ಪತ್ನಿಗೆ ಕಾಡಿದ ತೀವ್ರ ಅನಾರೋಗ್ಯ, ಶಸ್ತ್ರಚಿಕಿತ್ಸೆ ವೇಳೆ ದುಃಖ ತಡೆಯಲಾಗದೇ ಕಣ್ಣೀರಿಟ್ಟ ಖ್ಯಾತ ಹಿರಿಯ ನಟ

Published : Oct 26, 2026, 07:21 PM IST
Telugu Senior Actor Mohammad Ali Baasha Breaks Down In Tears Over Wife's Illness

ಸಾರಾಂಶ

ಖ್ಯಾತ ಹಾಸ್ಯ ನಟ ಅಲಿ ಅವರ ಪತ್ನಿ ಜುಬೇದಾ ಸುಲ್ತಾನಾ ಬೇಗಂ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪತ್ನಿಯ ಸ್ಥಿತಿ ಕಂಡು ಅಲಿ ಕಣ್ಣೀರಿಟ್ಟಿದ್ದಾರೆ. ಅವರು ಅಳುತ್ತಿರುವ ದೃಶ್ಯ ವೈರಲ್ ಆಗಿದೆ.

ದಶಕಗಳ ಕಾಲ ನಗಿಸಿದ ಜನಪ್ರಿಯ ಹಾಸ್ಯ ನಟ, ಹಿರಿಯ ಕಲಾವಿದ ಅಲಿ ಅವರ ಪತ್ನಿ ಜುಬೇದಾ ಸುಲ್ತಾನಾ ಬೇಗಂ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಹೆಂಡತಿಯ ಸ್ಥಿತಿ ನೆನೆದು ಕಣ್ಣೀರು ಇಟ್ಟಿದ್ದಾರೆ. ಇದೀಗ ಹಿರಿಯ ನಟ ಕಣ್ಣೀರು ಇಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಅವರ ಪತ್ನಿಯನ್ನು ಸಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗುವ ಸಂದರ್ಭ. ಆ ವೇಳೆ ಅಲಿ ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ದುಃಖವನ್ನು ತಡೆಯಲಾಗದೇ ಕಷ್ಟಪಟ್ಟಿದ್ದರು. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಮನೆಯಲ್ಲಿ ಕೂತು ಆ ದೃಶ್ಯವನ್ನು ನೋಡುವಾಗ ಕಣ್ಣೀರು ಇಟ್ಟಿದ್ದಾರೆ. ಆ ದೃಶ್ಯವನ್ನ ನೋಡಿದ ಅಭಿಮಾನಿಗಳ ಕಣ್ಣಾಲೆಗಳು ಕೂಡ ಒದ್ದೆಯಾಗಿದ್ದು, ನಿಮ್ಮ ಪತ್ನಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಅಲಿ ಪತ್ನಿಗೆ ಏನಾಗಿದೆ?

ವರದಿಗಳ ಪ್ರಕಾರ.. ಜುಬೇದಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತುರ್ತು ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚನೆ ನೀಡಿದ್ದರು. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು, ಜುಬೇದಾ ಅವರಿಗೆ ಏನಾಗಿದೆ ಎಂಬುದನ್ನು ಅಲಿ ಕುಟುಂಬ ದೃಢಪಡಿಸಿಲ್ಲ. ಅನಾರೋಗ್ಯ ಕಾಡಿದೆ ಎಂದಷ್ಟೇ ತಿಳಿಸಲಾಗಿದೆ.

ಜುಬೇದಾ, ಯೂಟ್ಯೂಬರ್ ಮತ್ತು ವ್ಲಾಗರ್ ಕೂಡ ಹೌದು. ಅವರು ತಮ್ಮ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಪತಿಯ ದುಃಖ ಮತ್ತು ಕುಟುಂಬದ ಸಂಕಷ್ಟವನ್ನು ವಿಡಿಯೋ ಮೂಲಕ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ತನ್ನ ಪತ್ನಿ ತಯಾರಿ ನಡೆಸಿದ ರೀತಿ, ಅವರ ನೋವಿನ ನರಳಾಟವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇಂಥ ಸಂಗಾತಿಯನ್ನು ಪಡೆದಿರೋದು ನನ್ನ ಅದೃಷ್ಟ ಎಂಬು ಭಾವುಕರಾಗಿದ್ದಾರೆ. ಇನ್ನ, ತಮ್ಮ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಲಿ ಜನವರಿ 23, 1994 ರಂದು ಜುಬೇದಾ ಸುಲ್ತಾನಾ ಬೇಗಂ ಅವರನ್ನು ಮದುವೆ ಆದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಮಕ್ಕಳು, ಒಬ್ಬ ಮಗ ಇದ್ದಾನೆ.

ಅಲಿ ಯಾರು?

ತೆಲುಗಿನ ಖ್ಯಾತ ಹಾಸ್ಯ ನಟನ ಪೂರ್ಣ ಹೆಸರು ಮೊಹಮ್ಮದ್ ಅಲಿ ಬಾಷಾ. ಅಭಿಮಾನಿಗಳಿಗೆ ಅಲಿ ಎಂದೇ ಪರಿಚಿತರು. ಇವರು ಭಾರತೀಯ ನಟ, ಹಾಸ್ಯನಟ ಮತ್ತು ದೂರದರ್ಶನ ನಿರೂಪಕ, ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅಕ್ಟೋಬರ್ 10, 1967 ರಂದು ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ ಅವರು, ಚಿಕ್ಕ ವಯಸ್ಸಿನಲ್ಲಿಯೇ ಮನರಂಜನೆ ಜಗತ್ತಿಗೆ ದುಮುಕಿದರು. ಕ್ರಮೇಣ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದರು.

ಬಾಲ ಕಲಾವಿದನಾಗಿ ನಟಿಸಿದ ಅಲಿ, ನಂತರದ ದಿನಗಳಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿದರು. ಹಾಸ್ಯಮಯ ಸಂಭಾಷಣೆಗಳನ್ನು ನೀಡುವ ಮತ್ತು ವಿಭಿನ್ನ ಪಾತ್ರಗಳಿಗೆ ಹೊಂದಿಕೊಳ್ಳುವ ಶಕ್ತಿ ಅಲಿಗೆ ಇದೆ. ತೆಲುಗಿನ ಖ್ಯಾತ ನಟರ ಜೊತೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಅವರು ತಮ್ಮ ಸುದೀರ್ಘ ಸಿನಿಮಾ ಪ್ರಯಾಣದಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ, ಪೋಷಕ ಪಾತ್ರಗಳು ಮತ್ತು ಪಾತ್ರ-ಆಧಾರಿತ ಅಭಿನಯಗಳಲ್ಲಿ ನಟಿಸಿದ್ದಾರೆ.

2019ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅವರ ದಬಾಂಗ್ 3 ಚಿತ್ರದಲ್ಲಿಯೂ ನಟಿಸುವ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ನಂದಿ ಪ್ರಶಸ್ತಿಗಳು ಮತ್ತು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

21 ವರ್ಷದ ಆಟೋ ಚಾಲಕನ 'ಮದುವೆ ಮೆಂಟಾಲಿಟಿ'ಗೆ ನಟಿ ಸೃಷ್ಟಿ ಅಗರ್ವಾಲ್ ಶಾಕ್! ವಿಡಿಯೋ ವೈರಲ್
ಕಥೆ ಶುರುವಾದ ಐದೇ ನಿಮಿಷಕ್ಕೆ ನಗು ತಡೆಯೋಕೆ ಆಗ್ಲಿಲ್ಲ: ದುಬೈನಲ್ಲಿ 'ಸೀನ್' ಬಗ್ಗೆ ನಟ ಸೂರ್ಯ ಮಾತು