
ವಿರಾಟ್ ಕರ್ಣ ನಾಯಕನಾಗಿ, ನಭಾ ನಟೇಶ್ ಮತ್ತು ಐಶ್ವರ್ಯಾ ಮೆನನ್ ನಾಯಕಿಯರಾಗಿ 'ನಾಗಬಂಧಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿಶೋರ್ ಅನ್ನಪುರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅಭಿಷೇಕ್ ನಾಮಾ ನಿರ್ದೇಶನ ಮಾಡುತ್ತಿದ್ದಾರೆ. ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಾಗಬಂಧಂ ರಹಸ್ಯಗಳ ಕಾಲ್ಪನಿಕ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದೊಂದು ಪಿರಿಯಾಡಿಕ್ ಸಿನಿಮಾ ಆಗಿದ್ದು, ಅದ್ಭುತ ದೃಶ್ಯ ವೈಭವದೊಂದಿಗೆ ತೆರೆಗೆ ಬರಲಿದೆ.
ಇತ್ತೀಚೆಗೆ ಚಿತ್ರತಂಡ 'ನಾಗಬಂಧಂ' ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆ ಮಾಡಿದೆ. ಈ ಟ್ರೇಲರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲ ದೃಶ್ಯದಿಂದಲೇ ಪ್ರೇಕ್ಷಕರನ್ನು ಒಂದು ಹೊಸ ಆಧ್ಯಾತ್ಮಿಕ ಮತ್ತು ಸಾಹಸಮಯ ಲೋಕಕ್ಕೆ ಕರೆದೊಯ್ಯುತ್ತದೆ. ಬಿಡುಗಡೆಯಾದ ತಕ್ಷಣವೇ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಈ ಸಿನಿಮಾ ಜುಲೈ 3 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
'ನಾಗಬಂಧಂ' ಕಥೆಯು ಕೇರಳದಲ್ಲಿರುವ, ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಸುತ್ತ ನಡೆಯುತ್ತದೆ. ಅಪಾರ ಶಕ್ತಿ ಮತ್ತು ಸಂಪತ್ತನ್ನು ಹೊಂದಿರುವ ದೈವಿಕ 'ಬ್ರಹ್ಮ ಕಮಲ'ವನ್ನು ಪಡೆಯಲು ಒಂದು ದುಷ್ಟ ಶಕ್ತಿ ಪ್ರಯತ್ನಿಸುತ್ತದೆ. ಆಗ ಆ ದೈವಿಕ ನಿಧಿಯನ್ನು ರಕ್ಷಿಸಲು ದೇವರ ಆಜ್ಞೆಯಂತೆ ನಾಗಸಾಧುಗಳು ಮುಂದೆ ಬರುತ್ತಾರೆ. ಈ ಹೋರಾಟದಲ್ಲಿ ಏನಾಗುತ್ತದೆ? ನಾಗಬಂಧಂ ರಹಸ್ಯವೇನು? ಆ ಸಂಪತ್ತನ್ನು ಅವರು ಹೇಗೆ ಕಾಪಾಡುತ್ತಾರೆ? ಎನ್ನುವುದೇ ಸಿನಿಮಾದ ಕಥಾಹಂದರ.
ನಿರ್ದೇಶಕ ಅಭಿಷೇಕ್ ನಾಮಾ ತಮ್ಮ ಬರವಣಿಗೆ ಮತ್ತು ವಿಷನ್‌ನಿಂದ ಟ್ರೇಲರ್ ಅನ್ನು ಮತ್ತಷ್ಟು ಆಸಕ್ತಿದಾಯಕವಾಗಿಸಿದ್ದಾರೆ. 'ಬ್ರಹ್ಮ ಕಮಲ'ದ ರಹಸ್ಯಗಳನ್ನು ತೋರಿಸುವಾಗ ಚಿತ್ರಕಥೆ ಎಲ್ಲೂ ನಿಧಾನವಾಗದಂತೆ ನೋಡಿಕೊಂಡಿದ್ದಾರೆ. ಬೃಹತ್ ದೇವಾಲಯದ ಸೆಟ್‌ಗಳು ಮತ್ತು ಅದ್ಭುತ ವಿಎಫ್‌ಎಕ್ಸ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ನಾಯಕ ವಿರಾಟ್ ಕರ್ಣ ತಮ್ಮ ಸ್ಕ್ರೀನ್ ಪ್ರೆಸೆನ್ಸ್ ಮತ್ತು ನಟನೆಯಿಂದ ಗಮನ ಸೆಳೆದಿದ್ದಾರೆ. ಈ ಪಾತ್ರಕ್ಕಾಗಿ ಅವರು ದೈಹಿಕವಾಗಿಯೂ ವಿಶೇಷ ತಯಾರಿ ನಡೆಸಿರುವುದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ನಾಯಕ ವಿರಾಟ್ ಕರ್ಣ ಆಕ್ಷನ್ ದೃಶ್ಯಗಳ ಜೊತೆಗೆ ಭಾವನಾತ್ಮಕ ಸನ್ನಿವೇಶಗಳಲ್ಲೂ ಪ್ರಬುದ್ಧ ನಟನೆ ತೋರಿದ್ದಾರೆ. ಬಹಳ ದಿನಗಳ ನಂತರ ನಭಾ ನಟೇಶ್ ಈ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಐಶ್ವರ್ಯಾ ಮೆನನ್ ಮತ್ತು ದಕ್ಷಾ ನಗಾರ್ಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇವರೊಂದಿಗೆ ಜಗಪತಿ ಬಾಬು, ಮುರಳಿ ಶರ್ಮಾ ಮತ್ತು ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಅವರಂತಹ ಅನುಭವಿ ನಟರು ಇರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.