
ನಟ ಚಿರಂಜೀವಿ ಸರ್ಜಾ-ಮೇಘನಾ ರಾಜ್ ಮದುವೆ ಮೇ.2ಕ್ಕೆ ಫಿಕ್ಸ್ ಆಗಿದೆ. ಅಂದು ಬೆಳಗ್ಗೆ 10-30ಕ್ಕೆ ಬೆಂಳೂರಿನ ಅರಮನೆ ಮೈದಾನದ 'ವೈಟ್ ಪೆಟಲ್ಸ್' ಸಭಾಂಗಣದಲ್ಲಿ ಈ ತಾರಾ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದೆ.
ಅವತ್ತೇ ಸಂಜೆ 7 ಗಂಟೆಗೆ ಆರತಕ್ಷತೆ ಕಾರ್ಯಕ್ರಮವಿದೆ. ಮದುವೆ ಸಿದ್ಧತೆಗಳು ಭರದಿಂದ ಸಾಗಿವೆ. ಎರಡು ಕುಟುಂಬದವರು ಈಗ ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ ಆಗಿದ್ದಾರೆ. ಚಿರು ಹಾಗೂ ಮೇಘನಾ ರಾಜ್ ಇಬ್ಬರು ನಾಯಕ-ನಾಯಕಿ. ಮೇಲಾಗಿ ಎರಡು ಕುಟುಂಬದವರಿಗೂ ಬಣ್ಣದ ಲೋಕದ ನಂಟಿದೆ. ಮದುವೆಗೆ ಚಿತ್ರರಂಗವೇ ಹಾಜರಿರಲಿದೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.