ಬಾಲಿವುಡ್ ನಟಿಯ ಕ್ಷಮೆ ಕೋರಿದ ರಾಜಮೌಳಿ

Published : Jul 09, 2017, 07:43 PM ISTUpdated : Apr 11, 2018, 12:48 PM IST
ಬಾಲಿವುಡ್ ನಟಿಯ ಕ್ಷಮೆ ಕೋರಿದ ರಾಜಮೌಳಿ

ಸಾರಾಂಶ

ಚಿತ್ರದ ಪ್ರಚಾರ ನೀಡುವ ಸಂದರ್ಭದಲ್ಲಿ ಪ್ರದೇಶಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ' ರಾಜಮಾಳಿಯವರು ಈ ವಿಷಯವನ್ನು ಬಹಿರಂಗಪಡಿಸಿದ್ದರು.

ನವದೆಹಲಿ(ಜು.09): ಭಾರತೀಯ ಚಿತ್ರರಂಗಕ್ಕೆ ಬಾಹುಬಲಿ-1 ಮತ್ತು 2 ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಬಾಲಿವುಡ್ ನಟಿಯೊಬ್ಬರ ಕ್ಷಮೆ ಕೋರಿದ್ದಾರೆ.

ಉದ್ದೇಶಪೂರ್ವಕವಾಗಿ ಯಾವುದೇ ತಪ್ಪನ್ನು ಎಸಗದಿದ್ದರೂ ಅನಿರೀಕ್ಷಿತವಾಗಿ ತಮ್ಮ ಬಾಯಿಂದ ಹೊರಳಿದ ಒಂದು ಮಾತಿನಿಂದಾಗಿ ಒಂದು ಕಾಲದಲ್ಲಿ ಬಾಲಿವುಡ್'ನ್ನು ಆಳಿದ ಈಗಲೂ ಪ್ರಮುಖ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಶ್ರೀದೇವಿ ಅವರ ಕ್ಷಮೆಯಾಚಿಸಿದ್ದಾರೆ.

ಬಾಹುಬಲಿ-1 ಮತ್ತು 2 ರಲ್ಲಿ ಶಿವಗಾಮಿ ಪಾತ್ರವನ್ನು ನಿರ್ವಹಿಸಲು ಮೊದಲು ಚಿತ್ರತಂಡ ಈ ಮೊದಲು ಬಾಲಿವುಡ್ ನಟಿ ಶ್ರೀದೇವಿಯವರನ್ನು ಸಂಪರ್ಕಿಸಿತ್ತು. ಆದರೆ ಅವರು ಹೆಚ್ಚು ಸಂಭಾವನೆ ಕೇಳಿ ಪಾತ್ರವನ್ನು ನಿರಾಕರಿಸಿದ್ದರು. ತದನಂತರ ಅವರನ್ನು ಕೈಬಿಟ್ಟು ಬಜೆಟ್'ಗೆ ತಕ್ಕಂತೆ  ರಮ್ಯಾಕೃಷ್ಣರನ್ನು ಆಯ್ಕೆಮಾಡಿಕೊಂಡಿತ್ತು.    

ಚಿತ್ರದ ಪ್ರಚಾರ ನೀಡುವ ಸಂದರ್ಭದಲ್ಲಿ ಪ್ರದೇಶಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ' ರಾಜಮಾಳಿಯವರು ಈ ವಿಷಯವನ್ನು ಬಹಿರಂಗಪಡಿಸಿದ್ದರು. ಶ್ರೀದೇವಿಯವರು ಸಂಭಾವನೆ ಕಾರಣದಿಂದ ಶಿವಗಾಮಿ ಪಾತ್ರವನ್ನು ತಿರಸ್ಕಾರ ಮಾಡಿದ್ದಕ್ಕಾಗಿ ಚಿತ್ರತಂಡಕ್ಕೆ ಬೇಸರವಾಗಿತ್ತು' ಎಂದು ತಿಳಿಸಿದ್ದರು.

ಈ ವಿಷಯ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲಡೆ ಹಬ್ಬಿ ಶ್ರೀದೇವಿಯವರನ್ನು ತಲುಪಿ  ಬೇಸರ ವ್ಯಕ್ತಪಡಿಸಿದ್ದರು. ಈಗ ಸ್ವತಃ ಮಾಧ್ಯಮವೊಂದರ ಮೂಲಕ ಕ್ಷಮೆಯಾಚಿಸಿರುವ ರಾಜಮೌಳಿ' ಶ್ರೀದೇವಿಯವರು ಪಾತ್ರ ನಿರಾಕರಿಸಿದ್ದನ್ನು ಬಹಿರಂಗವಾಗಿ ಹೇಳಬಾರದಿದ್ದು, ಆದಾಗ್ಯೂ ಹಲವು ವರ್ಷಗಳಿಂದ ಬಾಲಿವುಡ್'ನಿಂದ  ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ಶ್ರೀದೇವಿ ಅವರ ಬಗ್ಗೆ ನನಗೆ ಬಹಳ ಗೌರವವಿದೆಮುಂದಿನ ಎಲ್ಲ ಚಿತ್ರಗಳು ಯಶಸ್ವಿಯಾಗಲಿ ಇತ್ತೀಚಿಗೆ ಬಿಡುಗಡೆಯಾಗಿರುವ 'ಅವರ 'ಮಾಮ್' ಚಿತ್ರ ಕೂಡ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!