ಮಯೂರಿ ಚಿತ್ರದ ಟೈಟಲ್‌ ಹೇಳಿ 5 ಲಕ್ಷ ಗೆಲ್ಲಿ!

Published : May 28, 2019, 10:05 AM IST
ಮಯೂರಿ ಚಿತ್ರದ ಟೈಟಲ್‌ ಹೇಳಿ 5 ಲಕ್ಷ ಗೆಲ್ಲಿ!

ಸಾರಾಂಶ

ನಟಿ ಮಯೂರಿ ಚಿತ್ರವೊಂದರಲ್ಲಿ ಅಂಧ ಹುಡುಗಿ ಪಾತ್ರ ಮಾಡುತ್ತಿದ್ದು ಚಿತ್ರತಂಡ ಟೈಟಲ್ ಹುಡುಕಾಟದಲ್ಲಿದ್ದಾರೆ, ಟೈಟಲ್ ಹೇಳಿದವರಿಗೆ ಚಿತ್ರ ತಂಡ 5 ಲಕ್ಷ ರೂ ನೀಡುತ್ತದೆ.    

1. ಮೊದಲ ಬಾರಿಗೆ ಬ್ಲೈಂಡ್‌ ಪಾತ್ರ

ರೋಮಿಯೋ, ಸ್ಟೈಲ್‌ ಕಿಂಗ್‌, ಜೂಮ್‌, ಚಡ್ಡಿದೋಸ್‌್ತ, ಚಿತ್ರಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿರುವ ನಟರಾಜ್‌ ಒಂದು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದು ಜೂನ್‌ 15 ರಿಂದ ಚಿತ್ರೀಕರಣಕ್ಕೆ ಹೊರಡಲಿದೆ. ಇಲ್ಲಿ ಮಯೂರಿ ಹೊರತಾಗಿ ಬಹುತೇಕರು ಹೊಸಬರೇ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಚಿತ್ರದ ಕತೆ ಹಾಗೂ ಪಾತ್ರದ ಕಾರಣಕ್ಕೆ ಮಯೂರಿ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ನಾನು ಬ್ಲೈಂಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಟರಾಜ್‌ ಅವರು ತುಂಬಾ ಚೆನ್ನಾಗಿ ಕತೆ ಮಾಡಿಕೊಂಡಿದ್ದಾರೆ. ಚಿತ್ರದ ಪ್ರತಿ ಕ್ಯಾರೆಕ್ಟರ್‌ ಅನ್ನೂ ಗಾಢವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಹೀಗಾಗಿ ನಾನು ಈ ಚಿತ್ರವನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಮಯೂರಿ. ಈ ಚಿತ್ರಕ್ಕೆ ರಾಮ್‌ ಚೇತನ್‌ ಹೀರೋ. ಬಿ ಜೆ ಭರತ್‌ ಸಂಗೀತ, ಸಂತೋಷ್‌ ಪಾಂಡಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.

2. ಶೀರ್ಷಿಕೆ ಪತ್ತೆ ಮಾಡಿ 5 ಲಕ್ಷ ಗೆಲ್ಲಿ

ಮೌನೇಶ್‌ ಗೌಡ ನಿರ್ದೇಶಿಸಿ, ಮಯೂರಿ ನಾಯಕಿಯಾಗಿ, ನಾನಿ ಮಧು ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ವಿಭಿನ್ನವಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಲಾಗಿದೆ. ನಾಯಕ ಮತ್ತು ಒಂದಿಷ್ಟುಇಂಗ್ಲಿಷ್‌ ಅಕ್ಷರಗಳನ್ನು ಒಳಗೊಂಡ ಪೋಸ್ಟರ್‌ ಇದಾಗಿದೆ. ಇಲ್ಲಿರುವ ಶೀರ್ಷಿಕೆ ಪತ್ತೆ ಮಾಡಿ ಹೇಳಿದವರಿಗೆ ಮುಖ್ಯಮಂತ್ರಿಗಳಿಂದ ಬಹುಮಾನ ಕೊಡಲಾಗುತ್ತದೆ. ಹಾಗಂತ ಚಿತ್ರತಂಡವೇ ಘೋಷಣೆ ಮಾಡಿದೆ. ಈ ಚಿತ್ರದ ಟೈಟಲ್‌ ಹೇಳಿದವರಿಗೆ 5 ಲಕ್ಷ ರುಪಾಯಿ ನಗದು ಬಹುಮಾನ ಸಿಗಲಿದ್ದು, ಈ ಚಿತ್ರದ ಧ್ವನಿ ಸುರಳಿ ಬಿಡುಗಡೆಯ ದಿನದಂದು ಮುಖ್ಯಮಂತ್ರಿಗಳಿಂದ ಈ ನಗದು ಬಹುಮಾನ ದೊರೆಯಲಿದೆ. ವಿಜೇತರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಈ ಚಿತ್ರದಲ್ಲಿ ಮಯೂರಿ ಹಳ್ಳಿ ಹುಡುಗಿ ಪಾತ್ರ ಮಾಡಿರುವುದು ವಿಶೇಷ.

3. ರಾಜಮೌಳಿ ಸಹಾಯಕನ ಚಿತ್ರ

ಥಿಲ್ಲರ್‌ ನೆರಳಿನಲ್ಲಿ ಮೂಡಿ ಬರುತ್ತಿರುವ ‘ಅನಾಥಿ’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪುನೀತ್‌ ಶರ್ಮಾ. ಇವರು ನಿರ್ದೇಶಕ ರಾಜಮೌಳಿ ಅವರ ಜತೆಗೆ ಸಹಾಯಕರಾಗಿ ಕೆಲಸ ಮಾಡಿದವರು.

ಮೂರು ಚಿತ್ರಗಳು ಶೂಟಿಂಗ್‌ ಹಂತದಲ್ಲಿ, ಮತ್ತೊಂದು ಮೂರು ಚಿತ್ರಗಳು ಬಿಡುಗಡೆಗೆ ಬಂದಿದ್ದು, ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಸಿನಿಮಾ ಡಬ್ಬಿಂಗ್‌ ಮಾಡಿಕೊಳ್ಳುತ್ತಿದೆ. ಹೀಗೆ 7 ಚಿತ್ರಗಳಲ್ಲಿ ನಟಿ ಮಯೂರಿ ಬ್ಯುಸಿಯಾಗಿದ್ದು, ಸದ್ಯ ‘ರುಸ್ತುಂ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕನ್ನಡ ಬಿಗ್‌ಬಾಸ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ದೂರು ನೀಡಿದ ವೀಕ್ಷಕರು
BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ