ನೀನು ಚೆನ್ನಾಗಿ ಆ್ಯಕ್ಟ್​ ಮಾಡ್ತಿಯಾ ಮಗಳೇ ಎಂದು ಅಪ್ಪ ಹೇಳ್ಲೇ ಇಲ್ಲ: ಮೊನಿಷಾ ವಿಜಯ್​ ಭಾವುಕ- ನಟಿ ಹೇಳಿದ್ದೇನು

Published : Oct 02, 2026, 12:20 PM IST
Monisha Vijay

ಸಾರಾಂಶ

ದುನಿಯಾ ವಿಜಯ್ ನಿರ್ದೇಶನದ ಹಾಗೂ ವಿನಯ್ ರಾಜ್‌ಕುಮಾರ್ ನಟನೆಯ 'ಸಿಟಿ ಲೈಟ್ಸ್' ಸಿನಿಮಾ ಯಶಸ್ವಿಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿರುವ ವಿಜಯ್ ಮಗಳು ಮೊನಿಷಾ ತಮ್ಮ ತಂದೆಯ ಕಷ್ಟವನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಬೆಂಗಳೂರು: ನಟ ದುನಿಯಾ ವಿಜಯ್​ ಅವರು ನಿರ್ದೇಶಕರಾಗಿ, ಅವರ ಮಗಳು ಮೊನಿಷಾ ವಿಜಯ್​ ನಟಿಯಾಗಿ ಪದಾರ್ಪಣೆ ಮಾಡಿರುವ ‘ಸಿಟಿ ಲೈಟ್ಸ್’ ಸಿನಿಮಾಕ್ಕೆ ಒಳ್ಳೆಯ ರೆಸ್​ಪಾನ್ಸ್​ ಬರುತ್ತಿದೆ. ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾ ಯಶಸ್ವಿಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರ,, ಬಿಡುಗಡೆಯಾದ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರ ಸಕ್ಸಸ್​ ಮೀಟ್​ನಲ್ಲಿ ಮೊನಿಷಾ ಅವರು ಭಾವುಕರಾಗಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ನೀನು ಚೆನ್ನಾಗಿ ಆ್ಯಕ್ಟ್​ ಮಾಡ್ತಿಯಾ

ಅಪ್ಪ ನನಗಾಗಿ ಎರಡು ವರ್ಷ ಈ ಚಿತ್ರದ ಮೇಲೆ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರು ಚಿತ್ರದಿಂದ ಬ್ರೇಕ್​ ತೆಗೆದುಕೊಂಡಿದ್ದರು. ಅಪ್ಪನ ಕಷ್ಟ ನೋಡಿದ್ದೇನೆ. "ಸಲಗ ಮತ್ತು ಭೀಮ ಸಕ್ಸಸ್ ಕೊಟ್ಟಿದ್ದರು. ಆದರೆ ತಮ್ಮ ಕರಿಯರ್ ನೋಡದೇ ನನಗೆ ಚಿತ್ರ ಮಾಡಿದ್ದಾರೆ ಎಂದು ಮೊನಿಷಾ ಭಾವುಕರಾದರು. ಈ ಸಿನಿಮಾದಲ್ಲಿ ಅವರು ನಿರ್ದೇಶಕರಾಗಿರುವ ಕಾರಣ, ಆ್ಯಕ್ಷನ್​ ಕಟ್​ ಹೇಳುವುದು ಅಷ್ಟೇ ನನ್ನ ಕೆಲಸ, ಶ್ರದ್ಧೆಯಿಂದ ನೀನು ನಿನ್ನೆ ಕೆಲಸ ಮುಂದುವರೆಸು ಎಂದು ಹೇಳಿದ್ದರೇ ವಿನಾ, ಮಗಳೇ ನೀನು ಚೆನ್ನಾಗಿ ಆ್ಯಕ್ಟ್​ ಮಾಡುತ್ತಿ ಎಂದು ಎಂದಿಗೂ ಹೇಳಿರಲಿಲ್ಲ. ಓರ್ವ ನಿರ್ದೇಶಕನಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದರು. ಆದರೆ ಅದರಲ್ಲಿ ಅವರಿಗಿದ್ದ ಪ್ರೀತಿ ನನಗೆ ಅರ್ಥವಾಗುತ್ತಿತ್ತು. ನನಗಾಗಿ ತುಂಬಾ ಕಷ್ಟಪಟ್ಟಿದ್ದಾರೆಎ ಎಂದು ಮೊನಿಷಾ ಹೇಳಿದರು.

ಅಪ್ಪನ ಸಿನಿಮಾನೇ ಮೊದಲು

ಅಂದಹಾಗೆ ಮೊನಿಷಾ ಅವರು, ಮೊನಿಷಾ ವಿಜಯ್‌ಕುಮಾರ್ ವಿದೇಶದಲ್ಲಿ ಓದಿದವರು. ಮೊದಲ ಅವಕಾಶ ಮತ್ತು ಮೊದಲ ಸಿನಿಮಾ ಅಂತ ಬಂದಾಗ ಅದು ಅಪ್ಪನ ಸಿಟಿ ಲೈಟ್ಸ್ ಚಿತ್ರವೇ ಆಗಿದೆ. ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಅವರು, ತಂದೆ ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇನ್ನೊಂದೆಡೆ ವಿನಯ್ ರಾಜ್‌ಕುಮಾರ್ ಕೂಡ ಈ ಚಿತ್ರದ ಮೂಲಕ ತಮ್ಮ ನಟನೆಯ ಮತ್ತೊಂದು ಮುಖವನ್ನು ಪರಿಚಯಿಸಿದ್ದಾರೆ. ಇದುವರೆಗೆ ಕ್ಲಾಸ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದ ವಿನಯ್, ‘ಸಿಟಿ ಲೈಟ್ಸ್’ನಲ್ಲಿ ಮಾಸ್ ಶೇಡ್‌ನ ಪಾತ್ರದಲ್ಲೂ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ನನ್ನ ಮಗಳಿಗೂ ಅದೇ ಆಶೀರ್ವಾದ ಮಾಡಿದ್ದಾರೆ. ನನಗೆ ತುಂಬಾನೆ ಖುಷಿ ಆಗುತ್ತದೆ. ಅವರಿಗೆ ನನ್ನ ಧನ್ಯವಾದಗಳನ್ನ ತಿಳಿಸುತ್ತೇನೆ. ದೊಡ್ಮನೆಯಿಂದ ವಿನಯ್ ರಾಜ್‌ಕುಮಾರ್ ಅವರ ಕರೆದುಕೊಂಡು ಬಂದಾಗ ಭಯ ಇತ್ತು ಎಂದು ಇದೇ ವೇಳೆ ದುನಿಯಾ ವಿಜಯ್​ ಕೂಡ ಮಾತನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೊಸೆಯ 'ಆ ಸತ್ಯ' ಗೊತ್ತಾದ್ರೆ ಅತ್ತೆ-ಮಾವ ಏನ್ ಮಾಡ್ತಾರೆ? 'ಇಂಪ್ಯೂರ್' ಸಿನಿಮಾ ಕಥೆ ಇದೇ!
ಮದ್ಯಪಾನ, ಮಧ್ಯವರ್ತಿ ಎರಡರಿಂದಲೂ ದೂರ: ‘ಬೇಲ್’ ಸಂದರ್ಶನದಲ್ಲಿ ಶಿವಣ್ಣ ಹೇಳಿದ್ದೇನು?