ಸೂಪರ್‌ಸ್ಟಾ ರ್ ರಜನಿಕಾಂತ್ ಸಂತನಾದದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ!

Published : Mar 26, 2018, 09:05 AM ISTUpdated : Apr 11, 2018, 12:43 PM IST
ಸೂಪರ್‌ಸ್ಟಾ ರ್ ರಜನಿಕಾಂತ್ ಸಂತನಾದದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ!

ಸಾರಾಂಶ

ಹೇಳಿ ಕೇಳಿ ತಮಿಳು ಸಿನಿಮಾ ಜಗತ್ತಿನ ಸೂಪರ್‌ಸ್ಟಾರ್. ಐಷಾರಾಮಿ ಬದುಕು, ಕೈಗೆ ಕಾಲಿಗೆ ಆಳು ಕಾಳು, ಹೋದಲ್ಲೆಲ್ಲ ಮುತ್ತಿಕೊಳ್ಳುವ ಅಭಿಮಾನಿಗಳು ..ಎಲ್ಲ ವೈಭವವನ್ನೂ ತೊರೆದು ವಾರವೋ, ಹದಿನೈದು ದಿನವೋ ಹಿಮಬೆಟ್ಟಗಳನ್ನು ಕಾಲ್ನಡಿಯಿಂದ ಏರುತ್ತ, ಸರಳ ಊಟ ಮಾಡುತ್ತ ಧ್ಯಾನದಲ್ಲೇ ಹೆಚ್ಚು ಸಮಯ ಕಳೆಯುವ ತಲೈವಾ. ಹಿಮಾಲಯ ಶ್ರೇಣಿಯಲ್ಲಿರುವ ಬಾಬಾಜಿ ಗುಹೆ ಹೊಕ್ಕು ಧ್ಯಾನಸ್ಥರಾದರೆ ಜಗತ್ತನ್ನೇ ಮರೆಯುತ್ತಾರೆ. ಅವರ ಪರಮ ಗುರು ಬಾಬಾಜಿ ಧ್ಯಾನದ ವೇಳೆ ಕಾಣಿಸಿಕೊಂಡು ಸೂಚನೆಗಳನ್ನು ನೀಡುತ್ತಾರೆ ಎಂಬ ಮಾತೂ ಇದೆ.

ಬೆಂಗಳೂರು (ಮಾ. 26):  ಹೇಳಿ ಕೇಳಿ ತಮಿಳು ಸಿನಿಮಾ ಜಗತ್ತಿನ ಸೂಪರ್‌ಸ್ಟಾರ್. ಐಷಾರಾಮಿ ಬದುಕು, ಕೈಗೆ ಕಾಲಿಗೆ ಆಳು ಕಾಳು, ಹೋದಲ್ಲೆಲ್ಲ ಮುತ್ತಿಕೊಳ್ಳುವ ಅಭಿಮಾನಿಗಳು ..ಎಲ್ಲ ವೈಭವವನ್ನೂ ತೊರೆದು ವಾರವೋ, ಹದಿನೈದು ದಿನವೋ ಹಿಮಬೆಟ್ಟಗಳನ್ನು ಕಾಲ್ನಡಿಯಿಂದ ಏರುತ್ತ, ಸರಳ ಊಟ ಮಾಡುತ್ತ ಧ್ಯಾನದಲ್ಲೇ ಹೆಚ್ಚು ಸಮಯ ಕಳೆಯುವ ತಲೈವಾ. ಹಿಮಾಲಯ ಶ್ರೇಣಿಯಲ್ಲಿರುವ ಬಾಬಾಜಿ ಗುಹೆ ಹೊಕ್ಕು ಧ್ಯಾನಸ್ಥರಾದರೆ ಜಗತ್ತನ್ನೇ ಮರೆಯುತ್ತಾರೆ. ಅವರ ಪರಮ ಗುರು ಬಾಬಾಜಿ ಧ್ಯಾನದ ವೇಳೆ ಕಾಣಿಸಿಕೊಂಡು ಸೂಚನೆಗಳನ್ನು ನೀಡುತ್ತಾರೆ ಎಂಬ ಮಾತೂ ಇದೆ.

‘ನಟ, ರಾಜಕಾರಣಿ ಅಂತ ಗುರುತಿಸಿಕೊಳ್ಳುವುದಕ್ಕಿಂತಲೂ ಆಧ್ಯಾತ್ಮ ಸಾಧಕ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ’ ಅನ್ನುತ್ತಾರೆ ಈ ಸೂಪರ್‌ಸ್ಟಾರ್.
ಈ ಪರಿವರ್ತನೆ ಹೇಗಾಯ್ತು?
ರಜನಿಕಾಂತ್ ಅವರ ಪಕ್ಷದ ಚಿಹ್ನೆ ಕ್ರಿಯಾಯೋಗದ ಮುದ್ರೆಯದು. ಇದಕ್ಕೆ ಅಪಾನ ಮುದ್ರಾ ಎಂದು ಹೆಸರು. ಪರಮಹಂಸ ಯೋಗಾನಂದರ ‘ಅಟೋಬಯೋಗ್ರಫಿ ಆಫ್ ಯೋಗಿ’ ಕೃತಿಯಲ್ಲಿ ಈ ಮುದ್ರೆಯ ಪ್ರಸ್ತಾಪ ಇದೆ. ವಿಶ್ವಾದ್ಯಂತ ೪೫ ಭಾಷೆಗಳಿಗೆ ಅನುವಾದಗೊಂಡು 5 ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿ ಮಾರಾಟವಾದ ಕೃತಿ ‘ಅಟೋಬಯೋಗ್ರಫಿ ಆಫ್ ಯೋಗಿ’ . 1978 ರಲ್ಲೇ ಏರ್‌ಪೋರ್ಟ್ ಬುಕ್‌ಶಾಪ್‌ನಲ್ಲಿ  ಈ ಪುಸ್ತಕ ರಜನಿಕಾಂತ್ ಕಣ್ಣಿಗೆ ಬಿದ್ದಿತ್ತು. ಅದೇನೋ ಸೆಳೆತ. ಕೂಡಲೇ ಖರೀದಿಸಿದರು.
13 ವರ್ಷಗಳ ಕಾಲ ಓದಲಾಗಲಿಲ್ಲ. ಕಾರಣ ಇದನ್ನು ಓದುವಷ್ಟು ಇಂಗ್ಲೀಷ್ ಜ್ಞಾನ ಇರಲಿಲ್ಲ. ಕೊನೆಗೂ ಈ ಕೃತಿಯನ್ನು ಓದುವ ಅವಕಾಶ ಒದಗಿದ್ದು 1991 ರಲ್ಲಿ. ರಜನಿ ಸಿನಿಮಾದಿಂದ ನಿವೃತ್ತರಾಗಲು ನಿರ್ಧರಿಸಿದ ಹೊತ್ತದು. ಇವರ ಯೋಗಗುರು ಅಮೆರಿಕದಲ್ಲಿರುವ ಸಚ್ಚಿದಾನಂದ ಸರಸ್ವತಿ ‘ಅಟೋಬಯೋಗ್ರಫಿ ಆಫ್ ಯೋಗಿ’ ಓದಲು
ಹೇಳುತ್ತಾರೆ.
‘ಗುರುಗಳ ಆಣತಿಯಂತೆ ಕೈಗೆತ್ತಿಕೊಂಡ ಆ ಕೃತಿಯನ್ನು ಕೆಳಗಿಡಲಾಗಲಿಲ್ಲ. ರಾತ್ರಿ ಹಗಲು ಓದುತ್ತಿದ್ದೆ. ಆವರೆಗೂ ಇಲ್ಲದ ಮನಃಶ್ಯಾಂತಿ, ಆನಂದ ಇದನ್ನೋದುತ್ತಿದ್ದರೆ ಸಿಕ್ಕುತ್ತಿತ್ತು. ಬಾಬಾಜಿ ಅವರಿಂದ ಸಮ್ಮೋಹಿತನಾದಂತೆ ಅನಿಸಿತು. ಬ್ರಹ್ಮಾಂಡದಲ್ಲಿ ನನ್ನ ಸ್ಥಾನ ಯಾವುದು ಎಂಬ ಪ್ರಶ್ನೆ ಹುಟ್ಟಿತು. ಬಾಬಾಜಿಯ ಸಾನ್ನಿಧ್ಯದ ದಿವ್ಯ ಆನಂದದ ಮುಂದೆ ಎಲ್ಲವೂ ಶೂನ್ಯವಾಗಿ ಕಂಡಿತು’ ಎಂದು ಆ ಅನುಭವ ಹಂಚಿಕೊಳ್ಳುತ್ತಾರೆ ರಜನಿ.

ಪುಸ್ತಕದಲ್ಲೇನಿದೆ?
ಯೋಗಾನಂದರ ಆಧ್ಯಾತ್ಮಿಕ ಬದುಕಿನ ಕಥನ. ಅವರ ಆಧ್ಯಾತ್ಮಿಕ ಆಸಕ್ತಿ, ಗುರುವಿಗಾಗಿನ ಹುಡುಕಾಟ, ಹಲವು ಆಧ್ಯಾತ್ಮ ಸಾಧಕರ ಭೇಟಿ, ಯುಕ್ತೇಶ್ವರ ಗಿರಿ ಅವರನ್ನು ಗುರುವಾಗಿ ಸ್ವೀಕರಿಸಿದ್ದು, ಲಾಹಿರಿ ಮಹಾಶಯನೆಂಬ ಮಹಾನ್ ಜ್ಞಾನಿಯ ಕಥೆ, ಮಹಾವತಾರ ಬಾಬಾಜಿ ದರ್ಶನ, ಬಳಿಕ ಇವರಲ್ಲಾದ ಪರಿವರ್ತನೆ, ಗಾಂಧೀಜಿ ಭೇಟಿ, ಗುರುವಿನ ಆಶಯದಂತೆ ಅಮೆರಿಕಾಕ್ಕೆ ಹೋಗಿ ಅಲ್ಲಿ ಆಧ್ಯಾತ್ಮದ ಜ್ಞಾನ ಪಸರಿಸಿದ್ದು ಇತ್ಯಾದಿ.

ಸ್ಟಾರ್ ಸಂತನಾದ!
ಇದನ್ನೋದಿದ ಮೇಲೆ ಸೂಪರ್‌ಸ್ಟಾರ್ ಒಬ್ಬ ಒಬ್ಬ ಸಂಪೂರ್ಣ ಆಧ್ಯಾತ್ಮ ವ್ಯಕ್ತಿಯಾದ. ಆತನ ಯೋಚನೆಗಳೆಲ್ಲ ಬಾಬಾಜಿ, ಭಗವಂತನ ಹುಡುಕಾಟದ ಸುತ್ತಲೇ ಸುಳಿಯುತ್ತಿದ್ದವು. ಹಿಮಾಲಯದ ಹಿಮಪರ್ವತಗಳಲ್ಲಿ ಸಾಧುಗಳ ಜೊತೆಗೆ ಸಂತನಂತೆ ಬದುಕಲಾರಂಭಿಸಿದ. ಯಾವುದೇ ಹೊಸ ಕೆಲಸಕ್ಕಿಳಿದರೂ ಹಿಮಾಲಯಕ್ಕೆ ಹೋಗಿ ಬಾಬಾಜಿಯ ಗುಹೆಯಲ್ಲಿದ್ದು ಧ್ಯಾನ ಮಾಡಿ ಅಲ್ಲಿಂದ ಸೂಚನೆ ಸಿಕ್ಕಿದ ಮೇಲೆ ಹಿಂತಿರುಗುವ ಮನಸ್ಥಿತಿ ಬೆಳೆಯಿತು. ರಜನಿ ‘ಬಾಬಾ’ ಎಂಬ ಸಿನಿಮಾವನ್ನೂ ರಜನಿ ಮಾಡಿದ್ದಾರೆ. ಸಾಮಾನ್ಯರಿಗೆ ಬಾಬಾಜಿ ಬಗ್ಗೆ, ಆಧ್ಯಾತ್ಮದ ಬಗ್ಗೆ ತಿಳಿಯಬೇಕು ಎಂಬ ಉದ್ದೇಶದಿಂದ ನಿರ್ಮಿಸಿದ ಈ ಚಿತ್ರದಲ್ಲಿ ಯೋಗಿಯ ಆತ್ಮಕಥೆಯ ವಿವರಗಳಿವೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!