
ಬೆಂಗಳೂರು: ಬಿಕನಿ ಧರಿಸಿಕೊಂಡು ತೆಗದ ಫೋಟೋವನ್ನು ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಅದು ಸಂಪ್ರದಾಯವಾದಿಗಳ ಕಣ್ಣಿಗೂ ಗುರಿಯಾಗುತ್ತೆ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡಾ ಆಗುತ್ತೆ.
ಇತ್ತೀಚೆಗೆ ತಾಪ್ಸಿ ಪನ್ನು, ಈಶಾ ಗುಪ್ತಾ, ಅಮೀಷ ಪಟೇಲ್ ಮುಂತಾದವರು ಟ್ರೋಲ್’ಗೊಳಾಗಾಗಿದ್ದರು. ಇದೀಗ ಇನ್ನೋರ್ವಾ ಬಾಲಿವುಡ್ ನಟಿ ರಾಧಿಕಾ ಆಪ್ಟೆ ತಾನು ಗೋವಾ ಬೀಚ್’ನಲ್ಲಿ ಬಿಕನಿ ಧರಿಸಿ ತೆಗೆದ ಫೋಟೋವನ್ನು ಇನ್ಸ್ಟಾಗ್ರಾಮ್’ನಲ್ಲಿ ಅಪ್ಲೋಡ್ ಮಾಡಿದ್ದರು. ಅದೂ ಕೂಡಾ ಟ್ರೋಲ್ ಆಗಿದ್ದು, ಅವಹೇಳನಕಾರಿಯಾಗಿ ಕೆಲವರು ಕಮೆಂಟ್’ಗಳನ್ನು ಹಾಕಿದ್ದಾರೆ. ಅದಕ್ಕೆ ರಾಧಿಕಾ ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. ಇದು ಹಾಸ್ಯಾಸ್ಪದವಾಗಿದೆ. ನಾನು ಬೀಚ್’ನಲ್ಲಿ ಸೀರೆ ಧರಿಸಿಕೊಳ್ಳಬೇಕಾ? ಎಂದು ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಪ್ಯಾಡ್’ಮಾನ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ರಾಧಿಕ ಆಪ್ಟೆ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.