ನೀನಾಸಂ ಸತೀಶ್‌ ಚಿತ್ರಕ್ಕೆ ಮಂಗಳೂರಿನ ಮಾಡೆಲ್‌!

Published : Apr 27, 2019, 09:22 AM IST
ನೀನಾಸಂ ಸತೀಶ್‌ ಚಿತ್ರಕ್ಕೆ ಮಂಗಳೂರಿನ ಮಾಡೆಲ್‌!

ಸಾರಾಂಶ

ನೀನಾಸಂ ಸತೀಶ್‌ ನಟನೆಯ ಬ್ರಹ್ಮಚಾರಿ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಎಂಟ್ರಿ ಕೊಟ್ಟಿದ್ದಾರೆ. ಹೆಸರು ಅಕ್ಷತಾ ಶ್ರೀನಿವಾಸ್‌. ಈಗಾಗಲೇ ಅದಿತಿ ಪ್ರಭುದೇವ ಆಯ್ಕೆ ಆಗಿದ್ದು, ಅಲ್ಲಿಗೆ ಚಿತ್ರಕ್ಕೆ ಇಬ್ಬರು ನಾಯಕಿಯರು ಎಂಬುದು ಖಚಿತವಾಗಿದೆ. ಇಷ್ಟಕ್ಕೂ ಅಕ್ಷತಾ ಶ್ರೀನಿವಾಸ್‌ ಅವರ ಹಿನ್ನೆಲೆ ಏನು? ಅವರ ಹಿಂದಿನ ಚಿತ್ರಗಳೇನು?

1. ಮಂಗಳೂರು ಮೂಲದ ಅಕ್ಷತಾ, ಇಂಜಿನಿಯರಿಂಗ್‌ ಮುಗಿಸಿದ್ದಾರೆ. ಮೊದಲಿನಿಂದಲ್ಲೂ ಗ್ಲಾಮರ್‌ ಜಗತ್ತು ಅಂದರೆ ಇಷ್ಟ. ಹೀಗಾಗಿ ಇಂಜಿನಿಯರಿಂಗ್‌ ಮುಗಿಸಿದವರನ್ನು ಸೀದಾ ಕೈ ಬೀಸಿ ಕರೆದಿದ್ದು ಮಾಡೆಲಿಂಗ್‌ ಲೋಕ.

2. ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಾಕಷ್ಟುಶೋಗಳಲ್ಲಿ ಪಾಲ್ಗೊಂಡಿದ್ದಾರೆ. ರಾರ‍ಯಂಪ್‌ ಮೇಲೆ ವಾಕ್‌ ಮಾಡುವ ಜತೆಗೆ ಶೋ ಟಾಪರ್‌ ಆಗಿಯೂ ಮಾಡೆಲಿಂಗ್‌ನಲ್ಲಿ ಮಿಂಚಿದ್ದಾರೆ. ಹತ್ತಾರು ಡಿಸೈನ್‌ಗಳ ಕಾಸ್ಟೂಮ್‌ಗಳಲ್ಲಿ ಜಗಮಗಿಸಿರುವ ಅಕ್ಷತಾ ಶ್ರೀನಿವಾಸ್‌ ಅವರಿಗೆ ಸಿನಿಮಾ ಕನಸು ಈಡೇರಿದ್ದು ನಿರ್ದೇಶಕ ಶಿವತೇಜಸ್‌ ಮೂಲಕ.

3. ಮಳೆ, ಧೈರ್ಯ, ಲೌಂಡ್‌ ಸ್ಪೀಕರ್‌ ಚಿತ್ರಗಳ ನಂತರ ಶಿವತೇಜಸ್‌ ಈಗ ಇನ್ನೂ ಹೆಸರಿಡದ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಸದ್ದಿಲ್ಲದೆ ಸಟ್ಟೇರಿರುವ ಈ ಚಿತ್ರಕ್ಕೆ ಅಕ್ಷತಾ ಶ್ರೀನಿವಾಸ್‌ ನಾಯಕಿ ಆಗಿ ಆಯ್ಕೆ ಆಗುವ ಮೂಲಕ ಮೊದಲ ಸಿನಿಮಾ ಹೆಜ್ಜೆಗಳನ್ನು ಶುರು ಮಾಡಿದ್ದಾರೆ. ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಕ್ಷತಾ ಅವರದ್ದು ಆರ್ಯವೇದಿಕ್‌ ಡಾಕ್ಟರ್‌ ಪಾತ್ರ.

4. ಮೊದಲ ಚಿತ್ರ ಬಿಡುಗಡೆಯಾಗುವ ಮುನ್ನವೇ ಎರಡನೇ ಚಿತ್ರಕ್ಕೂ ಬುಕ್‌ ಆಗಿದ್ದಾರೆ. ನೀನಾಸಂ ಸತೀಶ್‌ ನಾಯಕನಾಗಿ ನಟಿಸುತ್ತಿರುವ, ಉದಯ್‌ ಕೆ ಮಹ್ತಾ ನಿರ್ಮಾಣದ ‘ಬ್ರಹ್ಮಚಾರಿ’ ಚಿತ್ರದಲ್ಲಿ ಅಕ್ಷತಾ ಅವರೂ ಸಹ ನಾಯಕಿ. ಅದಿತಿ ಪ್ರಭುದೇವ ಚಿತ್ರದ ಮತ್ತೊಬ್ಬ ನಾಯಕಿ ಚಂದ್ರಮೋಹನ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

5. ಬ್ರಹ್ಮಚಾರಿ ಚಿತ್ರಕ್ಕೆ ಒಂದು ಹಂತದ ಚಿತ್ರೀಕರಣ ಶೆಡ್ಯೂಲ್‌ ಮುಗಿದಿದೆ. ಒಳ್ಳೆಯ ರೀತಿಯ ಪಾತ್ರವಿದೆಯಂತೆ. ಗ್ಲಾಮರ್‌ಗೆ ಪ್ರಾಮುಖ್ಯತೆ ಇರುವ ಸಿನಿಮಾ. ಈ ಎರಡೂ ಚಿತ್ರಗಳಿಗೂ ಆಡಿಷನ್‌ ಮೂಲಕ ಅಕ್ಷತಾ ಆಯ್ಕೆ ಆಗಿದ್ದಾರೆ.

6. ಅಕ್ಷತಾ ಶ್ರೀನಿವಾಸ್‌ ಅವರಿಗೆ ಗ್ಲಾಮರ್‌ ಹಾಗೂ ನಟನೆಗೆ ಮಹತ್ವ ಇರುವ ಪಾತ್ರಗಳೆಂದರೆ ಇಷ್ಟ. ಅಂಥ ಪಾತ್ರಗಳ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಸದ್ಯಕ್ಕೆ ಮಾಡೆಲಿಂಗ್‌ ಕೂಡ ಬಿಟ್ಟು ಚಿತ್ರರಂಗದತ್ತ ಮುಖ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​