ಬೆಂಗಳೂರಿನ ಮಲ್ಟಿ'ಫ್ಲೆಕ್ಸ್'ನಲ್ಲಿ ಆನ್'ಲೈನ್ ಬುಕ್ಕಿಂಗ್ ರದ್ದು: ತಮಿಳುನಾಡಿನಲ್ಲಿ ಚಿತ್ರಮಂದಿರ ಬಂದ್

By Suvarna Web DeskFirst Published Jun 30, 2017, 8:39 PM IST
Highlights

ಇದೇ ಅನುಮಾನಗಳು ರಾಜ್ಯದ ಮಲ್ಟಿಫೆಕ್ಸ್'ಗಳ ಮೇಲೂ ತಟ್ಟಿದೆ. ಜಿಎಸ್'ಟಿಯ ಕನ್'ಫ್ಯೂಸ್'ನಿಂದಾಗಿ ಬೆಂಗಳೂರಿನ ಸೇರಿದಂತೆ ರಾಜ್ಯದ ಮಲ್ಟಿ'ಫ್ಲೆಕ್ಸ್'ಗಳು ಆನ್'ಲೈನ್ ಮುಂಗಡ ಟಿಕೆಟ್ ನೀಡುವುದನ್ನೇ ತಡೆಹಿಡಿದಿವೆ. ನೀವು ಈ ಚಿತ್ರಮಂದಿರಗಳಲ್ಲಿ ಮುಕ್ಕಿಂಗ್ ಮಾಡಬೇಕೆಂದರೆ ಬುಕ್'ಮೈ ಶೋ ಮೂಲಕ ಶನಿವಾರದವರೆಗೆ ಮಾಡಬಹುದು ಆದರೆ ಭಾನುವಾರದ ಬುಕ್ಕಿಂಗ್ ಆಗುತ್ತಿಲ್ಲ.

ಬೆಂಗಳೂರು(ಜು.30): ಇಂದು ಮಧ್ಯರಾತ್ರಿ ಒಂದು ದೇಶ ಒಂದು ತೆರಿಗೆ ಜಿಎಸ್'ಟಿ'ಗೆ ಕ್ಷಣಗಣನೆ ಸಿದ್ಧವಾಗಿದೆ.  ಆದರೆ ಹಲವು ಉಪಯೋಗಗಳು ಈ ಯೋಜನೆಯಿಂದ ಹಲವು ಅನುಕೂಲಗಳ ಜೊತೆ ಅಷ್ಟೆ ಗೊಂದಲಗಳು ಸಾರ್ವಜನಿಕರಲ್ಲಿ ಕಾಣಿಸಿಕೊಂಡಿವೆ.

ಇದೇ ಅನುಮಾನಗಳು ರಾಜ್ಯದ ಮಲ್ಟಿಫೆಕ್ಸ್'ಗಳ ಮೇಲೂ ತಟ್ಟಿದೆ. ಜಿಎಸ್'ಟಿಯ ಕನ್'ಫ್ಯೂಸ್'ನಿಂದಾಗಿ ಬೆಂಗಳೂರಿನ ಸೇರಿದಂತೆ ರಾಜ್ಯದ ಮಲ್ಟಿ'ಫ್ಲೆಕ್ಸ್'ಗಳು ಆನ್'ಲೈನ್ ಮುಂಗಡ ಟಿಕೆಟ್ ನೀಡುವುದನ್ನೇ ತಡೆಹಿಡಿದಿವೆ. ನೀವು ಈ ಚಿತ್ರಮಂದಿರಗಳಲ್ಲಿ ಮುಕ್ಕಿಂಗ್ ಮಾಡಬೇಕೆಂದರೆ ಬುಕ್'ಮೈ ಶೋ ಮೂಲಕ ಶನಿವಾರದವರೆಗೆ ಮಾಡಬಹುದು ಆದರೆ ಭಾನುವಾರದ ಬುಕ್ಕಿಂಗ್ ಆಗುತ್ತಿಲ್ಲ.

ಇದಕ್ಕೆ ಕಾರಣವಿಷ್ಟೆ ಟಿಕೆಟ್ ಬೆಲೆಯನ್ನು ಎಷ್ಟು ನಿಗದಿಪಡಿಸಬೇಕೆಂಬ ಗೊಂದಲಕ್ಕೆ ಮಲ್ಟಿಫ್ಲೆಕ್ಸ್'ಗಳು ಸಿಲುಕಿವೆ.  ಸರಕು ಸೇವಾ ತೆರಿಗೆಯಲ್ಲಿ ಮನರಂಜನಾ ತೆರಿಗೆ ಶೇ.28 ಎಂದು ತಿಳಿಸಲಾಗಿದೆ. ಆದರೆ ಕನ್ನಡ ಸಿನಿಮಾಗಳಿಗೆ ವಿನಾಯಿತಿ ಮುಂದುವರಿಯುತ್ತಾ, ಇದು ಮುಂದುವರಿದರೆ ಅದರ ಪ್ರಮಾಣವೆಷ್ಟು ಎಷ್ಟು ದರವನ್ನು ಟಿಕೆಟ್'ಗೆ ನಿಗದಿಗೊಳಿಸಬೇಕು ಎಂಬ ಸಾಕಷ್ಟು ಅನುಮಾನಗಳು ಮಲ್ಟಿಫ್ಲೆಕ್ಸ್'ಗಳ ಮಾಲೀಕರಿಗೆ ಕಾಡುತ್ತಿದೆ. ಈ ಕಾರಣದಿಂದ ಭಾನುವಾರದ ಬುಕ್ಕಿಂಗ್ ಸ್ಥಗಿತಗೊಂಡಿದೆ. ಸಮಸ್ಯೆಗೆ ನಾಳೆ ಉತ್ತರ ಸಿಗಲಿದೆಯೇ ಕಾದು ನೋಡಬೇಕು.

ತಮಿಳುನಾಡಿನಲ್ಲೂ  ಜುಲೈ 3ರಿಂದ ಚಿತ್ರೀಕರಣ ಸ್ಥಗಿತ

ತಮಿಳುನಾಡಿನ ಚಿತ್ರಮಂದಿರ ಮಾಲೀಕರು ಜಾರಿಗೊಳ್ಳುವ ಜಿಎಸ್'ಟಿ'ಯ ಅಸ್ಪಷ್ಟತೆ ವಿರೋಧಿಸಿ ಜುಲೈ 3ರಿಂದ ಅನಿರ್ದಿಷ್ಟಾವಧಿಯಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಸಿನಿಮಾಕ್ಕೆ ಎಷ್ಟು ತೆರಿಗೆ ವಿಧಿಸಬೇಕೆಂಬುದರ ಸ್ಪಷ್ಟ ಮಾಹಿತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

click me!