
ಬೆಂಗಳೂರು(ಮೇ.25): ಸ್ಯಾಂಡಲ್‌ವುಡ್ ಮಟ್ಟಿಗೆ ನಟ ಆದಿತ್ಯ ಮೋಸ್ಟ್ ಎಲಿಜಬಲ್ ಬ್ಯಾಚುಲರ್. ಈಗವರು ಸದ್ದಿಲ್ಲದೇ ಸುದ್ದಿ ಆಗದೇ ಮದುವೆ ಆಗಿದ್ದಾರೆ. ಕೈ ಹಿಡಿದಿದ್ದು ಯಾರನ್ನ ಅಂತೀರಾ? ಸ್ಯಾಂಡಲ್‌ವುಡ್‌ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿಯನ್ನು. ಇದು ಸತ್ಯ! ಬೇಕಾದ್ರೆ ಈ ಫೋಟೋವನ್ನೇ ನೋಡಿ!
ಅಂದ ಹಾಗೆ ಈ ಮದುವೆ ನಡೆದಿದ್ದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ. ಬಂದವರೆಲ್ಲಆ ಮದುವೆ ರಿಯಲ್ ಅಂತಲೇ ಭಾವಿಸುವಂತಿತ್ತು. ವಿಶ್ ಮಾಡಿದರು. ಶುಭ ಹಾರೈಸಿ, ಫೋಟೋಕ್ಕೆ ಪೋಸು ಕೊಡಲು ಹೋದಾಗಲೇ ಗೊತ್ತಾಗಿದ್ದು, ಅದು ರಿಯಲ್ ಅಲ್ಲ ರೀಲ್ ಮದುವೆ ಅಂತ. ಅದು ಹೊಸ ಚಿತ್ರದ ಮೊದಲ ದಿನದ ಚಿತ್ರೀಕರಣ. ‘ನಾನೇ ನೆಕ್ಸ್ಟ್‌ಸಿಎಂ' ಚಿತ್ರದ ನಂತರ ಆದಿತ್ಯ-ರಾಗಿಣಿ ಜೋಡಿ ಒಂದಾಗಿದೆ.
ನಿರ್ದೇಶಕರು ಮುಸ್ಸಂಜೆ ಮಹೇಶ್. ದತ್ತಾತ್ರೇಯ ಚಿತ್ರದ ನಿರ್ಮಾಪಕರು. ಬುಧವಾರ ಬೆಳಗ್ಗೆ ಚಿತ್ರದ ಮುಹೂರ್ತ. ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಮೊದಲ ದೃಶ್ಯವೇ ಹೀಗೊಂದು ಮದುವೆ. ರಾಗಿಣಿ ಅವರ ಹುಟ್ಟುಹಬ್ಬ ಬೇರೆ ಅವತ್ತು. ಜತೆಗೆ ನಿರ್ಮಾಪಕ ದತ್ತಾತ್ರೇಯ ಅವರ ಮದುವೆಯ ವಾರ್ಷಿಕೋತ್ಸವ. ಎಲ್ಲವೂ ಮೆಳೈಸಿ ಸಂಭ್ರಮ ಜೋರಾಗಿತ್ತು. ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ಸುಂದರ್ರಾಜ್, ವಿಜಯ್ ಕಾಶಿ, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಸೇರಿದಂತೆ ಇಡೀ ತಂಡ ರಿಯಲ್ ಮದುವೆಯಂತೆ ಸಜ್ಜಾಗಿತ್ತು
ವರದಿ: ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.