ದೇವಾಲಯವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟಿ ಸೌಂದರ್ಯ ಮನೆಗೆ ಹೋದಾಗ ಆಮನಿ ಕಂಡಿದ್ದೇನು? ಇಂದಿಗೂ ಆ ದೃಶ್ಯ ಮರೆಯಲಾಗುತ್ತಿಲ್ಲವಂತೆ!
‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಸಾಯುತ್ತಿದ್ದಂತೆ… ಮೇಘಾಲಯದಲ್ಲಿ ಕಾಣಿಸಿಕೊಂಡ ನಮ್ರತಾ ಗೌಡ