
ಮುಂಬೈ(ಜ.15): ‘ಧೂಮ್ 3’ ಸಿನಿಮಾದಲ್ಲಿ ಕತ್ರಿನಾ ಕೈಫ್ ಕಮಲೀ ಕಮಲೀ ಹಾಡಿಗೆ ಕಣ್ಣು ಮಿಟುಕಿಸಿದರೆ ಎಲ್ಲಿ ಮಿಸ್ಸಾಗುತ್ತದೋ ಅನ್ನೋ ಥರ ನರ್ತಿಸುತ್ತಾ ಬಂದು ಅಮೀರ್ ಖಾನ್‌ನ ಹೆಗಲಿಗೆ ಕಾಲಿಡುವ ದೃಶ್ಯವನ್ನು ನೋಡಿದ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದರು. ಆ ಮ್ಯಾಜಿಕ್ ಮತ್ತೆ ಸೃಷ್ಟಿಯಾಗಲಿದೆ.
ಅದು ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ. ಅದಕ್ಕೆ ಸಾಕ್ಷಿ ಇಲ್ಲಿರುವ ಫೋಟೋ. ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ತಾರಾಗಣವೇ ಅದ್ಭುತ. ಇತ್ತ ಅಮೀರ್ ಖಾನ್, ಅತ್ತ ಅಮಿತಾಬ್ ಬಚ್ಚನ್. ಮತ್ತೊಂದೆಡೆ ಕತ್ರಿನಾ ಕೈಫ್. ಇಂಟರೆಸ್ಟಿಂಗ್ ಅಂದ್ರೆ ಈ ಚಿತ್ರದಲ್ಲೂ ಅಮೀರ್ ಖಾನ್‌ಗೆ ಜೋಡಿ ಕತ್ರಿನಾ ಕೈಫ್.
ಅವರಿಬ್ಬರು ಡಾನ್ಸ್ ಪ್ರಾಕ್ಟೀಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುಶಃ ಈ ಚಿತ್ರದ ಡಾನ್ಸ್ ಕೂಡ ಮಂತ್ರಮುಗ್ಧಗೊಳಿಸಲಿದೆ. ಅದಕ್ಕೆ ಕಾರಣಕರ್ತ ಬೇರೆ ಯಾರೂ ಅಲ್ಲ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ.
ಸ್ವತಃ ಯಶಸ್ವೀ ನಟ, ನಿರ್ದೇಶಕನಾಗಿರುವ ಪ್ರಭು ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರಕ್ಕೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಅದನ್ನು ಚಿತ್ರತಂಡ ಒಂದು ಫೋಟೋ ಮೂಲಕ ಜಗತ್ತಿಗೆ ಸಾರಿದೆ. ಈ ಫೋಟೋದಲ್ಲಿ ಅಮೀರ್ ಖಾನ್, ಪ್ರಭುದೇವ ಮತ್ತು ಕತ್ರಿನಾ ಕೈಫ್ ಇದ್ದಾರೆ. ಅಂದಹಾಗೆ ಇದು ಅಮೀರ್ ಖಾನ್ ತೆಗೆದಿರುವ ಸೆಲ್ಫೀ. ಈ ಫೋಟೋ ಕತೆ ಹೇಳುವದಷ್ಟೇ ಅಲ್ಲ, ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.