ಅಜಿತ್ ‘ಡೇರ್ ಡೆವಿಲ್’ನಿಂದ ಮೋಹನ್‌ಲಾಲ್ ಔಟ್: ಇವರ ಜಾಗಕ್ಕೆ ಬರ್ತಿದ್ದಾರಾ ಕಿಚ್ಚ ಸುದೀಪ್?

Published : Sep 18, 2026, 06:39 PM IST
Dare Devil Movie

ಸಾರಾಂಶ

ನಟ ಅಜಿತ್ ಕುಮಾರ್ ಅಭಿನಯದ 'ಡೇರ್ ಡೆವಿಲ್' ಸಿನಿಮಾದಿಂದ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಹೊರಬಂದಿದ್ದಾರೆ. ಆದಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದ ಲೇಟೆಸ್ಟ್ ಅಪ್‌ಡೇಟ್ ಇಲ್ಲಿದೆ.

'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಮುಗಿದ ಬಳಿಕ ನಟ ಅಜಿತ್ ಕುಮಾರ್ ಮತ್ತೆ ಮೋಟಾರ್ ಸ್ಪೋರ್ಟ್ಸ್ ಕಡೆ ಮುಖ ಮಾಡಿದ್ದಾರೆ. ತಮ್ಮ 'ಅಜಿತ್‌ಕುಮಾರ್ ರೇಸಿಂಗ್' ತಂಡದ ಮೂಲಕ ಲಂಡನ್‌ನಲ್ಲಿ ನಡೆಯುತ್ತಿರುವ ಕಾರ್ ರೇಸಿಂಗ್‌ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಟೂರ್ನಿ ಮುಗಿದ ಮೇಲೆ ಅವರು ಮತ್ತೆ ಸಿನಿಮಾಗಳತ್ತ ಗಮನ ಹರಿಸಲಿದ್ದಾರೆ. ಇದರ ನಡುವೆ ಅಜಿತ್‌ರ ಕಾರ್ ರೇಸಿಂಗ್ ಪಯಣದ ಬಗ್ಗೆ 'ಗ್ಲಾಡಿಯೇಟರ್ಸ್' ಅನ್ನೋ ಸಾಕ್ಷ್ಯಚಿತ್ರ ಕೂಡ ರೆಡಿಯಾಗುತ್ತಿದೆ. ಎ.ಎಲ್. ವಿಜಯ್ ನಿರ್ದೇಶನದ ಈ ಡಾಕ್ಯುಮೆಂಟರಿಗೆ ಜಿ.ವಿ. ಪ್ರಕಾಶ್ ಸಂಗೀತ ನೀಡಿದ್ದಾರೆ.

'ಗುಡ್ ಬ್ಯಾಡ್ ಅಗ್ಲಿ' ಬಳಿಕ ನಿರ್ದೇಶಕ ಆದಿಕ್ ರವಿಚಂದ್ರನ್ ಜೊತೆ ಅಜಿತ್ ಕೈಜೋಡಿಸಿದ್ದಾರೆ. ಅಜಿತ್‌ರ 64ನೇ ಸಿನಿಮಾಗೆ 'ಡೇರ್ ಡೆವಿಲ್' ಅಂತ ಹೆಸರಿಡಲಾಗಿದೆ. ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಶಾಲಿನಿ ಅಜಿತ್‌ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ಈ ಸಿನಿಮಾಗೆ ಮ್ಯೂಸಿಕ್ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ 'ಡೇರ್ ಡೆವಿಲ್' ಚಿತ್ರದ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ.

'ಡೇರ್ ಡೆವಿಲ್' ಶೂಟಿಂಗ್ ಬಗ್ಗೆ ನಿರ್ದೇಶಕ ಆದಿಕ್ ರವಿಚಂದ್ರನ್ ದೊಡ್ಡ ಅಪ್‌ಡೇಟ್ ಕೊಟ್ಟಿದ್ದಾರೆ. ನವೆಂಬರ್ 2ರಿಂದ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಈ ಶೂಟಿಂಗ್ ಆರಂಭವೇ ನಟ ಅಜಿತ್‌ಕುಮಾರ್ ತಮಗೆ ಕೊಟ್ಟ ಹುಟ್ಟುಹಬ್ಬದ ಉಡುಗೊರೆ ಅಂತ ಆದಿಕ್ ಹೇಳಿಕೊಂಡಿದ್ದಾರೆ. ಅಜಿತ್ ಹಾಗೂ ಆದಿಕ್ ರವಿಚಂದ್ರನ್ ಕಾಂಬಿನೇಷನ್‌ನ ಈ ಚಿತ್ರದ ಶೂಟಿಂಗ್ ಶುರುವಾದ ಮೇಲೆ, ಕಥೆ ಹಾಗೂ ತಾರಾಗಣದ ಬಗ್ಗೆ ಇನ್ನಷ್ಟು ಅಪ್‌ಡೇಟ್‌ಗಳು ಹೊರಬೀಳಲಿವೆ.

ಕನ್ನಡಿಗರಿಗೆ ಖುಷಿ

'ಡೇರ್ ಡೆವಿಲ್' ಸಿನಿಮಾದಲ್ಲಿ ಅಜಿತ್ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟಿಸ್ತಾರೆ ಅನ್ನೋ ಮಾತಿತ್ತು. ಆದ್ರೆ ಶೂಟಿಂಗ್ ಶುರುವಾಗುವ ಮುನ್ನವೇ ಅವರು ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ. ಈಗ ಅವರ ಜಾಗಕ್ಕೆ ಕನ್ನಡದ ನಟ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ವಿಜಯ್‌ರ 'ಪುಲಿ' ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಸುದೀಪ್, ಇದೇ ಮೊದಲ ಬಾರಿಗೆ ಅಜಿತ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿರೋದು ಕನ್ನಡಿಗರಿಗೂ ಖುಷಿ ತಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿಮಾ ನಟನೆ ನಿಲ್ಲಿಸಿದ್ಯಾಕೆ ಅನಂತ್ ನಾಗ್? ಕೊನೆಗೂ ಸತ್ಯ ಬಿಚ್ಚಿಟ್ಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ!
'ಹೆಣ್ಣುಮಕ್ಕಳ ಮೇಲಿನ ಒತ್ತಡ ದುಪ್ಪಟ್ಟು': 16ನೇ ವಯಸ್ಸಿನ ಆ ಅನುಭವ ಬಿಚ್ಚಿಟ್ಟ ನಟಿ ಶೋಭಿತಾ